Site icon Vistara News

Darling Krishna | ಡಾರ್ಲಿಂಗ್‌ ಕೃಷ್ಣ-ಮಿಲನಾ ನಾಗರಾಜ್‌ ಅಭಿನಯದ ಪ್ರತ್ಯೇಕ ಚಿತ್ರಗಳು ಒಂದೇ ದಿನ ರಿಲೀಸ್‌!

Darling Krishna

ಬೆಂಗಳೂರು : ʻಲವ್‌ ಮಾಕ್ಟೇಲ್‌ʼ ಸಿನಿಮಾ ಖ್ಯಾತಿಯ ಡಾರ್ಲಿಂಗ್‌ ಕೃಷ್ಣ (Darling Krishna) ಮತ್ತು ಮಿಲನಾ ನಾಗರಾಜ್‌ ದಂಪತಿಯು ಪ್ರತ್ಯೇಕ ಚಿತ್ರದ ಮೂಲಕ ತೆರೆ ಮೇಲೆ ಬರುತ್ತಿದ್ದಾರೆ. ಡಾರ್ಲಿಂಗ್‌ ಕೃಷ್ಣ ಅವರು ಈ ಬಾರಿ ರೋಮ್ಯಾಂಟಿಕ್‌ ಜಾನರ್‌ ಮೂಲಕ ಕಾಣಿಸಿಕೊಂಡರೆ, ಮಿಲನಾ ನಾಗರಾಜ್‌ ಹಾರರ್‌ ಕಂಟೆಂಟ್‌ ಮೂಲಕ ಬರುತ್ತಿದ್ದಾರೆ. ಈ ಎರಡೂ ಚಿತ್ರಗಳು ನವೆಂಬರ್ 11ಕ್ಕೆ ತೆರೆಗೆ ಅಪ್ಪಳಿಸಲಿವೆ.

ʻದಿಲ್‌ಪಸಂದ್‌ʼ ಚಿತ್ರದ ಮೂಲಕ ಡಾರ್ಲಿಂಗ್‌ ಕೃಷ್ಣ ಅವರು ಇಬ್ಬರು ಹೀರೋಯಿನ್‌ಗಳೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ʻಜೊತೆ ಜೊತೆಯಲಿʼ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ ಹಾಗೂ ʻಗುರು ಶಿಷ್ಯರುʼ ಸಿನಿಮಾ ಖ್ಯಾತಿಯ ನಟಿ ನಿಶ್ವಿಕಾ ನಾಯ್ಡು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ರೊಮ್ಯಾನ್ಸ್‌ ಜತೆಗೆ ಹಾಸ್ಯದ ಹೊನಲು ಇರುತ್ತದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಶಿವತೇಜಸ್‌ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಇನ್ನೂ ವಿಶೇಷ ಅಂದರೆ ಈ ಚಿತ್ರದಲ್ಲಿ ನಟ ಅಜಯ್‌ ರಾವ್‌ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ʻʻರಶ್ಮಿ ಫಿಲ್ಮ್ಸ್‌ʼ ಬ್ಯಾನರ್‌ ಅಡಿಯಲ್ಲಿ ಸುಮಂತ್‌ ಕ್ರಾಂತಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ | Dil Pasand Movie | ಡಾರ್ಲಿಂಗ್‌ ಕೃಷ್ಣಾ ಅಭಿನಯದ ಬಹುನಿರೀಕ್ಷಿತ ಚಿತ್ರ ದಿಲ್ ಪಸಂದ್ ರಿಲೀಸ್‌ ಡೇಟ್‌ ಫಿಕ್ಸ್‌!

ʻಓʼ!

ಈ ಬಾರಿ ನಟಿ ಮಿಲನಾ ನಾಗರಾಜ್‌ ಹಾರರ್‌ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತುದ್ದಾರೆ. ಚಿತ್ರದ ಟ್ರೈಲರ್‌ ಈಗಾಗಲೇ ಬಿಡುಗಡೆಗೊಂಡಿದ್ದು, ಅಮೃತಾ ಅಯ್ಯರ್‌ ಕೂಡ ನಟಿಸಿದ್ದಾರೆ. ಕಿರುತೆರೆಯಲ್ಲಿ ಹೆಸರು ಮಾಡಿರುವ ಯುವ ನಟ ಸಿದ್ದು ಮೂಲಿಮನಿ ಕೂಡ ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ. ಮಹೇಶ್ ಸಿ. ಅಮ್ಮಳ್ಳಿದೊಡ್ಡಿ ಈ ಚಿತ್ರವನ್ನ ನಿರ್ದೇಶನದ ಮಾಡಿದ್ದಾರೆ. ಮಿಲನಾ ನಾಗರಾಜ್ ಹಾಗೂ ಅಮೃತಾ ಅಯ್ಯಂಗಾರ್ ಸಹೋದರಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ವಿಶೇಷ ಅಂದರೆ ಈ ಚಿತ್ರದ ಒಂದು ಹಾಡಿಗೆ ಪುನೀತ್‌ ರಾಜಕುಮಾರ್‌ ಅವರು ಹಾಡನ್ನು ಹಾಡಿದ್ದಾರೆ. ʻಏಕಾಕ್ಷರʼ ಫಿಲ್ಮ್ಸ್‌ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಿಸಲಾಗಿದೆ.

ದಿಲೀಪ್ ಚಕ್ರವರ್ತಿ ಅವರ ಛಾಯಾಗ್ರಹಣ, ಕಿರಣ್ ರವೀಂದ್ರನಾಥ್ ಅವರ ಸಂಗೀತ, ಶ್ರೀಕಾಂತ್ ಅವರ ಸಂಕಲನ ಈ ಚಿತ್ರಕ್ಕಿದೆ. ರಮೇಶ್ ಪಂಡಿತ್, ಸುಚೇಂದ್ರ ಪ್ರಸಾದ್, ಶ್ರಾವ್ಯ ಗಣಪತಿ. ದಶಾವರ ಚಂದ್ರು ಮಾಸ್ಟರ್ ಅಲಾಪ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ | Milana Nagaraj | ಹೊಸ ಗೂಡು ಪ್ರವೇಶಿಸಿದ ಕೃಷ್ಣ- ಮಿಲನಾ ಜೋಡಿ; ಗೃಹ ಪ್ರವೇಶದ ಚಿತ್ರಗಳು ಇಲ್ಲಿವೆ

Exit mobile version