ಬೆಂಗಳೂರು : ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಮ್ಯಾಗಜಿನ್ ಒಂದಕ್ಕೆ ತಮ್ಮ ಬೆತ್ತಲೆ ಚಿತ್ರಗಳನ್ನು ಫೋಟೊ ಶೂಟ್ ಮಾಡಿಸಿದ್ದರು. ಇದು ಭಾರಿ ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು. ಈ ವಿವಾದದ ಚಿತ್ರಗಳನ್ನು ಖಂಡಿಸಿ ರಣವೀರ್ ಸಿಂಗ್ ಮೇಲೆ ಎಫ್‌ಐಆರ್ ದಾಖಲಾಗಿದೆ.
ಅಷ್ಟೇ ಅಲ್ಲದೆ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಟ್ವೀಟ್ ಕೂಡ ಸಖತ್ ವೈರಲ್ ಆಗಿ, ವಿವಾದ ಹುಟ್ಟಿಸಿದೆ. ʻʻನಾನು ವೈಯಕ್ತಿಕವಾಗಿ ನಟ ರಣವೀರ್ ಸಿಂಗ್ ಅವರು ಈ ರೀತಿ ಪೋಟೋವನ್ನು ಹಾಕಿದುದಕ್ಕೆ ಶ್ಲಾಘಿಸುತ್ತೇನೆ. ಇವರ ಹೊಸ ಪ್ರಯತ್ನವನ್ನು ನೋಡಿ ನಾನು ರೋಮಾಂಚನಗೊಂಡಿದ್ದೇನೆ. ಆದರೆ ಒಬ್ಬ ಮಹಿಳೆ ಅದೇ ರೀತಿ ಮಾಡಿದರೆ ಆ ಮಹಿಳೆಯನ್ನೂ ಶ್ಲಾಘಿಸುತ್ತೇನೆ. ಏಕೆಂದರೆ ಲಿಂಗ ಸಮಾನತೆ ಇರಬೇಕುʼʼ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ | ಬೆತ್ತಲೆ ಫೋಟೊಶೂಟ್: ರಣವೀರ್ ಸಿಂಗ್ ವಿರುದ್ಧ ಸಿಡಿದೆದ್ದ ಮಹಿಳೆಯರು, ಎಫ್‌ಐಆರ್ ದಾಖಲು
ಇದೀಗ ರಣವೀರ್ ಸಿಂಗ್ ಅವರನ್ನು ಖಂಡಿಸಿ ಅನೇಕರು ಅವರಿಗೆ ಬಟ್ಟೆ ದಾನ ಮಾಡಿ ಎಂಬ ಅಭಿಯಾನವನ್ನು ಆರಂಭಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಗ್ನ ಚಿತ್ರಗಳನ್ನು ಪ್ರಕಟಿಸಿದ್ದಕ್ಕಾಗಿ ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ ಮುಂಬೈ ಪೊಲೀಸರು ಮಂಗಳವಾರ ಎಫ್‌ಐಆರ್ ದಾಖಲಿಸಿದ್ದಾರೆ .
ಈ ನಗ್ನ ಫೋಟೊ ಶೂಟ್ ಮೂಲಕ ರಣವೀರ್ ಸಿಂಗ್ ಅವರು ಮಹಿಳೆಯರಿಗೆ ಅಗೌರವ ತೋರಿದ್ದಾರೆ, ಅವರ ಭಾವನೆಗಳಿಗೆ ಘಾಸಿಯುಂಟು ಮಾಡಿದ್ದಾರೆ ಎಂದು ಆಪಾದಿಸಿ ಮಹಿಳಾ ವಕೀಲರೊಬ್ಬರು ದೂರು ದಾಖಲಿಸಿದ್ದರು. ಅದನ್ನು ಆಧರಿಸಿ ಈಗ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಈ ನಡುವೆ, ಒಂದು ಎನ್‌ಜಿಒ ಮತ್ತು ಒಬ್ಬ ಮಹಿಳಾ ವಕೀಲರು ಕೂಡಾ ರಣವೀರ್ ವಿರುದ್ಧ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ. ಮಾಜಿ ಪತ್ರಕರ್ತರು, ವಕೀಲರು ಸಲ್ಲಿಸಿರುವ ದೂರಿನಲ್ಲಿ ರಣವೀರ್ ಅವರ ಕೃತ್ಯವು ಮಹಿಳೆಯರ ಗೌರವಕ್ಕೆ ಧಕ್ಕೆ ಉಂಟು ಮಾಡುವಂತಿದೆ ಎಂದು ಆಪಾದಿಸಲಾಗಿದೆ.
ಈ ಮಧ್ಯೆ, ರಣವೀರ್ ಸಿಂಗ್ ಅವರು ಫೋಟೊಶೂಟ್‌ಗೆ ಸಂಬಂಧಿಸಿದ ಒಂದು ಪ್ರಶ್ನೆಗೆ ನೀಡಿದ ಪೋಲಿ ಉತ್ತರ ಕೂಡಾ ಕೆಲವರನ್ನು ಕೆರಳಿಸಿದೆ.
ಇದನ್ನೂ ಓದಿ | ರಣವೀರ್ ಸಿಂಗ್ ನಗ್ನತೆಗೂ, ಹಿಜಾಬ್‌ಗೂ ನಂಟು ಕಲ್ಪಿಸಿ ಆಕ್ರೋಶ ಹೊರಹಾಕಿದ ರಾಜಕೀಯ ನಾಯಕ !