Site icon Vistara News

Actor Chiranjeevi: ದೀಪಾವಳಿ ಪಾರ್ಟಿಯಲ್ಲಿ ʻಜವಾನ್ʼ ಹಾಡಿಗೆ ಚಿರಂಜೀವಿ ಸಖತ್‌ ಸ್ಟೆಪ್ಸ್‌!

Chiranjeevi Raja Kumari dance to Jawan song at Diwali party

ಬೆಂಗಳೂರು: ಅಮೆರಿಕಾ ಗಾಯಕಿ ರಾಜ ಕುಮಾರಿ (Raja Kumar) ಕೆಲ ಸಮಯದಿಂದ ಭಾರತದಲ್ಲಿದ್ದಾರೆ. ಚಿರಂಜೀವಿ (Actor Chiranjeevi), ರಾಮ್ ಚರಣ್, ರಾಣಾ ದಗ್ಗುಬಾಟಿ, ಲಕ್ಷ್ಮಿ ಮಂಚು ಮತ್ತು ಇತರರೊಂದಿಗೆ ದೀಪಾವಳಿಯನ್ನು ಗಾಯಕಿ ರಾಜ ಕುಮಾರಿ ಆಚರಿಸಿದರು. ದೀಪಾವಳಿ ಆಚರಣೆಯ ಪ್ರಮುಖ ಅಂಶವೆಂದರೆ ಚಿರಂಜೀವಿ ಅವರು ಜವಾನ್ ಶೀರ್ಷಿಕೆ ಗೀತೆಗೆ ಸಖತ್‌ ಸ್ಟೆಪ್ಸ್‌ ಹಾಕಿದ್ದಾರೆ. ಚಿರಂಜೀವಿ ಅವರು ರಾಜ ಕುಮಾರಿ ಜತೆಯಲ್ಲಿ ಉತ್ಸಾಹದಿಂದ ನೃತ್ಯ ಮಾಡುತ್ತಿರುವ ವಿಡಿಯೊ ಇದೀಗ ವೈರಲ್‌ ಆಗಿದೆ.

ದೀಪಾವಳಿ ಆಚರಣೆಯ ಇತರ ಫೋಟೊಗಳ ಜತೆಗೆ ಡ್ಯಾನ್ಸ್‌ ವಿಡಿಯೊವನ್ನು ಹಂಚಿಕೊಂಡ ರಾಜ ಕುಮಾರಿ ಅವರು ಇನ್‌ಸ್ಟಾದಲ್ಲಿ ಹೀಗೆ ಬರೆದಿದ್ದಾರೆ: “ಅತ್ಯಂತ ಸುಂದರವಾದ ದೀಪಾವಳಿಗಾಗಿ ಹೈದರಾಬಾದ್‌ಗೆ ಧನ್ಯವಾದಗಳು. ನನ್ನ ಸುತ್ತಮುತ್ತಲಿನ ಸ್ನೇಹಿತರೊಂದಿಗೆ ತೆಲುಗು ಮಾತನಾಡುವುದನ್ನು ಕೇಳಲು ತುಂಬಾ ಸಂತೋಷವಾಗಿದೆ. ಮೆಗಾಸ್ಟಾರ್ ಚಿರಂಜೀವಿ ಅವರೊಂದಿಗೆ ಡ್ಯಾನ್ಸ್‌ ಮಾಡುವ ಈ ಕ್ಷಣವನ್ನು ಮರೆಯಲು ಸಾಧ್ಯವಿಲ್ಲʼʼ ಎಂದು ಬರೆದುಕೊಂಡಿದ್ದಾರೆ.

ರಾಜ ಕುಮಾರಿ ಜತೆ ಚಿರಂಜೀವಿ ಮಾಡಿದ ಡ್ಯಾನ್ಸ್ ಕಂಡು ಅಭಿಮಾನಿಗಳು ಸಂತಸ ಹೊರಹಾಕಿದ್ದಾರೆ. ರಾಜ ಕುಮಾರಿ ಅವರು ಚಿರಂಜೀವಿ, ರಾಮ್ ಚರಣ್, ರಾಣಾ ದಗ್ಗುಬಾಟಿ, ಲಕ್ಷ್ಮಿ ಮಂಚು ಮತ್ತು ಇತರ ಸ್ನೇಹಿತರ ಜತೆ ಸೆಲ್ಫಿಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Actor Chiranjeevi: ಚಿರಂಜೀವಿ ವಿರುದ್ಧ ಸುಳ್ಳು ಆರೋಪ; ದಂಪತಿಗೆ 12 ವರ್ಷಗಳ ನಂತರ ಜೈಲು ಶಿಕ್ಷೆ

ರಾಜ ಕುಮಾರಿ ನಿಜವಾದ ಹೆಸರು ಶ್ವೇತಾ ಯಲ್ಲಪ್ರಗಡ ರಾವ್. ಹೈದರಾಬಾದ್‌ನಲ್ಲಿರುವ ಸಂಬಂಧಿಕರ ಮನೆಗೂ ಅವರು ಭೇಟಿ ನೀಡಿದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಚಿರಂಜೀವಿ ನೀಡಿದ ಪಾರ್ಟಿಯಲ್ಲಿ ನಮ್ರತಾ ಶಿರೋಡ್ಕರ್, ಸ್ನೇಹಾ ರೆಡ್ಡಿ, ಉಪಾಸನಾ ಜೊತೆಗೆ ಜೂ. ಎನ್‌ಟಿಆರ್‌ ಪತ್ನಿ ಲಕ್ಷ್ಮಿ ಪ್ರಣತಿ ಭಾಗವಹಿಸಿದ್ದರು.

Exit mobile version