Site icon Vistara News

Darling Krishna | ಡಾರ್ಲಿಂಗ್‌ ಕೃಷ್ಣ-ಶಶಾಂಕ್‌ ಕಾಂಬಿನೇಶನ್‌ ಹೊಸ ಚಿತ್ರ: ಟೈಟಲ್‌ ರಿವೀಲ್‌!

Darling Krishna

ಬೆಂಗಳೂರು: ಕೆಲವು ದಿನಗಳಿಂದ ಡಾರ್ಲಿಂಗ್‌ ಕೃಷ್ಣ (Darling Krishna) ಹಾಗೂ ಶಶಾಂಕ್‌ ಕಾಂಬಿನೇಶನ್‌ ಸಿನಿಮಾ ಬಗ್ಗೆ ಸುದ್ದಿ ಆಗಿತ್ತು. ಇದೀಗ ಟೈಟಲ್‌ ರಿವೀಲ್‌ ಆಗಿದೆ. ಅದರ ಜತೆ ಟೈಟಲ್‌ ಲಾಂಚ್‌ ವಿಡಿಯೊವನ್ನು ಸಖತ್‌ ಕ್ರಿಯೇಟಿವ್‌ ಆಗಿ ನೀಡಿದೆ ಚಿತ್ರತಂಡ. ʻಕೌಸಲ್ಯಾ ಸುಪ್ರಜಾ ರಾಮʼ ಎಂಬ ಶೀರ್ಷಿಕೆ ಇಟ್ಟಿದ್ದು, ಸಿನಿಮಾ ಸೆಟ್ಟೇರಲು ಸಜ್ಜಾಗಿದೆ.

ಶೀರ್ಷಿಕೆ ಅನೌನ್ಸ್‌ ಮಾಡುವುದಕ್ಕೆ ತಮಾಷೆಯದ್ದೊಂದು ವಿಡಿಯೊ ಮಾಡಿರುವ ತಂಡ ಸಿನಿಮಾ ಹೇಗೆ ಇರುತ್ತದೆ ಎಂಬ ಸುಳಿವು ಕೊಟ್ಟಿದ್ದಾರೆ. ʻಕೌಸಲ್ಯಾ ಸುಪ್ರಜಾ ರಾಮʼ ಕಥೆಯಲ್ಲಿ ತಮಾಷೆ ಇರುತ್ತದೆ ಎಂಬದು ಪಕ್ಕಾ ಆಗಿದೆ. ಈ ಸಿನಿಮಾವನ್ನು ಬಿ.ಸಿ. ಪಾಟೀಲ್‌ ಹಾಗೂ ಶಶಾಂಕ್‌ ಇಬ್ಬರೂ ಸೇರಿ ನಿರ್ಮಾಣ ಮಾಡುತ್ತಿದ್ದಾರೆ.

ಕೃಷಿ ಸಚಿವ ಬಿ.ಸಿ. ಪಾಟೀಲ್‌ ಕೌರವ ಪ್ರೊಡಕ್ಷನ್‌ ಹಾಗೂ ಶಶಾಂಕ್‌ ಸಿನಿಮಾಸ್‌ ಜಂಟಿಯಾಗಿ ನಿರ್ಮಾಣ ಮಾಡಲಿದೆ. ಈ ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ನೀಡುತ್ತಿದ್ದು, ʻಲವ್‌ 360ʼ ಸಿನಿಮಾ ಮೂಲಕ ಸಿನಿಮಾ ಮಾಡಿ ಗೆದ್ದಿರುವ ಶಶಾಂಕ್‌ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ.

ಡಾರ್ಲಿಂಗ್‌ ಕೃಷ್ಣ ಹಲವಾರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಹಿಂದೆ ಲಕ್ಕಿಮ್ಯಾನ್‌ʼ ಸಿನಿಮಾ ರಿಲೀಸ್‌ ಆಗಿ ಯಶಸ್ಸು ಕಂಡಿತ್ತು. ʻದಿಲ್‌ ಪಸಂದ್‌ʼ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇದರ ಜತೆ ಶುಗರ್‌ ಫ್ಯಾಕ್ಟರಿ, ಮಿಸ್ಟರ್‌ ಬ್ಯಾಚುಲರ್‌, ಲವ್‌ ಮಿ ಆರ್‌ ಹೇಟ್‌ ಮಿ ಚಿತ್ರ ನಿರ್ಮಾಣ ಹಂತದಲ್ಲಿದೆ.

ಇದನ್ನೂ ಓದಿ | Dil Pasand Movie | ಡಾರ್ಲಿಂಗ್‌ ಕೃಷ್ಣಾ ಅಭಿನಯದ ಬಹುನಿರೀಕ್ಷಿತ ಚಿತ್ರ ದಿಲ್ ಪಸಂದ್ ರಿಲೀಸ್‌ ಡೇಟ್‌ ಫಿಕ್ಸ್‌!

Exit mobile version