Site icon Vistara News

Kaatera Movie: 100 ಕೋಟಿ ರೂ. ಕ್ಲಬ್‌ ಸೇರಿದ ʻಕಾಟೇರʼ; ಗೆದ್ದು ಬೀಗಿದ ದರ್ಶನ್‌!

Darshan Thoogudeepa Kaatera Movie

ಬೆಂಗಳೂರು: ಚಾಲೆಂಜಿಗ್‌ ಸ್ಟಾರ್‌ ದರ್ಶನ್‌ ಕೊನೆಗೂ ಫ್ಯಾನ್ಸ್‌ಗೆ ಭರ್ಜರಿ ಸಿಹಿ ಸುದ್ದಿಯನ್ನು ನೀಡಿದ್ದಾರೆ. `ಕಾಟೇರ’ ಸಿನಿಮಾ (Kaatera Movie) 104 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ದಚ್ಚು ಗೆದ್ದು ಬೀಗಿದ್ದಾರೆ. ಇನ್ನು ಹಲವೆಡೆ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿದೆ ಸಿನಿಮಾ. ಒಂದೇ ವಾರಕ್ಕೆ 100 ಕೋಟಿ ರೂ. ಕಲೆಕ್ಷನ್‌ ಮಾಡಿ ದರ್ಶನ್‌ ಹೊಸ ದಾಖಲೆ ನಿರ್ಮಿಸಿದ್ದಾರೆ.

ಕನ್ನಡದಲ್ಲಿ ಮಾತ್ರ ʻಕಾಟೇರʼ ಸಿನಿಮಾ ರಿಲೀಸ್‌ ಆಗಿದ್ದು, ಇಷ್ಟು ದೊಡ್ಡ ಮಟ್ಟದಲ್ಲಿ ಕಲೆಕ್ಷನ್‌ ಮಾಡಿದ್ದು ಹೆಮ್ಮೆಯ ವಿಚಾರ ಎನ್ನುತ್ತಿದ್ದಾರೆ ಫ್ಯಾನ್ಸ್‌. ಕಾಲಿವುಡ್‌ ಹಾಗೂ ಟಾಲಿವುನಲ್ಲಿ ಈ ಸಿನಿಮಾ ಚರ್ಚೆ ಜೋರಾಗಿದೆ. ಸಿನಿಮಾ ಮುಂದಿನ ದಿನಗಳಲ್ಲಿ ಡಬ್‌ ಆಗಲಿದೆ ಎನ್ನುತ್ತಿದೆ ವರದಿ.

ಡಿಸೆಂಬರ್‌ 29ಕ್ಕೆ ಕಾಟೇರ ರಾಜ್ಯಾದ್ಯಂತ ಬಿಟುಗಡೆಯಾಗಿತ್ತು. ಡಿ. 29ರಂದು 19.79 ಕೋಟಿ ರೂ. ಡಿ. 30ರಂದು 7.35 ಕೋಟಿ ರೂ. , ಡಿ. 31ರಂದು 20.94 ಕೋಟಿ ರೂ., ಜನವರಿ 1ರಂದು 18.26 ಕೋಟಿ ರೂ. ಜನವರಿ 2ರಂದು 9.24 ಕೋಟಿ ರೂ.ಜನವರಿ 3ರಂದು 9.78 ಕೋಟಿ ರೂ. ಜನವರಿ 4ರಂದು 9.52 ಕೋಟಿ ರೂ. ಹೀಗೆ ಒಟ್ಟೂ 104 ಕೋಟಿ ರೂ. ಕಲೆಕ್ಷನ್‌ ಆಗಿದೆ. ಏಳು ದಿನಕ್ಕೆ ‘ಕಾಟೇರ’ ಚಿತ್ರದ 52.77 ಲಕ್ಷ ಟಿಕೆಟ್ ಮಾರಾಟ ಆಗಿದೆ ಎಂದು ವರದಿಯಾಗಿದೆ.

72 ಮಲ್ಟಿಪ್ಲೆಕ್ಸ್‌ಗಳು ಹಾಗೂ 406 ಸಿಂಗಲ್ ಸ್ಕ್ರೀನ್‌ ಚಿತ್ರಮಂದಿರಗಳಲ್ಲಿ ಒಂದು ವಾರಕ್ಕೆ ಸಿನಿಮಾ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಕಾಟೇರ ಸಿನಿಮಾ ಒಟಿಟಿ ಹಕ್ಕು ಜೀ5 ಖರೀದಿಸಿದೆ ಎಂದು ವರದಿಯಾಗಿದೆ.ಶಿವರಾಜ್ ಕುಮಾರ್ ಘೋಸ್ಟ್​ ಸಿನಿಮಾ ಕೂಡ ಜಿ5 ನಲ್ಲೇ ಪ್ರಸಾರ ಕಂಡಿತ್ತು. ಇದೀಗ ಒಟಿಟಿಯಲ್ಲಿಯೂ ಸಖತ್‌ ಹವಾ ಸೃಷ್ಟಿಸಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Kaatera Movie: 95 ಕೋಟಿ ರೂ. ಕಲೆಕ್ಷನ್‌ ಮಾಡಿದ ಕಾಟೇರ; ಒಟಿಟಿಗೆ ಯಾವಾಗ ಎಂಟ್ರಿ?

ದರ್ಶನ್ ಅವರಿಗೆ ಈ ಹಿಂದೆ ತರುಣ್​ ಸುಧೀರ್​ ರಾಬರ್ಟ್ ಸಿನಿಮಾ ನಿರ್ದೇಶಿಸಿದ್ದರು. ಇದೀಗ ಅವರು ಮತ್ತೊಮ್ಮೆ ದರ್ಶನ್ ಆ್ಯಕ್ಷನ್​ ಕಟ್ ಹೇಳಿದ್ದಾರೆ. ದರ್ಶನ್​ಗೆ ಜೋಡಿಯಾಗಿ ಹಿರಿಯ ನಟಿ ಮಾಲಾಶ್ರೀ ಮಗಳು ಆರಾಧನಾ ಕಾಣಿಸಿಕೊಂಡಿದ್ದಾರೆ. ಹಿರಿಯ ನಟಿ ಶ್ರುತಿ ಕುಮಾರ್ ಗೋವಿಂದ್, ವೈಜನಾಥ್ ಬಿರಾದಾರ, ಜಗಪತಿ ಬಾಬು ಸೇರಿದಂತೆ ಇನ್ನೂ ಅನೇಕರು ಮಿಂಚಿದ್ದಾರೆ.

Exit mobile version