Site icon Vistara News

Kaatera Movie: ಕುರಿಗಾಹಿಗೆ ದರ್ಶನ್‌ ಮಾಡಿರುವ ಸಹಾಯ ನೋಡಿ ಹೆಮ್ಮೆಯಾಯ್ತು; ಕುಮಾರ್ ಗೋವಿಂದ್!

actor Darshan

ಬೆಂಗಳೂರು: ದರ್ಶನ್‌ ಅಭಿನಯದ ʻಕಾಟೇರʼ ಸಿನಿಮಾ (Kaatera Movie) ಇದೇ 29ಕ್ಕೆ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಗೊಳ್ಳುತ್ತಿದೆ. ಪ್ರಚಾರ ಕಾರ್ಯಗಳು ಆರಂಭಗೊಂಡಿದೆ. ಟಿಕೆಟ್‌ಗಳು ಈಗಾಗಲೇ ಸೂಪರ್‌ ಸೋಲ್ಡ್‌ ಔಟ್‌ ಆಗಿವೆ. ಜತೆಗೆ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕುಮಾರ್ ಗೋವಿಂದ್ ದರ್ಶನ್ ಸರಳತೆಯ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

ಕುಮಾರ್ ಗೋವಿಂದ್ ಮಾತನಾಡಿ ʻʻದರ್ಶನ್‌ ರಿಯಲ್‌ ಅವರು. ಫೇಕ್‌ ವ್ಯಕ್ತಿ ಅಲ್ಲವೇ ಅಲ್ಲ. ಇಷ್ಟು ದಿನ ಅವರ ಜತೆ ಕೆಲಸ ಮಾಡಿದ್ದೇವೆ. ಅದರಲ್ಲಿಯೂ ಊಟದ ವಿಚಾರಕ್ಕೆ ಬಂದರೆ ಪ್ರತಿ ಕಲಾವಿದರ ಬಗ್ಗೆ ಕಾಳಜಿ ವಹಿಸುತ್ತಾರೆ. ಪಾಂಡವಪುರದಲ್ಲಿ ಶೂಟ್‌ ಮಾಡಿದ್ವಿ. ಆಗ ಅಲ್ಲಿ ಒಬ್ಬ 250 ಕುರಿಗಳನ್ನು ಮೇಯಿಸಿಕೊಂಡು ಬಂದರು. ದರ್ಶನ್‌ ಅವರು ಕುರಿಗಾಯಿ ಅವರನ್ನು ಕರೆದು ಇಷ್ಟು ಕುರಿ ಇಟ್ಟುಕೊಂಡಿರುವುದಕ್ಕೆ ಸರ್ಕಾರದಿಂದ ಸವಲತ್ತು ಪಡೆದುಕೊಂಡಿದ್ದೀರಾ? ಎಂದು ಅವರನ್ನು ಕೇಳುತ್ತಾರೆ. ಇಲ್ಲ ಅಣ್ಣ ಅಂದರು ಅವರು. ಆಗ ದರ್ಶನ್ ಏನ್ ಅಣ್ಣ ನೀವು ಇಷ್ಟು ಕುರಿ ಇರುವುದಕ್ಕೆ ಸರ್ಕಾರದಿಂದ ನಿಮಗೆ ಕಮ್ಮಿ ಅಂದರು 50 ಲಕ್ಷ ಹಣ ಬರಬೇಕು ಅಂದರು. ಕುರಿಕಾಯುವ ಹುಡುಗ ಮೊಬೈಲ್‌ಗೆ ವಾಟ್ಸಾಪ್ ಓಪನ್ ಮಾಡಿ ಬ್ಯಾಂಕ್ ಅಕೌಂಟ್ ಓಪನ್ ಮಾಡಲು ತಕ್ಷಣ ಸಹಾಯ ಮಾಡಿದರು. ಇದು ದರ್ಶನ್‌ ಅವರ ಸ್ವಭಾವ. ಸಿನಿಮಾದಲ್ಲಿ ಮಾತ್ರ ಹಾಗಲ್ಲ. ರಿಯಲ್‌ ಆಗಿಯೂ ಅವರು ಹಾಗೇ ಇದ್ದಾರೆ. ಹಲವರಿಗೆ ಸಹಾಯ ಮಾಡುತ್ತಾರೆʼʼಎಂದರು.

ಈ ಸಿನಿಮಾ ಯಾವುದೇ ಆಡಂಬರದ ಸಿನಿಮಾ ಅಲ್ಲ ಎಂದು ಈಗಾಗಲೇ ದರ್ಶನ್‌ ಅವರು ಹೇಳಿಕೆ ನೀಡಿದ್ದಾರೆ. ದರ್ಶನ್ ಅವರಿಗೆ ಈ ಹಿಂದೆ ತರುಣ್​ ಸುಧೀರ್​ ರಾಬರ್ಟ್ ಸಿನಿಮಾ ನಿರ್ದೇಶಿಸಿದ್ದರು. ಇದೀಗ ಅವರು ಮತ್ತೊಮ್ಮೆ ದರ್ಶನ್ ಆ್ಯಕ್ಷನ್​ ಕಟ್ ಹೇಳಿದ್ದಾರೆ. ದರ್ಶನ್​ಗಾಗಿ ಉತ್ತಮ ಕಥೆಯೊಂದಿಗೆ ತರುಣ್ ಸುಧೀರ್ ಬಂದಿದ್ದಾರೆ ಎಂಬುದು ಸಿನಿ ಕ್ಷೇತ್ರ ಮಾತು. ದರ್ಶನ್​ಗೆ ಜೋಡಿಯಾಗಿ ಹಿರಿಯ ನಟಿ ಮಾಲಾಶ್ರೀ ಮಗಳು ಆರಾಧನಾ ಕಾಣಿಸಿಕೊಂಡಿದ್ದಾರೆ. ಹಿರಿಯ ನಟಿ ಶ್ರುತಿ ಕುಮಾರ್ ಗೋವಿಂದ್, ವೈಜನಾಥ್ ಬಿರಾದಾರ, ಜಗಪತಿ ಬಾಬು ಸೇರಿದಂತೆ ಇನ್ನೂ ಅನೇಕರು ಮಿಂಚಲಿದ್ದಾರೆ. ಕಾಟೇರ ಸಿನಿಮಾದ 2 ಹಾಡುಗಳು ಕೂಡ ಈಗಾಗಲೇ ರಿಲೀಸ್ ಆಗಿದ್ದು ಸೂಪರ್ ಹಿಟ್ ಆಗಿದೆ. ಪಸಂದಾಗವ್ನೆ ಹಾಗೂ ಯಾವ ಜನುಮದ ಗೆಳತಿ ಹಾಡುಗಳು ಜನಮನ ಗೆದ್ದಿವೆ.

ಇದನ್ನೂ ಓದಿ: Kaatera Movie: ಪ್ರಿ ಬುಕ್ಕಿಂಗ್‌ಗೆ ಭರ್ಜರಿ ರೆಸ್ಪಾನ್ಸ್‌; ಟಿಕೆಟ್‌ಗಳು ಸೂಪರ್‌ ಸೋಲ್ಡೌಟ್‌!

ಹಲವು ಥಿಯೇಟರ್‌ಗಳ ಮುಂದೆ ದರ್ಶನ್‌ ಅವರ ಕಟೌಟ್‌ಗಳು ರಾರಾಜಿಸುತ್ತಿವೆ. ಈಗಾಗಲೇ ಬೆಂಗಳೂರಿನಲ್ಲಿ 6 ಶೋಗಳು ಸೋಲ್ಡೌಟ್‌ ಆಗಿವೆ. 25ಕ್ಕೂ ಅಧಿಕ ಶೋಗಳು ಫಾಸ್ಟ್‌ಫಿಲ್ಲಿಂಗ್ ಆಗುತ್ತಿದೆ. ಇನ್ನು ಸಾಕಷ್ಟು ಕಡೆಗಳಲ್ಲಿ ಬುಕ್ಕಿಂಗ್ ಓಪನ್ ಆಗಬೇಕಿದೆ. ಆದರೂ ಕಾಟೇರರ ದರ್ಶನ ಬೇಗ ಆಗಲಿ ಎಂದು ದಚ್ಚು ಫ್ಯಾನ್ಸ್‌ ಕಮೆಂಟ್‌ ಮೂಲಕ ವ್ಯಕ್ತಪಡಿಸುತ್ತಿದ್ದಾರೆ.

Exit mobile version