Site icon Vistara News

Neel Nanda Dies: ಖ್ಯಾತ ಸ್ಟ್ಯಾಂಡ್-ಅಪ್ ಕಾಮಿಡಿಯನ್ ನೀಲ್ ನಂದಾ ಇನ್ನಿಲ್ಲ

Comedian Neel Nanda

ಬೆಂಗಳೂರು; ಲಾಸ್ ಏಂಜಲೀಸ್ (Los Angeles) ಮೂಲದ ಸ್ಟ್ಯಾಂಡ್-ಅಪ್ ಕಾಮಿಡಿಯನ್ ನೀಲ್ ನಂದಾ (Neel Nanda Dies) ನಿಧನರಾಗಿದ್ದಾರೆ. ಅವರಿಗೆ ಕೇವಲ 32 ವರ್ಷ ವಯಸ್ಸಾಗಿತ್ತು. ಜಿಮ್ಮಿ ಕಿಮ್ಮೆಲ್ ಲೈವ್ (Jimmy Kimmel Live) ಮತ್ತು ಕಾಮಿಡಿ ಸೆಂಟ್ರಲ್‌ನ ಆಡಮ್ ಡಿವೈನ್ಸ್ ಹೌಸ್ ಪಾರ್ಟಿಯಲ್ಲಿನ (Comedy Central’s Adam Devine’s House Party) ಪ್ರದರ್ಶನಕ್ಕಾಗಿ ಅವರು ಜನಮನ್ನಣೆ ಗಳಿಸಿದ್ದರು.

ನೀಲ್ ನಂದಾ ನಿಧನರಾಗಿರುವ ಬಗ್ಗೆ ಅವರ ಮ್ಯಾನೇಜರ್ ಗ್ರೆಗ್ ವೈಸ್ ಮಾಧ್ಯಮಕ್ಕೆ ಮಾಹಿತಿ ಹಂಚಿಕೊಂಡಿದ್ದಾರೆ. ನೀಲ್ ನಂದಾ ನಿಧನರಾಗಿರುವ ಕಾರಣ ಬಗ್ಗೆ ಇನ್ನೂ ಬಹಿರಂಗವಾಗಿಲ್ಲ. ಅವರ ನಿಧನದ ನಂತರ, ಹಲವಾರು ಖ್ಯಾತ ಹಾಸ್ಯಗಾರರು ಪೋಸ್ಟ್‌ ಮಾಡಿ ಸಂತಾಪ ಸೂಚಿಸುತ್ತಿದ್ದಾರೆ. ಅವರು ಜಾರ್ಜಿಯಾದ ಅಟ್ಲಾಂಟಾದಲ್ಲಿ ಭಾರತೀಯ ವಲಸಿಗ ದಂಪತಿಗೆ ಜನಿಸಿದ್ದರು ನೀಲ್‌ ಅವರಿಗೆ ವಿವಿಧ ಹಾಸ್ಯ ಕ್ಲಬ್‌ಗಳು ಮತ್ತು ಅವರ ಸಹೋದ್ಯೋಗಿಗಳು, ಫ್ಯಾನ್ಸ್‌ ಸೋಷಿಯಲ್‌ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ. ನೀಲ್ ನಂದಾ ಇತ್ತೀಚೆಗಷ್ಟೇ ತಮ್ಮ 32ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು.

ಇದನ್ನೂ ಓದಿ: Dawood Ibrahim: ದಾವೂದ್ ಇಬ್ರಾಹಿಂ ನಿಧನ?; ಫ್ಯಾಕ್ಟ್‌ಚೆಕ್‌ ಹೇಳೋದೇನು?

ನೀಲ್ ನಂದಾ ಫ್ಯಾನ್ಸ್‌ ಸೋಷಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಮಾಡಿ ʻʻಈ ಸುದ್ದಿ ಕೇಳಿ ಆಘಾತವಾಯ್ತು. ಪಾಸಿಟಿವ್‌ ಶಕ್ತಿ ಅವರಾಗಿದ್ದರು. ಹಾಸ್ಯಕ್ಕೆ ಒಂದು ದೊಡ್ಡ ನಷ್ಟವಾಗಿದೆʼʼಬರೆದುಕೊಂಡಿದ್ದಾರೆ. ಲಾಸ್ ಏಂಜಲೀಸ್ ನಗರದಲ್ಲಿ ಟಾಪ್ 10 ಸ್ಟ್ಯಾಂಡ್-ಅಪ್ ಕಾಮಿಡಿ ಶೋಗಳಲ್ಲಿ ನೀಲ್ ನಂದಾ ಶೋ ಕೂಡ ಹೆಸರುವಾಸಿಯಾಗಿತ್ತು.

Exit mobile version