Site icon Vistara News

Guru Shishyaru | ಶರಣ್‌ ಅಭಿನಯದ ಗುರು ಶಿಷ್ಯರು ಚಿತ್ರತಂಡಕ್ಕೆ ಸಿಎಂ ಬೊಮ್ಮಾಯಿ ಪ್ರಶಂಸೆ

Guru Shishyaru

ಬೆಂಗಳೂರು : ಸ್ಯಾಂಡಲ್‌ವುಡ್‌ ನಟ ಶರಣ್‌ ಹಾಗೂ ನಿಶ್ವಿಕಾ ನಾಯ್ಡು ಅಭಿನಯದ ಗುರು ಶಿಷ್ಯರು ಸಿನಿಮಾ (Guru Shishyaru) ಸೆ.23ಕ್ಕೆ ರಾಜ್ಯಾದ್ಯಂತ ಬಿಡುಗಡೆಗೊಂಡಿದೆ. ಜಡೇಶ್‌ ಕುಮಾರ್‌ ಹಂಪಿ ನಿರ್ದೇಶನದ ಈ ಚಿತ್ರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಂಸಿದ್ದಾರೆ. ಬೊಮ್ಮಾಯಿ ಜತೆಗಿನ ಫೋಟೊವನ್ನು ಶರಣ್‌ ಇನ್‌ಸ್ಟಾ ಮೂಲಕ ಹಂಚಿಕೊಂಡಿದ್ದಾರೆ.

ಫೋಟೊ ಜತೆ ʻʻಈ ಚಿತ್ರದಲ್ಲಿ ಖೋಖೋ ಆಟವನ್ನು ಹೈಲೈಟ್‌ ಮಾಡಿ ತೋರಿಸಿದಕ್ಕೆ ನಮ್ಮ ತಂಡವನ್ನು ಪ್ರಶಂಶಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಧನ್ಯವಾದಗಳು. ತಮ್ಮ ಹಲವಾರು ಕೆಲಸದ ನಡುವೆಯೂ ನಮ್ಮ ತಂಡವನ್ನು ಭೇಟಿ ಮಾಡಿದ್ದು ಖುಷಿ ನೀಡಿದೆʼʼಎಂದು ಬರೆದುಕೊಂಡಿದ್ದಾರೆ. ಗುರುವಾರ ಈ ಸಿನಿಮಾ ಒಂದು ವಾರವನ್ನು ಪೂರೈಸುತ್ತಿದೆ.

ಇದನ್ನೂ ಓದಿ | Guru Shishyaru | ರಾಜ್ಯಾದ್ಯಂತ ಗುರು-ಶಿಷ್ಯರು ಆಟ ಶುರು: ಇಲ್ಲಿದೆ ಸ್ಟಾರ್‌ ಮಕ್ಕಳ ದಂಡು!

ಮುಖ್ಯ ಚಿತ್ರಮಂದಿರವನ್ನು ಹೊರತುಪಡಿಸಿ ರಾಜ್ಯದ ಉಳಿದೆಡೆ ಸಿನಿಮಾ ಉತ್ತಮ ಪ್ರದರ್ಶನಗಳನ್ನು ಕಾಣುತ್ತಿದೆ. ಮುಖ್ಯಮಂತ್ರಿ ಬೊಮ್ಮಾಯಿ ಶೀಘದ್ರಲ್ಲಿ ಚಿತ್ರವನ್ನು ವೀಕ್ಷಿಸಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬಂದಿವೆ.

ಚಿತ್ರದಲ್ಲಿ ಕನ್ನಡದ ನಟರಾದ ಶರಣ್, ನವೀನ್ ಕೃಷ್ಣ, ಬುಲೆಟ್ ಪ್ರಕಾಶ್, ರವಿಶಂಕರ್ ಗೌಡ ಹಾಗೂ ನೆನಪಿರಲಿ ಪ್ರೇಮ್ ಪುತ್ರರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.

ಇದನ್ನೂ ಓದಿ | Guru Shishyaru | ಹಿರಿಯ ನಟ ಶ್ರೀನಿವಾಸಮೂರ್ತಿ ಮೊಮ್ಮಗ ಚಂದನವನಕ್ಕೆ ಎಂಟ್ರಿ: ಗುರು ಶಿಷ್ಯರು ಚಿತ್ರದಲ್ಲಿ ಅಭಿನಯ

Exit mobile version