Site icon Vistara News

Maratha Mandir | ಈ ಥಿಯೇಟರ್‌ನಲ್ಲಿ 27 ವರ್ಷಗಳಿಂದ ಜನರು ವೀಕ್ಷಿಸುತ್ತಿರುವುದು ಅದೊಂದೇ ಚಿತ್ರವನ್ನು! ಯಾವುದು ಆ ಸಿನಿಮಾ?

ಮುಂಬೈ: ಒಂದು ಸಿನಿಮಾವನ್ನು ನೀವು ಎಷ್ಟು ಬಾರಿ ನೋಡಬಲ್ಲಿರಿ. ಒಂದು, ಎರಡು ಅಥವಾ ತುಂಬಾ ಇಷ್ಟವಾದರೆ ಮೂರ್ನಾಲ್ಕು ಬಾರಿ. ಆದರೆ ಮುಂಬೈ ವಾಸಿಗಳು ಇದೊಂದು ಸಿನಿಮಾವನ್ನು (DDLJ at Maratha Mandir) ಕಳೆದ 27 ವರ್ಷಗಳಿಂದ ಪದೇಪದೆ ಥಿಯೇಟರ್‌ನೊಳಗೇ ಕುಳಿತು ನೋಡುತ್ತಿದ್ದಾರೆ. ಥಿಯೇಟರ್‌ ಕೂಡ ಬೇರೆ ಯಾವುದೇ ಸಿನಿಮಾ ಬಂದರೂ ಈ ಸಿನಿಮಾಕ್ಕೆಂದೇ ಒಂದು ಶೋವನ್ನು ಮೀಸಲಿಟ್ಟೇ ಇಡುತ್ತಿದೆ.

ಇದನ್ನೂ ಓದಿ: ಸಿನಿಮಾಗಳಲ್ಲಿ ಹಿಂದೂ ಧರ್ಮದ ಅವಹೇಳನ ತಡೆಯಲು ಧರ್ಮ ಸೆನ್ಸಾರ್‌ ಬೋರ್ಡ್‌ ಸ್ಥಾಪನೆ!
ಈ ರೀತಿ 27 ವರ್ಷಗಳಿಂದ ಬಿಟ್ಟೂಬಿಡದೇ ಪ್ರದರ್ಶನಗೊಳ್ಳುತ್ತಿರುವ ಸಿನಿಮಾ ʼದಿಲ್‌ವಾಲೇ ದುನಿಯಾ ಲೇ ಜಾಯೇಂಗೆʼ. ಶಾರುಕ್‌ ಖಾನ್‌ ಮತ್ತು ಕಾಜಲ್‌ ನಟನೆಯ ಈ ಸಿನಿಮಾ ಮುಂಬೈನ ಮರಾಠಾ ಮಂದಿರ್‌ ಥಿಯೇಟರ್‌ನಲ್ಲಿ ಇಂದಿಗೂ ಪ್ರದರ್ಶನವಾಗುತ್ತಿದೆ. 1995ರ ಮಾರ್ಚ್‌ನಲ್ಲಿ ಸಿನಿಮಾ ಬಿಡುಗಡೆಯಾದಾಗಿನಿಂದ ಈವರೆಗೆ ಪ್ರತಿನಿತ್ಯ ಬೆಳಗ್ಗೆ 11.30ಕ್ಕೆ ಈ ಚಿತ್ರದ ಪ್ರದರ್ಶನವಿರುತ್ತದೆ. ಕೊರೊನಾ ಸಮಯದಲ್ಲಿ ಥಿಯೇಟರ್‌ಗಳನ್ನು ಮುಚ್ಚಿದಾಗ ಬಿಟ್ಟರೆ ಬೇರಾವ ದಿನವೂ ಇಲ್ಲಿ ಈ ಚಿತ್ರದ ಪ್ರದರ್ಶನ ನಿಂತಿಲ್ಲ.

ಈ ಥಿಯೇಟರ್‌ ಮಾಮೂಲಿ ಥಿಯೇಟರ್‌ ಕೂಡ ಅಲ್ಲ. 1,100 ಆಸನ ವ್ಯವಸ್ಥೆ ಇರುವ ದೊಡ್ಡ ಥಿಯೇಟರ್‌ ಇದಾಗಿದೆ. ʻʻಇಂದಿಗೂ ಜನರಲ್ಲಿ ಡಿಡಿಎಲ್‌ಜಿ ಸಿನಿಮಾದ ಬಗ್ಗೆ ಕ್ರೇಜ್‌ ಕಡಿಮೆಯಾಗಿಲ್ಲ. ಹಾಗಾಗಿ ನಾವೂ ಕೂಡ ಸಿನಿಮಾವನ್ನು ತೆಗೆಯುವುದಕ್ಕೆ ಮನಸ್ಸು ಮಾಡುತ್ತಿಲ್ಲ” ಎನ್ನುತ್ತಾರೆ ಥಿಯೇಟರ್‌ನವರು. ಮಧ್ಯಮ ವರ್ಗದವರೇ ಹೆಚ್ಚಾಗಿ ಸಿನಿಮಾ ವೀಕ್ಷಿಸಲು ಬರುವುದರಿಂದಾಗಿ ಬಾಲ್ಕನಿ ಆಸನಕ್ಕೆ 40 ರೂ. ಹಾಗೆಯೇ ಮಾಮೂಲಿ ಆಸನಕ್ಕೆ 30 ರೂ. ಹಣ ಪಡೆಯಲಾಗುತ್ತಿದೆ.

ಇದನ್ನೂ ಓದಿ: Man Survives at Sea | ಸಮುದ್ರದಲ್ಲಿ ಕಳೆದು ಹೋದ, 24 ದಿನ ಕೆಚಪ್‌, ಶುಂಠಿ ಪುಡಿ ತಿಂದು ಬದುಕಿದ, ಇದು ಕಾಸ್ಟ್‌ ಅವೇ ಸಿನಿಮಾದ ನೈಜ ಕಥನ

Exit mobile version