Site icon Vistara News

Crew on OTT: ಈ 5 ಕಾರಣಕ್ಕಾಗಿ ಟಬು, ಕರೀನಾ ನಟಿಸಿರುವ ʼಕ್ರ್ಯೂʼ ಸಿನಿಮಾ ನೋಡಬಹುದು

Crew on OTT

ಟಬು (Tabu), ಕರೀನಾ ಕಪೂರ್ ಖಾನ್ (Kareena Kapoor Khan) ಮತ್ತು ಕೃತಿ ಸನೋನ್ (Kriti Sanon) ನಟಿಸಿರುವ ‘ಕ್ರ್ಯೂ’ ಚಿತ್ರ ಒಟಿಟಿಯಲ್ಲಿ (Crew on OTT) ಮೇ 24ರಂದು ಬಿಡುಗಡೆಯಾಗಿದೆ. ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡ ಬಳಿಕ ಅತ್ಯುತ್ತಮ ಕಾಮಿಡಿ ಚಲನಚಿತ್ರವಾದ ಕ್ರ್ಯೂ ನೆಟ್‌ಫ್ಲಿಕ್ಸ್‌ನಲ್ಲಿ (Netflix) ಬಿಡುಗಡೆಯಾಗಿದೆ. ರಾಜೇಶ್ ಎ. ಕೃಷ್ಣನ್ ನಿರ್ದೇಶನದ ‘ಕ್ರ್ಯೂ’ ಈಗ ವಿಶ್ವದ 190 ದೇಶಗಳಲ್ಲಿ ಪ್ರದರ್ಶನ ಕಾಣಲಿದೆ.

ನೆಟ್‌ಫ್ಲಿಕ್ಸ್‌ನಲ್ಲಿ ಚಿತ್ರದ ಪ್ರಥಮ ಪ್ರದರ್ಶನದ ಕುರಿತು ಮಾತನಾಡಿದ ನಿರ್ಮಾಪಕರಾದ ರಿಯಾ ಕಪೂರ್ ಮತ್ತು ಏಕ್ತಾ ಆರ್ ಕಪೂರ್ , ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡ ಬಳಿಕ ಕ್ರ್ಯೂ ಅನ್ನು ನೆಟ್‌ಫ್ಲಿಕ್ಸ್‌ ಗೆ ತರಲು ನಾವು ರೋಮಾಂಚನಗೊಂಡಿದ್ದೇವೆ. ಈ ಚಿತ್ರವು ಸ್ನೇಹ, ವಂಚನೆ ಮತ್ತು ದೃಢತೆಯನ್ನು ಹಾಸ್ಯದ ಮೂಲಕ ಹೇಳಲು ಪ್ರಯತ್ನಿಸುತ್ತದೆ ಎಂದು ತಿಳಿಸಿದ್ದಾರೆ.

ಪ್ರಪಂಚದಾದ್ಯಂತ ಪ್ರೇಕ್ಷಕರು ನೆಟ್‌ಫ್ಲಿಕ್ಸ್‌ನಲ್ಲಿ ಪ್ರತ್ಯೇಕವಾಗಿ ಸಸ್ಪೆನ್ಸ್, ಹಾಸ್ಯ ಮತ್ತು ನಾಟಕದ ಅನುಭವವನ್ನು ಪಡೆಯಲು ಕಾಯುವುದು ಸಾಧ್ಯವಿಲ್ಲ. ಇದು ಪ್ರೇಕ್ಷಕರನ್ನು ಆಸನದ ತುದಿಯಲ್ಲಿ ಕುರಿಸುವಂತೆ ಮಾಡುವ ಕಥೆಯಾಗಿದೆ ಎಂದು ಹೇಳಿದ್ದಾರೆ.

ಬಹುತೇಕ ದಿವಾಳಿಯಾದ ಏರ್‌ಲೈನ್‌ನ ಹಿನ್ನೆಲೆ ಕಥೆಯನ್ನು ಒಳಗೊಂಡಿರುವ ‘ಕ್ರ್ಯೂ’, ತಮ್ಮ ಜೀವನ ನಿರ್ವಹಣೆಗೆ ಪ್ರಯತ್ನಿಸುತ್ತಿರುವ ಮೂವರು ಮಹಿಳೆಯರು ಸುಳ್ಳಿನ ಜಾಲದಲ್ಲಿ ಸಿಕ್ಕಿಹಾಕಿಕೊಳ್ಳುವ ಕಥೆಯ ಸುತ್ತ ಸುತ್ತುತ್ತದೆ.

ಮಾರ್ಚ್ 29ರಂದು ಬಿಡುಗಡೆಯಾದ ಕಾಮಿಡಿ ಚಿತ್ರ ‘ಕ್ರ್ಯೂ’ ಬಿಡುಗಡೆಯಾದ ಒಂಬತ್ತು ದಿನಗಳಲ್ಲಿ ಜಾಗತಿಕವಾಗಿ 100 ಕೋಟಿ ರೂ. ಆದಾಯ ಗಳಿಸಿದೆ. ಇದರಲ್ಲಿ ದಿಲ್ಜಿತ್ ದೋಸಾಂಜ್, ಕಪಿಲ್ ಶರ್ಮಾ, ಶಾಶ್ವತ ಚಟರ್ಜಿ, ರಾಜೇಶ್ ಶರ್ಮಾ, ಕುಲಭೂಷಣ್ ಖರ್ಬಂದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬಾಲಿವುಡ್ ನ ಹಾಸ್ಯ ಚಿತ್ರವಾದ ಕ್ರ್ಯೂ ಪರಿಪೂರ್ಣ ಮನರಂಜನೆಯನ್ನು ಒದಗಿಸುವುದರಲ್ಲಿ ಸಂದೇಹವಿಲ್ಲ ಎಂದು ಅವರು ವಿವರಿಸಿದ್ದಾರೆ.

ಈ ಐದು ಕಾರಣಕ್ಕಾಗಿ ಈ ಚಿತ್ರವನ್ನು ಪ್ರತಿಯೊಬ್ಬರೂ ವೀಕ್ಷಿಸಬಹುದು.

ಇದನ್ನೂ ಓದಿ: Chow Chow Bath : ‘ಚೌ ಚೌ ಬಾತ್’ ಸಿನಿಬಜಾರ್​​ ಡಿಜಿಟಲ್ ಥಿಯೇಟರ್​​ನಲ್ಲಿ ಬಿಡುಗಡೆ

1. ಎಲ್ಲರನ್ನೂ ಮೋಡಿ ಮಾಡಲಿದೆ

‘ಕ್ರ್ಯೂ’ ಚಿತ್ರ ವೀಕ್ಷಿಸುತ್ತಾ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಾಸ್ಯದ ಸಂಪೂರ್ಣ ಮನೋರಂಜನೆಯನ್ನು ಸವಿಯಬಹುದು. ಖಂಡಿತ ಈ ಚಿತ್ರ ಯಾರನ್ನೂ ನಿರಾಶೆಗೊಳಿಸುವುದಿಲ್ಲ. ಆರ್ಥಿಕ ಬಿಕ್ಕಟ್ಟಿನ ನಡುವೆ ತಮ್ಮ ಜೀವನವನ್ನು ಸುಗಮವಾಗಿ ಸಾಗುವಂತೆ ಮಾಡಲು ಪ್ರಯತ್ನಿಸುತ್ತಿರುವ ಮೂವರು ಗಗನಸಖಿಯರ ಮೇಲೆ ಚಲನಚಿತ್ರವು ಕೇಂದ್ರೀಕೃತವಾಗಿದೆ. ‘ಕ್ರ್ಯೂ’ ವಾಸ್ತವವಾಗಿ ಸಿನಿ ಪ್ರಿಯರನನ್ನು ನಗೆಗಡಲಿನಲ್ಲಿ ತೇಲಿಸಿ ಮೋಡಿ ಮಾಡುತ್ತದೆ.

2. ಸಸ್ಪೆನ್ಸ್‌

ಹಾಸ್ಯಮಯ ಚಿತ್ರವಾದರೂ ಸಸ್ಪೆನ್ಸ್‌ಗೆ ಬಂದಾಗ ಚಿತ್ರ ಸೂಪರ್ ಎನ್ನುವಂತೆ ಮಾಡುತ್ತದೆ. ಚಿತ್ರದಲ್ಲಿ ಯಾವುದೇ ಕ್ಷಣವೂ ಬೇಸರ ತರಿಸುವುದಿಲ್ಲ. ಕರೀನಾ ಮತ್ತು ಟಬು ತಮ್ಮ ಅಭಿನಯದಿಂದ ಎಲ್ಲರ ಮನಗೆದ್ದಿದ್ದಾರೆ.

3. ಅಪರೂಪದ ಕಥೆ

ಮೂವರು ನಟಿಯರನ್ನೇ ಮುಖ್ಯ ಭೂಮಿಕೆಯಲ್ಲಿ ಇರಿಸಿರುವ ಈ ಚಿತ್ರ ಬಾಲಿವುಡ್ ಚಲನಚಿತ್ರಗಳಲ್ಲಿ ಅಪರೂಪದ ಚಿತ್ರವಾಗಿದೆ. ಚಲನಚಿತ್ರವು ಸ್ತ್ರೀ ಸ್ನೇಹದ ವಿವಿಧ ಪದರಗಳನ್ನು ಪರಿಶೋಧಿಸುತ್ತದೆ.


4. ಹೃದಯ ಗೆಲ್ಲುವ ಅಭಿನಯ

ಚಿತ್ರದಲ್ಲಿ ಎದ್ದುಕಾಣುವ ಒಂದು ವಿಷಯವೆಂದರೆ ಮುಖ್ಯ ಪಾತ್ರ ಮತ್ತು ಪೋಷಕ ಪಾತ್ರಗಳ ಪ್ರಭಾವಶಾಲಿ ಅಭಿನಯ. ಟಬು, ಕೃತಿ ಸನೋನ್ ಮತ್ತು ಕರೀನಾ ಕಪೂರ್ ಖಾನ್ ಅವರು ತೆರೆಯ ಮೇಲೆ ಅದ್ಭುತವಾದ ಒಡನಾಟವನ್ನು ಹಂಚಿಕೊಂಡಿದ್ದಾರೆ. ಏತನ್ಮಧ್ಯೆ, ಕಪಿಲ್ ಶರ್ಮಾ ಮತ್ತು ದಿಲ್ಜಿತ್ ದೋಸಾಂಜ್ ಅವರು ಸಣ್ಣ ಅವಧಿಗೆ ಬಂದುಹೋದರೂ ಪ್ರೇಕ್ಷಕರ ಹೃದಯ ಗೆಲ್ಲುತ್ತಾರೆ.

5. ಹಾಸ್ಯ ಚಿತ್ರ

ಮಹಿಳೆಯರು ಹಾಸ್ಯ ಚಿತ್ರಗಳನ್ನು ಚೆನ್ನಾಗಿ ಮಾಡಬಲ್ಲರು ಎಂಬುದನ್ನು ಈ ಚಿತ್ರ ಪ್ರತಿಪಾದಿಸುತ್ತದೆ. ಹಾಸ್ಯ ಚಿತ್ರಗಳನ್ನು ಮಹಿಳಾ ನಟಿಯರು ಉತ್ತಮವಾಗಿ ಮಾಡಬಹುದು ಎಂಬುದನ್ನು ‘ಕ್ರ್ಯೂ’ ಸಾಬೀತುಪಡಿಸುತ್ತದೆ.

Exit mobile version