Site icon Vistara News

Darbaar Movie: 23 ವರ್ಷಗಳ ನಂತರ ನಿರ್ದೇಶಕರಾಗಿ ʼದರ್ಬಾರ್‌ʼ ಆರಂಭಿಸಿದ ವಿ.ಮನೋಹರ್‌

Darbaar Movie

#image_title

ಬೆಂಗಳೂರು: ನಿರ್ದೇಶಕರಾಗಬೇಕೆಂಬ ಕನಸು ಕಟ್ಟಿಕೊಂಡು ಚಿತ್ರರಂಗಕ್ಕೆ ಕಾಲಿಟ್ಟ ವಿ.ಮನೋಹರ್‌ ಸಂಗೀತ ಸಂಯೋಜಕರಾಗಿ ಎಲ್ಲರ ಮನ ಗೆದ್ದಿದ್ದಾರೆ. 90ರ ದಶಕದಲ್ಲಿ ಓ ಮಲ್ಲಿಗೆ, ಇಂಧ್ರಧನುಷ್‌ ಸಿನಿಮಾಗಳನ್ನು ನಿರ್ದೇಶಿಸಿದ್ದ ಅವರು ಇದೀಗ 23 ವರ್ಷಗಳ ನಂತರ ಮತ್ತೆ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಅವರ ನಿರ್ದೇಶನದ ʼದರ್ಬಾರ್‌ʼ ಸಿನಿಮಾ ಇಂದು ಬಿಡುಗಡೆಗೊಂಡಿದ್ದು, ಉತ್ತಮ ಸ್ಪಂದನೆ ಪಡೆದುಕೊಳ್ಳುತ್ತಿದೆ.

ಬೆಂಗಳೂರಿನ ವೀರೇಶ್‌ ಚಿತ್ರಮಂದಿರ ಸೇರಿ ಅನೇಕ ಚಿತ್ರಮಂದಿರಗಳಲ್ಲಿ ದರ್ಬಾರ್‌ ಬಿಡುಗಡೆಯಾಗಿದ್ದು, ದಿನಕ್ಕೆ ನಾಲ್ಕು ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾಕ್ಕೆಂದು ಒಟ್ಟು ಮೂರು ಕೋಟಿ ರೂ. ಬಂಡವಾಳ ಹೂಡಿರುವುದಾಗಿ ವಿ.ಮನೋಹರ್‌ ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Darbar Movie Review: ಇದು ರಾಜಕಾರಣದ ʻದರ್ಬಾರ್‌ʼ, ಮತದಾರರ ಕಾರುಬಾರು!

ದರ್ಬಾರ್‌ ಸಿನಿಮಾದಲ್ಲಿ ನಾಯಕ ನಟನಾಗಿ ಸತೀಶ್‌ ನಟಿಸಿದ್ದರೆ, ನಾಯಕಿಯಾಗಿ ಜಾಹ್ನವಿ ನಟಿಸಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ಸತೀಶ್ ಅವರೇ ಬರೆದಿದ್ದಾರೆ. ದರ್ಬಾರ್ ಪ್ರೊಡಕ್ಷನ್ಸ್ ಮೂಲಕ ಬಿ.ಎನ್. ಶಿಲ್ಪ ಅವರು ನಿರ್ಮಾಣ ಮಾಡಿದ್ದಾರೆ. ಮಾಸ್ ಮಾದ, ವಿನೋದ್ ಸಾರಥ್ಯದ 3 ಸಾಹಸ ದೃಶ್ಯಗಳು ಚಿತ್ರದಲ್ಲಿವೆ.‌

ಹಿರಿಯ ಕಲಾವಿದರಾದ ಎಂ.ಎನ್.ಲಕ್ಷ್ಮಿದೇವಿ, ಅಶೋಕ್ ಹೀಗೆ ಸಾಕಷ್ಟು ಜನ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಮೂರು ಹಾಡುಗಳು ಚಿತ್ರದಲ್ಲಿದ್ದು, ಟೈಟಲ್ ಸಾಂಗ್‌ನ್ನು ಚಂದನ್ ಶೆಟ್ಟಿ ಹಾಡಿದ್ದಾರೆ, ರಾಜಕೀಯ ವಿಡಂಬನೆಯ ಹಾಡನ್ನು ಉಪೇಂದ್ರ ಹಾಡಿದ್ದಾರೆ, ಇನ್ನು ಡ್ಯುಯೆಟ್ ಹಾಡಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ.

Exit mobile version