Site icon Vistara News

Jailer Movie : ರಜನಿಕಾಂತ್‌ ನಟನೆಯ ʼಜೈಲರ್‌ʼ ಸಿನಿಮಾ ಬಿಡುಗಡೆ ದಿನ ಕಚೇರಿಗಳಿಗೆ ರಜೆ! ಉಚಿತ ಟಿಕೆಟ್‌!!

companies give holiday on august 10th

ಬೆಂಗಳೂರು: ಹಬ್ಬಗಳಲ್ಲಿ, ಸರ್ಕಾರಿ ರಜಾ ದಿನಗಳಲ್ಲಿ ಕಚೇರಿಗಳಿಗೆ ರಜೆ ನೀಡುವುದು ಮಾಮೂಲಿ. ಇನ್ನು ಕೆಲವು ಸಂಸ್ಥೆಗಳು ತಮ್ಮ ಮಾಲೀಕರ ಜೀವನದ ವಿಶೇಷ ದಿನಗಳಂದು ಸಂಸ್ಥೆಯ ಸಿಬ್ಬಂದಿಗೆ ರಜೆಗಳನ್ನು ಘೋಷಿಸುತ್ತವೆ. ಆದರೆ ಇದೀಗ ವಿಶೇಷವೆನ್ನಿಸುವಂತೆ ಬೆಂಗಳೂರು ಮತ್ತು ಚೆನ್ನೈನ ಕೆಲವು ಕಂಪನಿಗಳು ಆಗಸ್ಟ್‌ 10ರಂದು ರಜೆ ಘೋಷಿಸಿವೆ! ಅದಕ್ಕೆ ಕಾರಣ ರಜನಿಕಾಂತ್‌ ಅವರ ಬಹುನಿರೀಕ್ಷಿತ ಚಿತ್ರ ಜೈಲರ್‌(Jailer Movie) ಬಿಡುಗಡೆ!

ನೆಲ್ಸನ್‌ ದಿಲೀಪ್‌ ಕುಮಾರ್‌ ನಿರ್ದೇಶನದ, ರಜನಿಕಾಂತ್‌ ನಟನೆಯ ಸಿನಿಮಾ ʼಜೈಲರ್‌ʼ ಇದೇ ಆಗಸ್ಟ್‌ 10ರಂದು ಬಿಡುಗಡೆಯಾಗುತ್ತಿದೆ. ಈ ಸಿನಿಮಾ ನೋಡಲೆಂದು ರಜನಿಕಾಂತ್‌ ಅವರ ಅಭಿಮಾನಿಗಳು ತುದಿಗಾಲಿನಲ್ಲಿ ಕಾದು ಕುಳಿತಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರು ಹಾಗೂ ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿರುವ ಕೆಲವು ಕಂಪನಿಗಳು ತಮ್ಮ ಸಿಬ್ಬಂದಿಗೆ ರಜೆ ಘೋಷಿಸಿವೆ. ” ಹೇಗೂ ಆ ದಿನದಂದು ಬಹುತೇಕ ಸಿಬ್ಬಂದಿ ಸುಮ್ಮನೆ ಕಾರಣ ಕೊಟ್ಟು ರಜೆ ಹಾಕುತ್ತಾರೆ. ಇದರಿಂದ ದೈನಂದಿನ ಕೆಲಸಕ್ಕೂ ತೊಂದರೆ. ಅದನ್ನು ತಪ್ಪಿಸಲೆಂದು ನಾವೇ ಸಿಬ್ಬಂದಿಗೆ ರಜೆ ಕೊಡುತ್ತಿದ್ದೇವೆ. ಜತೆಗೆ ಸಿಬ್ಬಂದಿಯೂ ಸಿನಿಮಾ ನೋಡಿ ಬಂದು ಉತ್ಸಾಹದಿಂದ ಕೆಲಸ ಮಾಡುತ್ತಾರೆʼʼ ಎಂದು ಅಭಿಪ್ರಾಯಪಟ್ಟಿದ್ದಾರೆ ಕಂಪನಿಗಳ ಮುಖ್ಯಸ್ಥರು.

ಇದನ್ನೂ ಓದಿ: Viral News : ಸೊಸೆಗೆ ತನ್ನ ಕಿಡ್ನಿಯನ್ನೇ ಕೊಟ್ಟ 70 ವರ್ಷದ ಅತ್ತೆ!
ಈ ರೀತಿಯಲ್ಲಿ ಆಗಸ್ಟ್‌ 10ರಂದು ಸಿಬ್ಬಂದಿಗೆ ರಜೆ ಘೋಷಿಸಿರುವ ಕಂಪನಿಗಳಲ್ಲಿ ವುನೊ ಅಕ್ವಾ ಕೇರ್‌ ಸಂಸ್ಥೆಯೂ ಸೇರಿದೆ. ಈ ಸಂಸ್ಥೆ ರಜೆ ಘೋಷಣೆ ಬಗ್ಗೆ ನೀಡಿರುವ ನೋಟಿಸ್‌ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಭಾರೀ ವೈರಲ್‌ ಅಗಿವೆ.

ಇನ್ನು ಕೆಲವು ಕಂಪನಿಗಳು ಆಗಸ್ಟ್‌ 10ರಂದು ಬಿಡುಗಡೆಯಾಗುತ್ತಿರುವ ಜೈಲರ್‌ ಸಿನಿಮಾ ಪ್ರಯುಕ್ತ ಕಂಪನಿಗೆ ರಜೆ ಘೋಷಿಸುವುದಷ್ಟೇ ಅಲ್ಲದೆ, ಸಿನಿಮಾದ ಟಿಕೆಟ್‌ಗಳನ್ನೂ ಸಿಬ್ಬಂದಿಗೆ ಉಚಿತವಾಗಿ ನೀಡಿವೆಯಂತೆ. ಈ ವಿಚಾರ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ನಮ್ಮ ಕಂಪನಿಯೂ ಈ ರೀತಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ರಜೆ ಸಿಗದ ಅನೇಕ ಸಂಸ್ಥೆಗಳ ಸಿಬ್ಬಂದಿ ಗೊಣಗಲಾರಂಭಿಸಿದ್ದಾರೆ.

ಇದನ್ನೂ ಓದಿ: Viral Video: ರಕ್ಕಸ ಗಾತ್ರದ ಅಲೆಗಳ ಮಧ್ಯೆ ಈಜಿ ದಡ ಸೇರಿದ ಮಹಿಳೆ; ದೂರ ತಿಳಿದರೆ ಅಚ್ಚರಿ ಖಚಿತ!
ಎರಡು ವರ್ಷಗಳ ಕಾಲ ತೆರೆ ಮೇಲೆ ಕಾಣಿಸಿಕೊಳ್ಳದ ರಜನಿಕಾಂತ್‌ ಅವರು ಜೈಲರ್‌ ಸಿನಿಮಾ ಮೂಲಕ ಮತ್ತೆ ಅಬ್ಬರಿಸಲು ಆರಂಭಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ನಿವೃತ್ತ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಜೈಲರ್‌ ಸಿನಿಮಾದ ಟ್ರೈಲರ್‌ ಅನ್ನು ಆಗಸ್ಟ್‌ ಆರಂಭದಲ್ಲಿ ಬಿಡುಗಡೆ ಮಾಡಲಾಯಿತು. ಟ್ರೈಲರ್‌ ಜನರಲ್ಲಿದ್ದ ಕುತೂಹಲವನ್ನು ಇನ್ನಷ್ಟು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ.

ಸಿನಿಮಾದಲ್ಲಿ ರಜನಿಕಾಂತ್‌ ಜತೆಯಲ್ಲಿ ನಟಿ ತಮನ್ನಾ ಭಾಟಿಯಾ, ಪ್ರಿಯಾಂಕಾ ಮೋಹನ್‌, ಬಾಲಿವುಡ್‌ನ ಜಾಕಿ ಶರಾಫ್‌, ಕನ್ನಡದ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌, ರಮ್ಯಾ ಕೃಷ್ಣನ್‌, ಯೋಗಿ ಬಾಬು, ವಸಂತ ರವಿ, ವಿನಾಯಕನ್‌ ನಟಿಸಿದ್ದಾರೆ. ಇನ್ನು ಅತಿಥಿ ಪಾತ್ರದಲ್ಲಿ ಮಲಯಾಳಂನ ಮೋಹನ್‌ಲಾಲ್‌ ಕೂಡ ನಟಿಸಿದ್ದಾರೆ. ಈ ಚಿತ್ರ ಭಾರೀ ನಿರೀಕ್ಷೆ ಹುಟ್ಟಿಸಿದೆ.

Exit mobile version