Site icon Vistara News

Darshan Thoogudeepa: ಭಾರಿ ಮೊತ್ತಕ್ಕೆ ಕಾಟೇರ ಡಿಜಿಟಲ್‌, ಸ್ಯಾಟಲೈಟ್ ಮಾರಾಟ!

darshans kaatera digital and satellite rights zee network

ಬೆಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ತೂಗುದೀಪ (Darshan Thoogudeepa) ಅಭಿನಯದ ಮುಂದಿನ ಚಿತ್ರ ‘ಕಾಟೇರ’ (Kaatera)ದ ಡಿಸೆಂಬರ್‌ 29ರಂದು ಬಿಡುಗಡೆಯಾಗಲಿದೆ. ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದರೆ ಮತ್ತೆ ಕೆಲವರು ಒಂದು ಕೈ ನೋಡೇಬಿಡೋಣ ಎನ್ನುತ್ತಿದ್ದಾರೆ. ಇದೇ ಸಮಯದಲ್ಲಿ ಪ್ರಭಾಸ್‌ ನಟನೆಯ ಸಲಾರ್‌ ಹಾಗೂ ಶಾರುಖ್‌ ನಟನೆಯ ಡಂಕಿ ರಿಲೀಸ್‌ ಆಗುತ್ತಿವೆ. ಕಳೆದ ವರ್ಷ ವರಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿ ‘ಕಾಟೇರ’ ಸಿನಿಮಾ ಸೆಟ್ಟೇರಿತ್ತು. ಆದರೆ ಆಗ ಟೈಟಲ್ ಫಿಕ್ಸ್ ಆಗಿರಲಿಲ್ಲ. ಈ ವರ್ಷ ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಟೈಟಲ್ ಸಮೇತ ಮೋಷನ್ ಪೋಸ್ಟರ್ ರಿಲೀಸ್ ಆಗಿತ್ತು.

ಈ ಚಿತ್ರಕ್ಕೆ ನಿರ್ದೇಶಕ ತರುಣ್​ ಸುಧೀರ್​ ಆ್ಯಕ್ಷನ್​-ಕಟ್​ ಹೇಳಿದ್ದು, ರಾಕ್​ಲೈನ್​ ವೆಂಕಟೇಶ್​ ನಿರ್ಮಿಸಿದ್ದಾರೆ. ‘ಕಾಟೇರ’ ದರ್ಶನ್‌ ಅಭಿನಯದ 56ನೇ ಸಿನಿಮಾ. ಇದು 70ರ ದಶಕದ ನೈಜ ಘಟನೆಯೊಂದನ್ನು ಆಧರಿಸಿ ತಯಾರಾಗಿದೆ. ಹಳ್ಳಿಯಲ್ಲಿ ನಡೆಯುವ ಕಥೆಯನ್ನೊಳಗೊಂಡ ಈ ಚಿತ್ರದಲ್ಲಿ ದರ್ಶನ್‌ ರಗಡ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವರ್ಷಾರಂಭದಲ್ಲಿ ʼಕ್ರಾಂತಿʼ ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದ ಚಾಲೆಂಜಿಂಗ್‌ ಸ್ಟಾರ್‌ ವರ್ಷಾಂತ್ಯದಲ್ಲಿ ʼಕಾಟೇರʼ ಮೂಲಕ ದರ್ಶನ ನೀಡುತ್ತಿದ್ದಾರೆ.

ಇದೆಲ್ಲದರ ನಡುವೆ ಜೀ ಸಂಸ್ಥೆ ‘ಕಾಟೇರ’ ಚಿತ್ರದ ಡಿಜಿಟಲ್, ಸ್ಯಾಟಲೈಟ್ ರೈಟ್ಸ್ ಕೊಂಡುಕೊಂಡಿದೆ ಎನ್ನಲಾಗುತ್ತಿದೆ. 48 ದಿನಗಳ ಬಳಿಕ ಜೀ5ನಲ್ಲಿ ಸ್ಟ್ರೀಮಿಂಗ್ ಆಗುವ ಸಾಧ್ಯತೆಯಿದೆ. ಫೆಬ್ರವರಿ 16ಕ್ಕೆ ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಿನಿಮಾ ಒಟಿಟಿಗೆ ಬರಬಹುದು. ಯುಗಾದಿ ಹಬ್ಬಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಸಿನಿಮಾ ಪ್ರೀಮಿಯರ್ ಆಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಮಾಲಾಶ್ರೀ ಪುತ್ರಿಯ ಮೊದಲ ಚಿತ್ರ

ಮತ್ತೊಂದು ವಿಶೇಷ ಎಂದರೆ ಸ್ಯಾಂಡಲ್‌ವುಡ್‌ ʼಕನಸಿನ ರಾಣಿʼ ಮಾಲಾಶ್ರೀ ಅವರ ಪುತ್ರಿ ಆರಾಧನಾ ರಾಮ್‌ ನಾಯಕಿಯಾಗಿ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದರ್ಪಣೆ ಮಾಡುತ್ತಿದ್ದಾರೆ. ಪ್ರಭಾವತಿ ಎನ್ನುವ ಹಳ್ಳಿ ಹುಡುಗಿಯಾಗಿಯಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ. ಹಿರಿಯ ನಟಿ ಶ್ರುತಿ ಕೂಡಾ ನಟಿಸಿದ್ದಾರೆ. ಅಲ್ಲದೆ ಹಿರಿಯ ಕಲಾವಿದರಾದ ಅವಿನಾಶ್, ಜಗಪತಿ ಬಾಬು, ವಿನೋದ್ ಆಳ್ವ, ಕುಮಾರ್ ಗೋವಿಂದ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: Darshan Thoogudeepa: ದರ್ಶನ್‌ ಮನೆಯಲ್ಲಿ 8 ಹುಲಿ ಉಗುರಿನ ಮಾದರಿಯ ಪೆಂಡೆಂಟ್?

ಇತ್ತೀಚೆಗೆ ತೆರೆಕಂಡ ಯೋಗರಾಜ್‌ ಭಟ್‌ ನಿರ್ದೇಶನದ ʼಗರಡಿʼ ಚಿತ್ರದಲ್ಲಿ ದರ್ಶನ್‌ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅವರ ಸಿನಿಮಾ ರಿಲೀಸ್‌ ಡೇಟ್‌ ರಿವೀಲ್‌ ಆಗಿದ್ದು ಅಭಿಮಾನಿಗಳು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದೆ. ಈ ಹಿಂದೆ ತರುಣ್​ ಸುಧೀರ್​ ನಿರ್ದೇಶನದ ʼಚೌಕʼ ಚಿತ್ರದಲ್ಲಿ ದರ್ಶನ್‌ ಅತಿಥಿ ಪಾತ್ರ ಮಾಡಿದ್ದರು.

”ಕಾಟೇರ ಏನು ಅಂತ ಎಲ್ರೂ ಕೇಳ್ತಾ ಇದ್ದರು. ಇದು 70ರ ದಶಕದ ಸಿನಿಮಾ. ಎಲ್ಲ ಸ್ಟಾರ್‌ಗಳಿಗಿಂತ ಸಿನಿಮಾ ದೊಡ್ಡದು. ಈ ಸಿನಿಮಾಕ್ಕೆ 85 ದಿನ ಮೀಸಲಿಟ್ಟಿದ್ದೆ. ವಿನೋದ್ ಆಳ್ವಾ ಸರ್ ಜತೆ ನಂಗೆ ಮೊದಲ ಸಿನಿಮಾ. ಅವರ ಸಿನಿಮಾದಲ್ಲಿ ನಾನು ಲೈಟ್ ಬಾಯ್ ಆಗಿದ್ದೆʼʼ ಎಂದು ಈ ಹಿಂದೆ ಚಿತ್ರದ ಬಗ್ಗೆ ಮಾತನಾಡುತ್ತ ದರ್ಶನ್‌ ಹೇಳಿದ್ದರು. ʼʼಈ ಸಿನಿಮಾದಲ್ಲಿ ಆಶ್ಲೀಲತೆ ಇಲ್ಲ. ಸಭ್ಯವಾದ ಸಂಭಾಷಣೆ ಇದೆʼʼ ಎಂದು ತಿಳಿಸಿ ನಿರೀಕ್ಷೆ ಹೆಚ್ಚಿಸಿದ್ದರು.

ಕಾಟೇರʼ ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ನಿರ್ದೇಶನವಿದೆ. ಸುಧಾಕರ್ ಎಸ್‌. ರಾಜ್ ಚಿತ್ರವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಪಂಚೆಯುಟ್ಟು ಹಳ್ಳಿ ಹೈದನಾಗಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಭರಪೂರ ಮನರಂಜನೆ ಜತೆಗೆ ಮಾಸ್ ದೃಶ್ಯಗಳು ರೋಮಾಂಚನಗೊಳಿಸಲಿದೆ ಎಂದು ಅಭಿಮಾನಿಗಳು ಈಗಾಗಲೆ ಲೆಕ್ಕಾಚಾರ ಹಾಕಲು ಆರಂಭಿಸಿದ್ದಾರೆ.

Exit mobile version