Site icon Vistara News

Actor Nani: ಬಾಕ್ಸ್‌ ಆಫೀಸ್‌ನಲ್ಲಿ ‘ದಸರಾ’ ಧಮಾಕ; ನೂರು ಕೋಟಿ ರೂ. ಕ್ಲಬ್ ಸೇರಿದ ನಾನಿ ಸಿನಿಮಾ

Dasara is the first ₹100 crore grossing film for Nani

ಬೆಂಗಳೂರು: ನ್ಯಾಚುರಲ್ ಸ್ಟಾರ್ ನಾನಿ (Actor Nani) ದಸರಾ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಮಾಲ್‌ ಮಾಡುತ್ತಿದೆ. ಕೇವಲ ಆರು ದಿನದಲ್ಲಿಯೇ 100 ಕೋಟಿ ರೂ. ಬಾಚಿಕೊಂಡಿದೆ. ಶ್ರೀರಾಮ ನವಮಿ ಪ್ರಯುಕ್ತ ವಿಶ್ವಾದ್ಯಂತ ತೆರೆಕಂಡ ದಸರಾ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ನೂರು ಕೋಟಿ ಕ್ಲಬ್ ಸೇರಿದ ನಾನಿ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ನಾನಿಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾವಾಗಿರುವ ದಸರಾಗೆ ಯುವ ಪ್ರತಿಭೆ ಶ್ರೀಕಾಂತ್ ಒಡೆಲಾ ನಿರ್ದೇಶನ ಮಾಡಿದ್ದಾರೆ. ಕಲ್ಲಿದ್ದಲು ಗಣಿಯ ಸುತ್ತ ನಡೆಯುವ ಗ್ರಾಮೀಣ ಸೊಗಡಿನ ಕತೆಯಲ್ಲಿ ರಾಷ್ಟ್ರಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸಿದ್ದರು. ವಿಶ್ವಾದ್ಯಂತ ಅದ್ಭುತ ಪ್ರದರ್ಶನ ಕಾಣುತ್ತಿರುವ ದಸರಾ ಚಿತ್ರವನ್ನು ಎಸ್ ಎಸ್ ರಾಜಮೌಳಿ, ಮಹೇಶ್ ಬಾಬು ಹಾಗೂ ಪ್ರಭಾಸ್ ಮೆಚ್ಚಿಕೊಂಡಿದ್ದಾರೆ.

ಎಸ್ ಎಲ್ ವಿ ಕ್ರಿಯೇಷನ್ ನಡಿ ಸುಧಾಕರ್ ಚೆರುಕೂರಿ ಅದ್ಧೂರಿಯಾಗಿ ದಸರಾ ಸಿನಿಮಾ ನಿರ್ಮಿಸಿದ್ದರು. ಚಿತ್ರ ಅಭೂತಪೂರ್ವ ಯಶಸ್ಸು ಕಂಡಿರುವ ಖುಷಿಯಲ್ಲಿರುವ ನಿರ್ಮಾಪಕರು‌ ಹೈದ್ರಾಬಾದ್ ಕರಿಮಾನಗರದಲ್ಲಿ ಸಕ್ಸಸ್ ಕಾರ್ಯಕ್ರಮ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ನಿರ್ದೇಶಕ ಶ್ರೀಕಾಂತ್ ಒಡೆಲಾಗೆ ದುಬಾರಿ ಮೊತ್ತದ ಬಿಎಂಡಬ್ಲ್ಯೂ ಕಾರು ಗಿಫ್ಟ್ ನೀಡಿದ್ದು, ದಸರಾಗೆ ಕೆಲಸ ಮಾಡಿದ ಇಡೀ ತಂಡಕ್ಕೆ ತಲಾ 10 ಗ್ರಾಂ ಚಿನ್ನದ ನಾಣ್ಯವನ್ನು ನೀಡಿದ್ದಾರೆ.

ಇದನ್ನೂ ಓದಿ: Actor Nani: ನಾನಿ ಅಭಿನಯದ ದಸರಾ ಸಿನಿಮಾಗೆ ಸೆಲೆಬ್ರಿಟಿಗಳಿಂದ ಮೆಚ್ಚುಗೆ

ಶೈನ್ ಟಾಮ್ ಚಾಕೋ, ಸಮುದ್ರಖನಿ, ಸಾಯಿಕುಮಾರ್, ಜಾನ್ಸಿ, ಶಮಾ ಖಾಸೀಂ, ರಾಜಶೇಖರ್ ಅನಿಂಗಿ, ರವಿ ತೇಜ ನನ್ನಿಮಾಲಾ ಮುಂತಾದ ತಾರಾಬಳಗ ಚಿತ್ರದಲ್ಲಿದೆ.

Exit mobile version