ಬೆಂಗಳೂರು: ಖ್ಯಾತ ನಟಿ ಶೃತಿ ಮಗಳು ಗೌರಿ ಜೊತೆ, ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಪುತ್ರ ರಾಯನ್ ಭರ್ಜರಿ ಸ್ಟೆಪ್ಸ್ ಹಾಕಿ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ವಿಕ್ರಾಂತ್ ರೋಣ ಚಿತ್ರದ ಎಕ್ಕ ಸಕ್ಕ ಹಾಡಿಗೆ ರಾಯನ್‌ನನ್ನು ಕಂಕಳಲ್ಲಿ ಕೂರಿಸಿಕೊಂಡು ಗೌರಿ ಡಾನ್ಸ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಗೌರಿ ಇದನ್ನು ಪೋಸ್ಟ್ ಮಾಡಿ ಎಷ್ಟು ಕ್ಯೂಟ್ ಅಲ್ವಾ ಎಂದಿದ್ದಾರೆ. ಇದಕ್ಕೆ ಮೇಘನಾ ರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ʼʼಶಿಶುಪಾಲಕಿ ಆದ್ರೆ ಇದೆ ಆಗೋದುʼʼ ಎಂದು ಮೇಘನಾ ತಮಾಷೆ ಮಾಡಿದ್ದಾರೆ.
ಈ ಹಿಂದೆ ಅಪ್ಪ ಅಮ್ಮ ಎಂದು ತೊದಲು ನುಡಿಗಳಿಂದ ಗಮನ ಸೆಳೆದಿದ್ದ ರಾಯನ್ ಇದೀಗ ಡ್ಯಾನ್ಸ್ ಮೂಲಕ ಸರ್ಜಾ ಫ್ಯಾನ್ಸ್‌ಗೆ ಮನರಂಜನೆ ನೀಡಿದ್ದಾನೆ.
ಇದನ್ನೂ ಓದಿ: ಅಮ್ಮ ಬದಲು ಅಪ್ಪ ಎಂದ ರಾಯನ್ ಸರ್ಜಾ ವಿಡಿಯೋ ನೋಡಿದ ನೆಟ್ಟಿಗರು ಫಿದಾ