ಬೆಂಗಳೂರು : ಅಥಿಯಾ ಶೆಟ್ಟಿ ಮತ್ತು ಕೆ ಎಲ್ ರಾಹುಲ್ ವಿವಾಹವಾಗಲು (KL Rahul- Athiya Shetty Wedding) ಸಜ್ಜಾಗಿದ್ದಾರೆ. ಖಂಡಾಲಾದಲ್ಲಿರುವ ಸುನೀಲ್ ಶೆಟ್ಟಿ ಅವರ ಫಾರ್ಮ್‌ಹೌಸ್‌ನಲ್ಲಿ ಅವರ ಮದುವೆಯ ಸಂಭ್ರಮ ಈಗಾಗಲೇ ಪ್ರಾರಂಭವಾಗಿದೆ. ಪಾಪರಾಜಿಗಳು ಅವರ ಫಾರ್ಮ್‌ಹೌಸ್‌ನ ಹೊರಗೆ ನೆಲೆಸಿರುವಾಗ, ಮದುವೆಯ ಸಂಭ್ರಮದ ಫೋಟೊಗಳನ್ನು ಸೆರೆ ಹಿಡಿದಿದ್ದಾರೆ. ಇದೀಗ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ರೋಹನ್ ಶ್ರೇಷ್ಠ, ಕ್ರಿಕೆಟಿಗ ವರುಣ್ ಆರೋನ್ ಮತ್ತು ಹೆಚ್ಚಿನ ಗಣ್ಯರು ಸಂಗೀತ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿರುವ ಫೋಟೊಗಳು ನಟಿ ಅಥಿಯಾ ಶೆಟ್ಟಿ ಅವರು 2019ರಲ್ಲಿ ಕ್ರಿಕೆಟಿಗ ಕೆಎಲ್ ರಾಹುಲ್ ಅವರನ್ನು ಭೇಟಿಯಾದರು. ಅಲ್ಲಿಂದ ಅವರಿಬ್ಬರ ಮಧ್ಯೆ ಪ್ರೀತಿ ಬೆಳೆದು ಸೋಷಿಯಲ್ ಮೀಡಿಯಾದಲ್ಲಿ ಫೋಟೊ ಶೇರ್ ಮಾಡುವುದರ ಮೂಲಕ ತಮ್ಮ ಪ್ರೀತಿಯ ಬಗ್ಗೆ ಅಧಿಕೃತಗೊಳಿಸಿದರು. ಇದಾಗಿವೆ. ರೋಹನ್ ಶ್ರೇಷ್ಠ, ಕ್ರಿಕೆಟಿಗ ವರುಣ್ ಆರೋನ್, ರಿತಿಕ್ ಭಾಸಿನ್ ಮತ್ತು ಗಿಪ್ಪಿ ಗ್ರೆವಾಲ್ ಅವರಂತಹ ಸೆಲೆಬ್ರಿಟಿಗಳು ಸ್ಥಳಕ್ಕೆ ಆಗಮಿಸುತ್ತಿರುವ ಫೋಟೊಗಳು ವೈರಲ್ ಆಗಿವೆ. ಸಮಾರಂಭದಲ್ಲಿ ಗಾಯಕ ಮಿಕಾ ಸಿಂಗ್ ಕೂಡ ಕಾರ್ಯಕ್ರಮ ನೀಡುವ ನಿರೀಕ್ಷೆಯಿದೆ. ತೋಟದ ಮನೆಯನ್ನು ಹೂವಿನಿಂದ ಅಲಂಕರಿಸಲಾಗಿದೆ.
ಇದನ್ನೂ ಓದಿ:KL Rahul- Athiya Shetty Wedding: ಹಸೆಮಣೆ ಏರಲಿರುವ ಅಥಿಯಾ-ಕೆಎಲ್ ರಾಹುಲ್ ಜೋಡಿಗೆ ಶುಭ ಹಾರೈಸಿದ ಅಜಯ್ ದೇವಗನ್!
ಬಾಣಸಿಗರ ತಂಡವೂ ಸಂಭ್ರಮದಲ್ಲಿ ತೊಡಗಿಸಿಕೊಂಡಿರವ ಕ್ಷಣಗಳು ಸೆರೆಯಾಗಿವೆ. ಬಾಣಸಿಗರು ಅತಿಥಿಗಳಿಗಾಗಿ ವಿವಿಧ ರೀತಿಯ ಊಟಗಳನ್ನು ತಯಾರಿಸುವುದರಲ್ಲಿ ನಿರತರಾಗಿರುವಂತೆ ತೋರುತ್ತಿದೆ. ಈಗಾಗಲೇ ಸುನೀಲ್ ಶೆಟ್ಟಿ ಅವರು ಅಧಿಕೃತ ಚಿತ್ರಗಳಿಗಾಗಿ ಇಡೀ ಕುಟುಂಬದೊಂದಿಗೆ ಅಥಿಯಾ ಮತ್ತು ಕೆಎಲ್ ರಾಹುಲ್ ಅವರನ್ನು ಕರೆತರುವುದಾಗಿ ಪಾಪರಾಜಿಗಳಿಗೆ ಭರವಸೆ ನೀಡಿದ್ದಾರೆ.
ಅಥಿಯಾ, ಕೆಎಲ್ ರಾಹುಲ್ ಅವರ ಮದುವೆಗೆ ಕೇವಲ 100 ಅತಿಥಿಗಳು
ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಅವರು ಕೆಲವು ಸಮಯದಿಂದ ಡೇಟಿಂಗ್ ಮಾಡುತ್ತಿದ್ದಾರೆ. ಜನವರಿ 23 ರಂದು ಸುನೀಲ್ ಶೆಟ್ಟಿ ಅವರ ಖಂಡಾಲಾ ಫಾರ್ಮ್‌ಹೌಸ್‌ನಲ್ಲಿ (kl rahul athiya Shetty marriage venue) ವಿವಾಹ ಜರುಗಲಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಮದುವೆಯಲ್ಲಿ ಸುಮಾರು 100 ಗೆಸ್ಟ್‌ಗಳು (Athiya kl rahul marriage) ಇರಲಿದ್ದಾರೆ. ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ವಿವಾಹದ ನಿಯಮಗಳಂತೆ ಮೊಬೈಲ್ ಫೋನ್ ಸಮಾರಂಭದಲ್ಲಿ ನಿಷೇಧಿಸಲಾಗಿದೆ. ಅತಿಥಿಗಳ ಪಟ್ಟಿಯಲ್ಲಿ ಜಾಕಿ ಶ್ರಾಫ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ಭಾಗಿಯಾಗಲಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ:KL Rahul- Athiya Shetty Wedding: ಕೆ.ಎಲ್. ರಾಹುಲ್-ಅಥಿಯಾ ಶೆಟ್ಟಿ ಮದುವೆ ಸಮಾರಂಭದ ವಿಶೇಷತೆಗಳೇನು?
ಟೈಗರ್ ಶ್ರಾಫ್ ಅವರ ಸಹೋದರಿ ಕೃಷ್ಣ ಶ್ರಾಫ್ ಮತ್ತು ಬಾಲಿವುಡ್ ಛಾಯಾಗ್ರಾಹಕ ರೋಹನ್ ಶ್ರೇಷ್ಠ ಭಾಗಿಯಾಗಲಿದ್ದಾರೆ (Athiya Shetty KL Rahul wedding guest list) ಎನ್ನಲಾಗಿದೆ. ಅಥಿಯಾ ಮತ್ತು ಕೆಎಲ್ ರಾಹುಲ್ ಸೋಮವಾರ ಜನವರಿ 23ರಂದು ಸಂಜೆ 4 ಗಂಟೆಗೆ ತಮ್ಮ ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ವಿವಾಹದ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ವಿಧಿ ವಿಧಾನಗಳನ್ನು ಅನುಸರಿಸಿ, ಅವರು ಸಂಜೆ 6:30 ಕ್ಕೆ ಪಾಪರಾಜಿಗಳಿಗೆ ಪೋಸ್ ನೀಡಲಿದ್ದಾರೆ.