ಬೆಂಗಳೂರು: ಕ್ರೈಂ ಥ್ರಿಲ್ಲರ್, ಸೈನ್ಸ್ ಫಿಕ್ಷನ್ ವೆಬ್ ಸಿರೀಸ್‌ವೊಂದು ಕನ್ನಡದಲ್ಲಿ ನಿರ್ಮಾಣವಾಗಿ ಬಿಡುಗಡೆಗೊಂಡು ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಹೊಸ ಪ್ರತಿಭೆಗಳ ವಿನೂತನ ಪ್ರಯತ್ನವಿರುವ ಈ ವೆಬ್ ಸಿರೀಸ್ (Kannada Web Series) ಹೆಸರು ‘ವೈಟ್ ಆ್ಯಂಡ್ ಬ್ಲ್ಯಾಕ್’. ಜೋಗೇಶ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ‘ವೈಟ್ ಆ್ಯಂಡ್ ಬ್ಲ್ಯಾಕ್’ ವೆಬ್ ಸಿರೀಸ್ ಸತ್ಯ ಪಿಕ್ಚರ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ.
ಅಭಿನಂದನ್ ಕಥೆ ಬರೆದು ನಿರ್ದೇಶನ ಮಾಡಿರುವ ಮೊದಲ ವೆಬ್ ಸಿರೀಸ್ ಇದು. ರಂಗಭೂಮಿ ಕಲಾವಿದನಾಗಿ, ಬರಹಗಾರನಾಗಿ ಅಭಿನಂದನ್ ಗುರುತಿಸಿಕೊಂಡಿದ್ದಾರೆ. ಹಲವು ನಾಟಕಗಳಿಗೆ ಕಥೆ ಬರೆದು ನಿರ್ದೇಶಿಸಿರುವ ಅನುಭವ ಇವರಿಗಿದ್ದು, ತಮ್ಮ ಮೊದಲ ವೆಬ್ ಸಿರೀಸ್‌ಗೂ ಸ್ವತಃ ತಾವೇ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ರಂಗಭೂಮಿ ಕಲಾವಿದರು ಹಾಗೂ ಪ್ರತಿಭಾವಂತ ಯುವ ತಾಂತ್ರಿಕ ವರ್ಗವನ್ನು ಬಳಸಿಕೊಂಡು ವೆಬ್ ಸರಣಿಯನ್ನು ನೀಡಿ ಗಮನ ಸೆಳೆಯುತ್ತಿದ್ದಾರೆ ಅಭಿನಂದನ್.
‘ರಾಮಾ ರಾಮಾ ರೇ’ ಖ್ಯಾತಿಯ ನಿರ್ದೇಶಕ ಸತ್ಯ ವೆಬ್ ಸೀರೀಸ್ ಕಂಟೆಂಟ್ ಮೆಚ್ಚಿ ಸತ್ಯ ಪಿಕ್ಚರ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಿ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದ್ದಾರೆ. ನೋಡುಗರು ಕೂಡ ತಂಡದ ಪ್ಯಾಷನ್, ಕಂಟೆಂಟ್, ಅದನ್ನು ತೆರೆ ಮೇಲೆ ಕಟ್ಟಿಕೊಟ್ಟ ರೀತಿಗೆ ಬೆರಗಾಗಿದ್ದು, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ತಮ್ಮ ಮೊದಲ ಕನಸಿಗೆ, ಹೊಸ ಪ್ರತಿಭೆಗಳ ಪ್ರಯತ್ನಕ್ಕೆ ಬೆನ್ನು ತಟ್ಟಿ ಪ್ರೋತ್ಸಾಹ ಸಿಗುತ್ತಿರುವುದು ನಿರ್ದೇಶಕ ಅಭಿನಂದನ್ ಹಾಗೂ ತಂಡಕ್ಕೆ ಸಂತಸ ತಂದಿದೆ.
ಜೋಗೇಶ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ‘ವೈಟ್ ಆ್ಯಂಡ್ ಬ್ಲ್ಯಾಕ್’ ವೆಬ್ ಸಿರೀಸ್
ಬಹುತೇಕ ರಂಗಭೂಮಿ ಕಲಾವಿದರೇ ನಟಿಸಿರುವ ಈ ವೆಬ್ ಸಿರೀಸ್‌ನಲ್ಲಿ ಸತ್ಯ ಸೀರಿಯಲ್ ಬಾಲಾ ಪಾತ್ರಧಾರಿ ಶಶಿ ರಾಜ್, ಪ್ರಿಯಾಂಕ ಪ್ರಕಾಶ್, ಚನ್ನಕೇಶವ.ಜಿ, ಸವಿತ ಒಳಗೊಂಡ ತಾರಾಗಣವಿದೆ. ಕಮಲ್.ವಿ ಛಾಯಾಗ್ರಹಣ, ಸತ್ಯ ರಾಧಕೃಷ್ಣ ಸಂಗೀತ ನಿರ್ದೇಶನದಲ್ಲಿ ‘ವೈಟ್ ಆ್ಯಂಡ್ ಬ್ಲ್ಯಾಕ್’.ಮೂಡಿ ಬಂದಿದೆ. ಜೋಗೇಶ್ ಫಿಲ್ಮ್ಸ್ ಬ್ಯಾನರ್ ನಡಿ ಚಿತ್ರದುರ್ಗ ಸಿದ್ದಯ್ಯ ಜೋಗೇಶ್ ವೆಬ್ ಸಿರೀಸ್ ನಿರ್ಮಾಣ ಮಾಡಿದ್ದಾರೆ.