Site icon Vistara News

Koffee With Karan 8: 5 ವರ್ಷದ ಬಳಿಕ ದೀಪಿಕಾ-ರಣವೀರ್‌ ಮದುವೆ ವಿಡಿಯೊ ಔಟ್‌; ಕರಣ್ ಜೋಹರ್ ಎಮೋಷನಲ್!

Deepika Padukone And Ranveer Singh Wedding Video

ಬೆಂಗಳೂರು: ಕರಣ್ ಜೋಹರ್ (Karan Johar) ಅವರ ಚಾಟ್ ಶೋ ಕಾಫಿ ವಿತ್ ಕರಣ್‌ 8ನೇ (Koffee With Karan 8) ಸೀಸನ್‌ಗೆ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮೊದಲ ಅತಿಥಿಗಳಾಗಿ ಬಂದಿದ್ದರು. ‘ಕಾಫಿ ವಿತ್ ಕರಣ್’ ಎಂಟನೇ ಸೀಸನ್​ನ ಮೊದಲ ಎಪಿಸೋಡ್ ಹಾಟ್​​ಸ್ಟಾರ್​ನಲ್ಲಿ ರಿಲೀಸ್ ಆಗಿದೆ. ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಮೊದಲ ಬಾರಿಗೆ ಈ ಶೋಗೆ ಆಗಮಿಸಿದ್ದಾರೆ. ಶೋನಲ್ಲಿ 5 ವರ್ಷಗಳ ನಂತರ ದಂಪತಿಯ ವಿವಾಹದ ವಿಡಿಯೊ ಬಿಡುಗಡೆ ಮಾಡಲಾಗಿದೆ. ಈ ವಿಡಿಯೊವನ್ನು ಜೋಡಿ ಸಾರ್ವಜನಿಕವಾಗಿ ಹಂಚಿಕೊಂಡಿರುವುದು ಇದೇ ಮೊದಲು.

ಈ ತುಣುಕಿನಲ್ಲಿ ಸ್ಟಾರ್ ಜೋಡಿಯ ಕನಸಿನ ಮದುವೆ ಮತ್ತು ಮದುವೆ ಹಬ್ಬಗಳ ಗ್ಲಿಂಪ್ಸ್‌ಗಳಿವೆ. ಪಾರ್ಟಿಯಲ್ಲಿ ರಣವೀರ್ ಸಿಂಗ್ ದೀಪಿಕಾ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುವುದರೊಂದಿಗೆ ಕ್ಲಿಪ್ ಪ್ರಾರಂಭವಾಗುತ್ತದೆ. ದೀಪಿಕಾ ಅವರ ತಂದೆ ಮತ್ತು ಬ್ಯಾಡ್ಮಿಂಟನ್ ಏಸ್ ಪ್ರಕಾಶ್ ಪಡುಕೋಣೆ ಕುಟುಂಬಕ್ಕೆ ರಣವೀರ್ ಅವರನ್ನು ಸ್ವಾಗತಿಸುವ ಬಗ್ಗೆ ಮಾತನಾಡುತ್ತಾರೆ. ಕ್ಲಿಪ್‌ನಲ್ಲಿ ಮೆಹೆಂದಿ ಸಮಾರಂಭದ ಗ್ಲಿಂಪ್ಸ್ ಕೂಡ ಇದೆ. ಅಲ್ಲಿ ರಣವೀರ್ ದೀಪಿಕಾ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ.

ವಿಡಿಯೊವನ್ನು ಪ್ಲೇ ಮಾಡಿದ ನಂತರ, ಕಾರ್ಯಕ್ರಮದ ನಿರೂಪಕ ಕರಣ್ ಜೋಹರ್ ಎಮೋಷನಲ್ ಆದರು. ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು 2018 ಇಟಲಿಯಲ್ಲಿ ಮದುವೆ ಆದರು. ಆ ಬಳಿಕ ಬೆಂಗಳೂರು ಹಾಗೂ ಮುಂಬೈನಲ್ಲಿ ರಿಸೆಪ್ಷನ್ ಆಯೋಜನೆ ಮಾಡಲಾಗಿತ್ತು. ಸಂಜಯ್ ಲೀಲಾ ಬನ್ಸಾಲಿ ಅವರು ನಿರ್ದೇಶಿಸಿದ ಗೋಲಿಯೋನ್ ಕಿ ರಾಸ್ಲೀಲಾ ರಾಮ್-ಲೀಲಾ (2013) ಅವರ ಮೊದಲ ಚಿತ್ರ. ದಂಪತಿ ಬಾಜಿರಾವ್ ಮಸ್ತಾನಿ ಮತ್ತು “ಪದ್ಮಾವತ್” ನಲ್ಲಿ ಸಹ ನಟಿಸಿದ್ದಾರೆ. ಕಬೀರ್ ಖಾನ್ ಅವರ ಸ್ಪೋರ್ಟ್ಸ್ ಡ್ರಾಮಾ 83ರಲ್ಲಿ ಈ ಜೋಡಿ ತೆರೆ ಹಂಚಿಕೊಂಡಿದೆ.

ಇದನ್ನೂ ಓದಿ: Deepika Padukone: ಇಟಲಿಯಲ್ಲಿ ‘ಫೈಟರ್‌’ ಸಿನಿಮಾ ಶೂಟಿಂಗ್‌ ಜೋರು; ದೀಪಿಕಾ ಪಡುಕೋಣೆ ಫೋಟೊ ವೈರಲ್‌!

ದೀಪಿಕಾ ಪಡುಕೋಣೆ (Deepika Padukone) ಅವರು ಹೃತಿಕ್ ರೋಷನ್ (Hrithik Roshan) ಜತೆ ಶೀಘ್ರದಲ್ಲೇ ʻಫೈಟರ್‌ʼ ಸಿನಿಮಾದಲ್ಲಿ (Fighter Movie) ತೆರೆ ಹಂಚಿಕೊಳ್ಳಲಿದ್ದಾರೆ. ಆ್ಯಕ್ಷನ್ ಥ್ರಿಲ್ಲರ್ ಆಗಿರುವ ಈ ಸಿನಿಮಾ ಘೋಷಣೆಯಾದಾಗಿನಿಂದ ಸಾಕಷ್ಟು ಸದ್ದು ಮಾಡುತ್ತಿದೆ. ದೀಪಿಕಾ ಕೊನೆಯ ಬಾರಿಗೆ ಶಾರುಖ್ ಖಾನ್ ಎದುರು ಬ್ಲಾಕ್ಬಸ್ಟರ್ ಹಿಟ್ ಚಿತ್ರ ಪಠಾಣ್‌ನಲ್ಲಿ ಹಾಗೂ ಜವಾನ್‌ನಲ್ಲಿ ಕಾಣಿಸಿಕೊಂಡರು.ಇದರ ಜತೆಗೆ ದೀಪಿಕಾ ಅವರು ನಾಗ್‌ ಅಶ್ವಿನ್‌ ನಿರ್ದೇಶನದ ಕಲ್ಕಿ 2898 AD ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಹಿರಿಯ ನಟ ಅಮಿತಾಭ್‌ ಬಚ್ಚನ್‌ ಮತ್ತು ತೆಲುಗು ನಟ ಪ್ರಭಾಸ್‌ ಕೂಡ ನಟಿಸುತ್ತಿದ್ದಾರೆ.

Exit mobile version