Site icon Vistara News

ಸಿನಿಮಾ ಮುಗಿಸದೆ ಇದ್ದರೆ ನೀನೇ ಕಾಣ್ಸಲ್ಲ, ಹಾಗೆ ಮಾಡಿಬಿಡ್ತೀನಿ: ನಿರ್ಮಾಪಕನಿಗೆ ನಟ ದರ್ಶನ್​ ಧಮ್ಕಿ

Darshan
http://vistaranews.com/wp-content/uploads/2022/08/WhatsApp-Audio-2022-08-09-at-9.33.16-AM.mp3

ಬೆಂಗಳೂರು: “ಭಗವಾನ್​ ಶ್ರೀಕೃಷ್ಣ ಪರಮಾತ್ಮʼ ಎಂಬ ಚಿತ್ರದ ನಿರ್ಮಾಪಕ ಭರತ್​ ಎಂಬುವರಿಗೆ ಬೆದರಿಕೆ ಹಾಕಿದ ಆರೋಪದಡಿ ನಟ ದರ್ಶನ್​ ವಿರುದ್ಧ ಕೆಂಗೇರಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಚಿತ್ರದಲ್ಲಿ ಧ್ರುವನ್​ ಎಂಬ ನಟ ನಾಯಕನಾಗಿ ಅಭಿನಯಿಸಿದ್ದು, ಈತನೇ ದರ್ಶನ್​​ಗೆ ಹೇಳಿ ಭರತ್​ಗೆ ಕರೆ ಮಾಡಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಭರತ್​ ನಿರ್ಮಾಣ ಮಾಡುತ್ತಿದ್ದ ಭಗವಾನ್​ ಶ್ರೀಕೃಷ್ಣ ಪರಮಾತ್ಮ ಸಿನಿಮಾ ಹಣಕಾಸಿನ ತೊಂದರೆಯಿಂದ ಅರ್ಧಕ್ಕೇ ನಿಲ್ಲಿಸಬೇಕಾದ ಪರಿಸ್ಥಿತಿ ಬಂದಿತ್ತು. ಹೀಗಾಗಿ ಭರತ್​ ಅವರು ಸೆಟ್​​ಗೆ ಧ್ರುವನ್​​ರನ್ನು ಕರೆಸಿಕೊಂಡು “”ಸಿನಿಮಾ ತಡವಾಗಿ ಪ್ರಾರಂಭವಾಗುತ್ತದೆ. ನಾನು ಸೆಟ್ಲ್​​ಮೆಂಟ್​ ಮಾಡುತ್ತೇನೆʼʼ ಎಂದು ಹೇಳಿದ್ದರು. ಆದರೆ ಧ್ರುವನ್​ ಸಿನಿಮಾ ನಿಂತಿದ್ದಕ್ಕೆ ಸಿಟ್ಟಾಗಿ, ದರ್ಶನ್​​ ಬಳಿ ಹೇಳಿ ಬೆದರಿಕೆ ಹಾಕಿಸಿದ್ದಾನೆ ಎಂಬುದು ದೂರಿನ ಸಾರಾಂಶ. ನಟ ದರ್ಶನ್​ ಅವರು ಭರತ್​​ಗೆ ಬೆದರಿಕೆ ಹಾಕಿದ ಆಡಿಯೋ ಕೂಡ ವೈರಲ್​ ಆಗಿದೆ.

‘ಅವನ ಕರಿಯರ್ ಹಾಳಾದರೆ ನೀನೇನು ಮಾಡುತ್ತೀಯಾ?, ಸಿನಿಮಾ ಶುರು ಮಾಡಿದ ಮೇಲೆ ಮುಗಿಸಿದರೆ ಒಳ್ಳೆಯದು. ಇಲ್ಲ ಅಂದರೆ ನೀನೇ ಇರಲ್ಲ. ಎದುರಿಗೆ ಸಿಕ್ಕಾಗ ಮಾತಾಡೋತರಹ ಇರಬೇಕು. ಅದಾಗಲ್ಲ ಅಂದ್ರೆ ನೀನೇ ಕಾಣ್ಸಲ್ಲ ಹಾಗೆ ಮಾಡಿಬಿಡುತ್ತೇನೆ, ನೀನು ರೆಡಿ ಇರಬೇಕು’ ಎಂಬಿತ್ಯಾದಿ ಮಾತುಗಳಿಂದ ದರ್ಶನ್​​ ಬೆದರಿಕೆ ಹಾಕುವುದು ಆಡಿಯೋದಲ್ಲಿ ಕೇಳಿಸುತ್ತದೆ.

ಇದನ್ನೂ ಓದಿ: Siddhanth kapoor drugs case: ನಟನಷ್ಟೇ ಅಲ್ಲ, ಗಾಯಕನೂ ಹೌದು ಈ ಸಿದ್ಧಾಂತ್‌!

Exit mobile version