Site icon Vistara News

ದಾದಾಸಾಹೇಬ್‌ ಫಾಲ್ಕೆ ಇಂಟರ್‌ನ್ಯಾಷನಲ್‌ ಫಿಲ್ಮ್‌ ಫೆಸ್ಟಿವಲ್‌ ಪ್ರಶಸ್ತಿ ಮುಡಿಗೇರಿಸಿಕೊಂಡ ಶಾರುಖ್‌ ಖಾನ್‌; ವಿಜೇತರ ಪಟ್ಟಿ ಇಲ್ಲಿದೆ

award

award

ಮುಂಬೈ: ಪ್ರತಿಷ್ಠಿತ ದಾದಾಸಾಹೇಬ್‌ ಫಾಲ್ಕೆ ಇಂಟರ್‌ನ್ಯಾಷನಲ್‌ ಫಿಲ್ಮ್‌ ಫೆಸ್ಟಿವಲ್‌ ಅವಾರ್ಡ್‌ 2024 (Dadasaheb Phalke International Film Festival Awards 2024)ರ ವಿಜೇತರ ಹೆಸರನ್ನು ಘೋಷಿಸಲಾಗಿದೆ. ಬಾಲಿವುಡ್‌ ಬಾದ್‌ಷಾ ಶಾರುಖ್‌ ಖಾನ್‌ (Shah Rukh Khan) ಅಭಿನಯದ ʼಜವಾನ್‌ʼ (Jawan) ಚಿತ್ರ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಶಾರುಖ್‌ ಖಾನ್‌, ರಾಣಿ ಮುಖರ್ಜಿ ಮತ್ತು ನಯನತಾರಾ ʼಅತ್ಯುತ್ತಮʼರಾಗಿ ಆಯ್ಕೆಯಾಗಿದ್ದಾರೆ. ಬಾಲಿವುಡ್‌ನಲ್ಲಿ ಸಂಚಲನ ಮೂಡಿಸಿದ ʼಅನಿಮಲ್‌ʼ ಚಿತ್ರದ ನಿರ್ದೇಶಕ ಸಂದೀಪ್‌ ರೆಡ್ಡಿ ವಂಗ ಕೂಡ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಇಲ್ಲಿದೆ ವಿಜೇತರ ಸಂಪೂರ್ಣ ಪಟ್ಟಿ:

ಜತೆಗೆ ಅಟ್ಲಿ, ಶಾಹಿದ್‌ ಕಪೂರ್‌, ರಾಜ್‌ & ಡಿಕೆ ಮತ್ತಿತರರು ಕೂಡ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ವಿವರ

ಮಾಹಿತಿ ಮತ್ತು ಪ್ರಸಾರ ಸಚಿವಾಲಯ 1969ರಲ್ಲಿ ಸ್ಥಾಪಿಸಿದ ಅತ್ಯುನ್ನತ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ಮತ್ತು ದಾದಾಸಾಹೇಬ್‌ ಫಾಲ್ಕೆ ಇಂಟರ್‌ನ್ಯಾಷನಲ್‌ ಫಿಲ್ಮ್‌ ಫೆಸ್ಟಿವಲ್‌ ಅವಾರ್ಡ್‌ ಬೇರೆ ಬೇರೆ. ಪ್ರತಿ ವರ್ಷ ಭಾರತೀಯ ಚಲನಚಿತ್ರೋದ್ಯಮಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಒಬ್ಬ ಸಾಧಕರಿಗೆ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ನೀಡಲಾಗುತ್ತದೆ. 1995ರಲ್ಲಿ ಕನ್ನಡ ನಟ ಡಾ.ರಾಜ್‌ಕುಮಾರ್‌ ಈ ಪ್ರತಿಷ್ಠಿತ ಪ್ರಶಸ್ತಿ ಪಡೆದುಕೊಂಡಿದ್ದರು. ದಾದಾ ಸಾಹೇಬ್‌ ಫಾಲ್ಕೆ ಅವರನ್ನು ಭಾರತದ ಸಿನಿಮಾದ ಪಿತಾಮಹ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: Filmfare Awards 2024 Winners: 69ನೇ ಫಿಲ್ಮ್​ಫೇರ್​ ಪ್ರಶಸ್ತಿ ಪ್ರದಾನ: ರಣಬೀರ್ ಅತ್ಯುತ್ತಮ ನಟ, ಆಲಿಯಾ ಅತ್ಯುತ್ತಮ ನಟಿ!

ಇನ್ನು ದಾದಾಸಾಹೇಬ್‌ ಫಾಲ್ಕೆ ಇಂಟರ್‌ನ್ಯಾಷನಲ್‌ ಫಿಲ್ಮ್‌ ಫೆಸ್ಟಿವಲ್‌ ಅವಾರ್ಡ್‌ (DIFF) ಅನ್ನು 2016ರಲ್ಲಿ ಸ್ಥಾಪಿಸಲಾಗಿದೆ. ಇದನ್ನು ಖಾಸಗಿಯಾಗಿ ನೀಡಲಾಗುತ್ತದೆ. ʼʼದಾದಾಸಾಹೇಬ್ ಫಾಲ್ಕೆ ಅವರ ಕೊಡುಗೆಯನ್ನು ಗೌರವಿಸುವ ಉದ್ದೇಶದಿಂದ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ಭಾರತೀಯ ಚಲನಚಿತ್ರೋದ್ಯಮದ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಗೌರವಿಸಲಾಗುತ್ತದೆʼʼ ಎಂದು ಮೂಲಗಳು ತಿಳಿಸಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version