Site icon Vistara News

Comedy khiladi Nayana: ಹೆಣ್ಣು ಮಗುವಿಗೆ ತಾಯಿಯಾದ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಯನಾ!

Comedy khiladi Nayana blessed with baby girl

ಬೆಂಗಳೂರು: ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟಿ ನಯನಾ (Comedy khiladi Nayana) ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಕನ್ನಡ ರಾಜ್ಯೋತ್ಸವದ ದಿನದಂದು ಮಗುವನ್ನು ಮನೆಗೆ ಬರಮಾಡಿಕೊಂಡಿದ್ದಾರೆ. ಪತಿ ಮಗು ಎತ್ತಿಕೊಂಡು ಮುದ್ದಾಡುತ್ತಿರುವ ಫೋಟೊ ಅಪ್ಲೋಡ್ ಮಾಡಿದ್ದಾರೆ. ಸಿನಿ ಸ್ನೇಹಿತರು ನಟಿಗೆ ಶುಭ ಕೋರುತ್ತಿದ್ದಾರೆ.

ಪತಿ ಮಗುವನ್ನು ಎತ್ತಿಕೊಂಡಿರುವ ಫೋಟೊವನ್ನು ಶೇರ್ ಮಾಡಿರುವ ನಯನಾ, ʻʻಮಗುವಿಗೆ ನಿಮ್ಮ ಆಶೀರ್ವಾದವಿರಲಿ ಎಂದು ಕೋರಿದ್ದಾರೆ. ನನ್ನ ಜೀವನದ ಮುಖ್ಯವಾದ ವ್ಯಕ್ತಿಗಳು ಒಂದೇ ಫ್ರೇಮ್‌ನಲ್ಲಿದ್ದಾರೆ. ಮನೆಗೆ ಸ್ವಾಗತ ನಮ್ಮ ಮುದ್ದಾದ ಲಕ್ಷ್ಮಿ’ ಎಂದು ನಯನಾ ಬರೆದುಕೊಂಡಿದ್ದಾರೆ.

ಆಸ್ಪತ್ರೆಯಲ್ಲಿ ನಯನಾ ಅವರ ಪತಿ ಮಗುವನ್ನು ಮುದ್ದಾಡುತ್ತಿದ್ದಾರೆ. ‘ಹೆಣ್ಣು ಮಗು ಬೇಕು ಎನ್ನುವುದು ಎಲ್ಲರ ಆಸೆ ಅದರಂತೆ ಲಕ್ಷ್ಮಿ ಬಂದಿದ್ದಾಳೆ’ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ʻದ್ಯಾವಮ್ಮ ನ ಮನೆಗೆ ಯಲ್ಲಮ್ಮ ನ ಆಗಮನʼಎಂತಲೂ ಕಮೆಂಟ್‌ ಮಾಡಿದ್ದಾರೆ.

ನಯನಾ ಬೆಂಗಳೂರು ಮೂಲದ ಉದ್ಯಮಿ ಶರತ್ ಜತೆ ದಾಂಪತ್ಯಕ್ಕೆ ಕಾಲಿಟ್ಟರು. 9 ವರ್ಷಗಳ ಕಾಲ ಪ್ರೀತಿಸಿ ಮದುವೆಯಾದವರು. ಈ ಹಿಂದೆ ಬೊಂಬಾಟ್ ಭೋಜನದ ಬಸುರಿ ಬಯಕೆ ವಿಶೇಷ ಕಾರ್ಯಕ್ರಮದಲ್ಲಿ ನಯನಾ ಭಾಗಿಯಾಗಿದ್ದರು. ಈ ಮೂಲಕ ನಟಿ ಗರ್ಭಿಣಿ ಎಂಬುದು ರಿವೀಲ್‌ ಆಗಿತ್ತು. ತಾಯಿಯಾಗುತ್ತಿರುವ ನಯನಾ ಅವರಿಗೆ ಸ್ಟಾರ್ ಸುವರ್ಣಾ ವಾಹಿನಿಯಲ್ಲಿ ಪ್ರಸಾರವಾಗುವ ಬೊಂಬಾಟ್ ಭೋಜನ ಕಾರ್ಯಕ್ರಮದಲ್ಲಿ ಬಸುರಿ ಬಯಕೆ ಈಡೇರಿಸಲಾಗಿತ್ತು.

ಇದನ್ನೂ ಓದಿ: Comedy khiladi Nayana: ಮುದ್ದು ಕೃಷ್ಣನನ್ನು ಹಿಡಿದು ಫೋಟೊಶೂಟ್‌ ಮಾಡಿಸಿದ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಯನಾ!

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು (Comedy Khiladigalu) ರಿಯಾಲಿಟಿ ಶೋ ಮೂಲಕ ನಯನಾ ಕನ್ನಡಿಗರಿಗೆ ಪರಿಚಿತರಾದರು. ಅದ್ಭುತ ಹಾಸ್ಯದ ಮೂಲಕ ನಯನಾ ಕನ್ನಡಿಗರ ಹೃದಯ ಗೆದ್ದರು.

Exit mobile version