ಬೆಂಗಳೂರು: ‘ದಾದಾ ಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಸಿನಿಮೋತ್ಸವ (dada saheb phalke award 2023) ಪ್ರಶಸ್ತಿ ಸ್ವೀಕರಿಸಲು ಮುಂಬಯಿಗೆ ತೆರಳಿದ್ದ, ‘ಕಾಂತಾರ’ ನಟ ರಿಷಬ್ ಶೆಟ್ಟಿ (Rishab Shetty) ಇಂದು ಬೆಂಗಳೂರಿಗೆ ಬಂದು ಇಳಿದರು. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ‘ಇದು ಕಾಂತಾರ ಹಿಂದಿ ಸಿನಿಮಾಕ್ಕೆ ಕೊಟ್ಟ ಪ್ರಶಸ್ತಿ. ಕನ್ನಡಕ್ಕೆ ಬಂದಿದ್ದಲ್ಲ. ಆದರೂ ಎಲ್ಲೆಡೆ ಕನ್ನಡ ಸಿನಿಮಾಗಳ ಬಗ್ಗೆ ವಿಶೇಷ ಗೌರವ ಮೂಡುತ್ತಿದೆ. ಪ್ರಶಸ್ತಿ ಸಿಕ್ಕಿದ್ದು ತುಂಬಾ ಖುಷಿ ಆಯಿತು’ ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಅವರು ‘ನಾನು ಪ್ರಶಸ್ತಿ ಸ್ವೀಕರಿಸಲು ನಮ್ಮ ಸಾಂಪ್ರದಾಯಿಕ ಉಡುಪಿನಲ್ಲಿಯೇ ಹೋಗಿದ್ದೆ. ಅಲ್ಲಿದ್ದವರೆಲ್ಲ ಗುರುತಿಸಿದ್ದು ಖುಷಿಯಾಯಿತು. ನಾವಿನ್ನು ಕಾಂತಾರ 2 ಕೆಲಸ ಶುರು ಮಾಡುತ್ತೇವೆ. ಮಾರ್ಚ್ನಿಂದ ಫೋನ್ ಆಫ್ ಮಾಡುತ್ತೇನೆ’ ಎಂದು ಹೇಳಿದರು. ರಿಷಬ್ ಶೆಟ್ಟಿಯವರು ದಾದಾ ಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ‘ಭರವಸೆಯ ನಟ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇದನ್ನೂ ಓದಿ: Rishab Shetty: ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಗೆ ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ