Site icon Vistara News

Comedy khiladi Nayana: ಮುದ್ದು ಕೃಷ್ಣನನ್ನು ಹಿಡಿದು ಫೋಟೊಶೂಟ್‌ ಮಾಡಿಸಿದ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಯನಾ!

Comedy khiladi Nayana
ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ (Comedy khiladi Nayana) ಇದೀಗ ಚೊಚ್ಚಲ ಮಗುವಿಗೆ ತಾಯಿ ಆಗಲಿದ್ದಾರೆ. ಸದ್ಯ ನಯನಾ ಟ್ರೆಡಿಷನಲ್ ಆಗಿ ಪ್ರೆಗ್ನೆನ್ಸಿ ಫೋಟೊಶೂಟ್ ಮಾಡಿಸಿದ್ದಾರೆ. ಸೀರೆ ಧರಿಸಿ ಮಿಂಚಿದ್ದಾರೆ. ಇದೀಗ ಈ ಫೋಟೊ ಹಾಗೂ ವಿಡಿಯೊಗಳು ವೈರಲ್‌ ಆಗಿದೆ.
ನಯನಾ ಅವರು ತಾಯಿಯಾಗುತ್ತಿರುವ ವಿಚಾರವನ್ನು ಬೊಂಬಾಟ್ ಭೋಜನ ಕಾರ್ಯಮದಲ್ಲಿ ಮೊದಲಿಗೆ ತಿಳಿಸಿದ್ದರು. ಬಸುರಿ ಬಯಕೆ ವಿಶೇಷ ಕಾರ್ಯಕ್ರಮದಲ್ಲಿ ನಯನಾ ಭಾಗಿಯಾಗಿದ್ದರು.

ಇದನ್ನೂ ಓದಿ: Comedy khiladi Nayana: ಮೊದಲ ಮುಗುವಿನ ನಿರೀಕ್ಷೆಯಲ್ಲಿರುವ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಯನಾ!

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು (Comedy Khiladigalu) ರಿಯಾಲಿಟಿ ಶೋ ಮೂಲಕ ನಯನಾ ಕನ್ನಡಿಗರಿಗೆ ಪರಿಚಿತರಾದರು. ಅದ್ಭುತ ಹಾಸ್ಯದ ಮೂಲಕ ನಯನಾ ಕನ್ನಡಿಗರ ಹೃದಯ ಗೆದ್ದರು. ನಯನಾ ಅವರಿಗೆ ಈಗ 8 ತಿಂಗಳು. ನಯನಾ ಬೆಂಗಳೂರು ಮೂಲದ ಉದ್ಯಮಿ ಶರತ್ ಜತೆ ದಾಂಪತ್ಯಕ್ಕೆ ಕಾಲಿಟ್ಟರು. 9 ವರ್ಷಗಳ ಕಾಲ ಪ್ರೀತಿಸಿ ಮದುವೆಯಾದವರು.
ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರೀ ರೇಣುಕಾ ಯಲ್ಲಮ್ಮ ಧಾರಾವಾಹಿಯಲ್ಲಿ ಯಲ್ಲಮ್ಮನ ತಾಯಿ ದೇವಮ್ಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ನಯನಾ ಕಾಮಿಡಿ ಕಿಲಾಡಿಗಳು ಶೋ ಮೂಲಕ ಮೊದಲಿಗೆ ಕಿರುತೆರೆಗೆ ಆಗಮಿಸಿದರು. ಅದಾದ ಬಳಿಕ ಇವರು ಮಜಾ ಟಾಕೀಸ್‌ನಲ್ಲಿ ಕೂಡ ಕಾಣಿಸಿಕೊಂಡರು.
Exit mobile version