ಬೆಂಗಳೂರು : ಬಾಲಿವುಡ್‌ನ ಪವರ್ ಕಪಲ್ ದೀಪಿಕಾ ಪಡುಕೋಣೆ (Deepika Padukone) ಮತ್ತು ರಣವೀರ್ ಸಿಂಗ್ (ranvir singh) ಅವರು ಖ್ಯಾತ ಸೆಲೆಬ್ರಿಟಿ ಡಿಸೈನರ್ ಮನೀಶ್ ಮಲ್ಹೋತ್ರಾ ಅವರ ಮಿಜ್ವಾನ್ ಫ್ಯಾಷನ್ ಶೋನಲ್ಲಿ ಭಾಗಿಯಾಗಿದ್ದರು. ಮನೀಶ್ ಮಲ್ಹೋತ್ರಾ ಅವರ ಮಿಜ್ವಾನ್ ಫ್ಯಾಷನ್ ಶೋಗೆ 10 ವರ್ಷದ ಸಂಭ್ರಮ.
ಈ ಶೋನಲ್ಲಿ ಅನೇಕ ಗಣ್ಯ ವ್ಯಕ್ತಿಗಳು ಭಾಗಿಯಾಗಿದ್ದರು. ಈ ಬಾರಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ರ‍್ಯಾಂಪ್ ವಾಕ್‌ನಲ್ಲಿ ಸಖತ್ ಆಗಿ ಮಿಂಚಿದ್ದಾರೆ.
ಈ ಕಾರ್ಯಕ್ರಮಕ್ಕೆ ಕರಣ್ ಜೋಹರ್, ಗೌರಿ ಖಾನ್, ಇಶಾನ್ ಖಟ್ಟರ್, ವಿದ್ಯಾ ಬಾಲನ್, ಸಿದ್ಧಾರ್ಥ್ ರಾಯ್ ಕಪೂರ್, ದಿಯಾ ಮಿರ್ಜಾ ಸೇರಿದಂತೆ ಹಲವಾರು ಗಣ್ಯರು ಸಾಕ್ಷಿಯಾದರು.
ದೀಪಿಕಾ ಲೆಹೆಂಗಾವನ್ನು ಧರಿಸಿ ಸಖತ್ ಟ್ರೆಂಡಿ ಲುಕ್‌ನಲ್ಲಿ ಕಾಣಿಸಿಕೊಂಡರೆ, ರಣವೀರ್ ಕಪ್ಪು – ಬಿಳಿ ಕಸೂತಿಯ ಶೇರ್ವಾನಿ ಧರಿಸಿದ್ದರು.
ಇದನ್ನೂ ಓದಿ | Pathaan Film | ದೀಪಿಕಾಗೆ ಕೊಲ್ಲೋಕೆ ಬುಲೆಟ್ ಬೇಕಿಲ್ಲ!
ಫ್ಯಾಶನ್ ಶೋನಲ್ಲಿ ರಣವೀರ್ ಅವರು ಪತ್ನಿ ದೀಪಿಕಾ ಪಡುಕೋಣೆ ಬಗ್ಗೆ ಮಾತನಾಡಿ “ಅವಳು ಸಾಧನೆಗಳ ಮೂಲಕ ಜೀವನ ನಡೆಸುತ್ತಿದ್ದಾಳೆ. ಅದು ನನಗೆ ತುಂಬಾ ಸ್ಫೂರ್ತಿದಾಯಕವಾಗಿದೆʼʼ ಎಂದು ಮೆಚ್ಚುಗೆಯ ಮಾತನ್ನು ಹೇಳಿದ್ದಾರೆ.
ರಣವೀರ್ ಸಿಂಗ್ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ದೀಪಿಕಾ ಸದ್ಯ ಬಾಲಿವುಡ್ ಜತೆಗೆ ತೆಲುಗು ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.
ಇದನ್ನೂ ಓದಿ | ರಣವೀರ್ ಸಿಂಗ್ ನಗ್ನ ಚಿತ್ರ ವಿವಾದ : ಟ್ವಿಟರ್‌ನಲ್ಲಿ ಬಟ್ಟೆ ದಾನ ಅಭಿಯಾನ, RGV ಟ್ವೀಟ್‌ನಲ್ಲಿ ಹೇಳಿದ್ದೇನು?