Site icon Vistara News

Citadel Trailer : ಬಿಡುಗಡೆಯಾಯ್ತು ಪ್ರಿಯಾಂಕಾ ಅಭಿನಯದ ʼಸಿಟಾಡೆಲ್‌ʼ ಟ್ರೈಲರ್; ಹೇಗಿದೆ ನೋಡಿ ಇಲ್ಲಿ!

#image_title

ಮುಂಬೈ: ನಟಿ ಪ್ರಿಯಾಂಕಾ ಚೋಪ್ರಾ ನಟನೆಯ ಬಹು ನಿರೀಕ್ಷಿತ ಹಾಲಿವುಡ್‌ ಸೀರಿಸ್‌ ಆಗಿರುವ ʼಸಿಟಾಡೆಲ್‌ʼನ ಟ್ರೈಲರ್‌ (Citadel Trailer) ಸೋಮವಾರ ಬಿಡುಗಡೆಯಾಗಿದೆ. ಈ ಟ್ರೈಲರ್ ಒಂದು ವಾರ ಹಿಂದೆಯೇ ಬಿಡುಗಡೆಯಾಗಬೇಕಿತ್ತಾದರೆ ಕಾರಣಾಂತರಗಳಿಂದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿತ್ತು.‌

ಇದನ್ನೂ ಓದಿ: Priyanka Chopra: `ಸಿಟಾಡೆಲ್’ ಫಸ್ಟ್‌ ಲುಕ್‌ ಔಟ್: ರಗಡ್‌ ಲುಕ್‌ನಲ್ಲಿ ಪ್ರಿಯಾಂಕ ಚೋಪ್ರಾ
ಅಮೆಜಾನ್‌ ಪ್ರೈಮ್‌ನಲ್ಲಿ ಬರಲಿರುವ ಈ ಸೀರಿಸ್‌ನಲ್ಲಿ ಪ್ರಿಯಾಂಕಾ ಅವರ ಜತೆಯಲ್ಲಿ ರಿಚರ್ಡ್‌ ಮ್ಯಾಡೆನ್‌ ಮತ್ತು ಸ್ಟಾನ್ಲಿ ಟುಸಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರುಸ್ಸೋ ಬ್ರದರ್ಸ್‌ನ AGBO ಮತ್ತು ಡೇವಿಡ್ ವೇಲ್ ಅವರು ಈ ಸರಣಿಗೆ ಬಂಡವಾಳ ಹಾಕಿದ್ದಾರೆ. ಇದೊಂದು ಪತ್ತೆದಾರಿ ಥ್ರಿಲ್ಲರ್‌ ಸೀರಿಸ್‌ ಎನ್ನುವುದು ಟ್ರೈಲರ್‌ನಿಂದಾಗಿ ತಿಳಿದುಬಂದಿದೆ.


ಸಿಟಾಡೆಲ್‌ ಒಂದು ಬೇಹುಗಾರಿಕೆ ಸಂಸ್ಥೆಯಾಗಿರುತ್ತದೆ. ಆ ಸಂಸ್ಥೆ ಮುಳುಗಡೆಯಾದ ನಂತರ ಪ್ರಿಯಾಂಕಾ ಮತ್ತು ರಿಚರ್ಡ್‌ ಬೇರೆ ಗುರುತಿನೊಂದಿಗೆ ಬದುಕು ಕಟ್ಟಿಕೊಂಡಿರುತ್ತಾರೆ. ಸ್ನೇಹಿತರೊಬ್ಬರಿಗೆ ಸಂಕಷ್ಟ ಎದುರಾದಾಗ ಈ ಜೋಡಿ ಮತ್ತೆ ಬೇಹುಗಾರಿಕೆಗೆ ಇಳಿದು ಕೆಲಸ ಮಾಡುವುದು ಈ ಸೀರಿಸ್‌ನ ಕಥೆಯಾಗಿದೆ.

ಇದನ್ನೂ ಓದಿ: Actress Samantha : ಸಿನಿಮಾ ಸೆಟ್‌ನಲ್ಲಿ ಸಾಹಸ ದೃಶ್ಯದ ವೇಳೆ ನಟಿ ಸಮಂತಾಗೆ ಗಾಯ
ಸಿಟಾಡೆಲ್ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಸೇರಿದಂತೆ ಬಹು ಭಾಷೆಗಳಲ್ಲಿ ತೆರೆ ಕಾಣಲಿದೆ. ಈ ಸರಣಿಯು ಆರು ಸಂಚಿಕೆಗಳಲ್ಲಿ ಬರಲಿದೆ. ಮೊದಲ ಎರಡು ಸಂಚಿಕೆಗಳು ಏಪ್ರಿಲ್ 28ರಂದು ತೆರೆ ಕಾಣಲಿವೆ. ನಂತರ ಪ್ರತಿ ವಾರ ಒಂದು ಸಂಚಿಕೆ ಬಿಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ.

Exit mobile version