Site icon Vistara News

Darshan Thoogudeepa:ʻ ಕಾಲಾಯ ತಸ್ಮಯ್ ನಮಃʼಎಂದ ದರ್ಶನ್‌; ಸಂಧಾನದ ಸುಳಿವು ನೀಡಿದ್ರಾ ಚಾಲೆಂಜಿಂಗ್‌ ಸ್ಟಾರ್‌?

Darshan Thoogudeepa

ಬೆಂಗಳೂರು: ವರಮಹಾಲಕ್ಷ್ಮೀ ದಿನದಿಂದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ (Darshan Thoogudeepa) ಒಂದರ ಹಿಂದೆ ಒಂದು ಪೋಸ್ಟ್‌ಗಳನ್ನು ಶೇರ್‌ ಮಾಡಿಕೊಳ್ಳುತ್ತಲೇ ಇದ್ದಾರೆ. ದರ್ಶನ್ ಮಾಧ್ಯಮಗಳಿಗೆ ಕ್ಷಮೆ ಕೇಳಿದನ್ನು ಅಭಿಮಾನಿಗಳು ಸ್ವಾಗತಿಸಿದ್ದಾರೆ. ಇನ್ನು ಆದಷ್ಟು ಬೇಗ ಸುದೀಪ್ (kichcha sudeepa) – ದರ್ಶನ್ ಒಂದಾಗಬೇಕು ಎಂದು ಆಶಿಸುತ್ತಿದ್ದಾರೆ. ಇದೆಲ್ಲದರ ನಡುವೆ ನಟ ದರ್ಶನ್ “ಕಾಲಾಯ ತಸ್ಮಯ್ ನಮಃ” ಎಂದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ ನೋಡಿ ಅವರ ಅಭಿನಾಮಿಗಳು ಸಂತಸ ಹೊರ ಹಾಕುತ್ತಿದ್ದಾರೆ. ಎಲ್ಲವನ್ನೂ ಕಾಲವೇ ನಿರ್ಧರಿಸುತ್ತದೆ ಎನ್ನುವ ಪೋಸ್ಟ್ ಮೂಲಕ ಕಿಚ್ಚ ಸುದೀಪ್‌ ಜತೆ ಸಂಧಾನದ ಸುಳಿವು ದರ್ಶನ್‌ ನೀಡಿದ್ದಾರಾ ಎನ್ನುವ ಚರ್ಚೆಗಳು ಆಗುತ್ತಿವೆ.

ಸುಮಲತಾ ಅವರ ಜನುಮದ ದಿನದಂದು ಬೆಂಗಳೂರಿನ ಖಾಸಗಿ ಹೋಟೆಲ್​​ನಲ್ಲಿ 26 ರಾತ್ರಿ ಪಾರ್ಟಿ ಆಯೋಜಿಸಲಾಗಿತ್ತು. ಅದಕ್ಕೆ ಕಿಚ್ಚ ಸುದೀಪ್​ ಹಾಗೂ ದರ್ಶನ್ ಅವರಿಗೆ ಆಹ್ವಾನ ನೀಡಲಾಗಿತ್ತು. ಅಲ್ಲಿ ಇಬ್ಬರೂ ತಮ್ಮ ಮುನಿಸನ್ನು ತೊರೆದು ಒಂದಾಗಲಿದ್ದಾರೆ ಎಂದು ಹೇಳಲಾಗಿತ್ತು. ಕೇಕ್ ಕಟ್ಟಿಂಗ್ ವೇಳೆ ದರ್ಶನ್- ಸುದೀಪ್ ಇಬ್ಬರು ವೇದಿಕೆ ಏರಿದ್ದು ನೋಡಿ ಮಾತನಾಡುತ್ತಾರೇನೋ ಎಂದು ಫ್ಯಾನ್ಸ್‌ ಕಾದಿದ್ದರು. ಆದರೆ ಪಾರ್ಟಿಯಲ್ಲಿ ಇಬ್ಬರು ಮಾತನಾಡಲಿಲ್ಲ. ಅವರ ಪಾಡಿಗೆ ಅವರು ಇವರ ಪಾಡಿಗೆ ಇವರು ಬಂದು ಹೋಗಿದ್ದರು. ಆದರೆ ಸುಮಲತಾ ಅಂಬರೀಶ್ ಹಾಗೂ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಇವರಿಬ್ಬರನ್ನು ಒಂದೆಡೆ ಸೇರಿಸುವ ಪ್ರಯತ್ನ ಮಾಡಿದ್ದರು.

ಇದೀಗ ಇದ್ದಕ್ಕಿಂದ್ದಂತೆ ದರ್ಶನ್‌ ಅವರು “ಕಾಲಾಯ ತಸ್ಮಯ್ ನಮಃ” ಎನ್ನುವ ಸಾಲನ್ನು ಜೋಡೆತ್ತಿನೊಂದಿಗೆ ಫೋಸ್ಟ್‌ ಹಂಚಿಕೊಂಡಿದ್ದಾರೆ. ʻʻಕಾಲವೇ ಎಲ್ಲವನ್ನೂ ಕಲಿಸುತ್ತದೆ, ಮರೆಸುತ್ತದೆ ಎಂದು ಧೈರ್ಯ ಮಾಡಿ ಮುಂದೆ ಸಾಗುತ್ತೇವೆʼʼ ಎನ್ನುವ ಅರ್ಥವಿದೆ. ಈ ಜೋಡೆತ್ತುಗಳನ್ನು ದರ್ಶನ್- ಸುದೀಪ್‌ ಅವರಿಗೆ ಫ್ಯಾನ್ಸ್‌ ಹೋಲಿಸಿ ಕಮೆಂಟ್ ಮಾಡುತ್ತಿದ್ದಾರೆ. ಈ ಜೋಡೆತ್ತುಗಳ ಹಾಗೆ ಮತ್ತೆ ಜತೆಯಾಗಿ ಎಂತಲೂ ವಿಶ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ: Darshan Thoogudeepa: ಈ ಹಿಂದಿನ ಕಹಿ ಘಟನೆಗಳನ್ನು ಮರೆಯೋಣ; ಮಾಧ್ಯಮಗಳಿಗೆ ನಟ ದರ್ಶನ್ ಸಂದೇಶ!

ನಟಿ ಸುಮಲತಾ ಮಾತನಾಡಿ “ಇದು ನಮ್ಮ ವೈಯಕ್ತಿಕ ಕಾರ್ಯಕ್ರಮವಾಗಿದೆ. ಫ್ಯಾಮಿಲಿ ಅಂದ ಮೇಲೆ ಎಲ್ಲರೂ ಒಂದೇ. ಇದು ತೀರಾ ಪರ್ಸನಲ್‌ ವಿಚಾರ. ಈ ಬಗ್ಗೆ ನಾನು ಹೆಚ್ಚು ಮಾತನಾಡುವುದಕ್ಕೆ ಇಷ್ಟಪಡಲ್ಲ” ಎಂದಿದ್ದಾರೆ.

ದಶಕಗಳ ಹಿಂದೆ ದಶಕಗಳ ಹಿಂದೆ ನಟ ದರ್ಶನ್ ಹಾಗೂ ಸುದೀಪ್ ಒಳ್ಳೆಯ ಸ್ನೇಹಿತರಾಗಿದ್ದರು. ಇದ್ದಕ್ಕಿದಂತೆ ದರ್ಶನ್ ತಮ್ಮಿಬ್ಬರ ಸ್ನೇಹಕ್ಕೆ ಮುಗಿದ ಅಧ್ಯಾಯ ಎಂದುಬಿಟ್ಟಿದ್ದರು. “ನಾನು ಸುದೀಪ್ ಇನ್ಮುಂದೆ ಸ್ನೇಹಿತರಲ್ಲ. ನಾವು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ನಟರು ಮಾತ್ರ. ದಯವಿಟ್ಟು ಯಾವುದೇ ಊಹಾಪೋಹಗಳು ಬೇಡ. ಇದು ಇಲ್ಲಿಗೆ ಮುಗಿಯಿತು” ಎಂದು ಪೋಸ್ಟ್ ಮಾಡಿದ್ದರು.

Exit mobile version