Site icon Vistara News

Deepika Padukone: ʻಟೈಮ್ʼ ಮ್ಯಾಗಜಿನ್‌ ಕವರ್‌ ಪೇಜ್‌ನಲ್ಲಿ ಮಿಂಚಿದ ದೀಪಿಕಾ ಪಡುಕೋಣೆ

Deepika Padukone appears on Time magazine cover as ‘global star

ಬೆಂಗಳೂರು: ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ (Deepika Padukone) ʻಟೈಮ್ʼ ಮ್ಯಾಗಜಿನ್‌ (Time magazine) ಕವರ್‌ ಪೇಜ್‌ನಲ್ಲಿ ಕಾಣಿಸಿಕೊಂಡಿದ್ದು, ‘ಗ್ಲೋಬಲ್ ಸ್ಟಾರ್‌ ಆಗಿ ಹೊರಹೊಮ್ಮಿದ್ದಾರೆ. 2018ರಲ್ಲಿ, ಟೈಮ್ಸ್‌ನ ಅತ್ಯಂತ ಪ್ರಭಾವಶಾಲಿ ಪಟ್ಟಿಯಲ್ಲಿ ನಿಯತಕಾಲಿಕೆಯಿಂದ ಗೌರವಿಸಲ್ಪಟ್ಟ ಜನರಲ್ಲಿ ದೀಪಿಕಾ ಕೂಡ ಒಬ್ಬರು. ದೀಪಿಕಾ ಅವರನ್ನು ‘ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದ ಅತ್ಯಂತ ಜನಪ್ರಿಯ ನಟಿ’ ಎಂದು ಕರೆಯಲಾಗುತ್ತದೆ. ದೀಪಿಕಾ ನಿರೂಪಕಿಯಾಗಿ ಫಿಫಾ ವಿಶ್ವಕಪ್ ಟ್ರೋಫಿಯನ್ನು ಅನಾವರಣ ಮಾಡಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.

ಮೆಂಟಲ್ ಹೆಲ್ತ್ ಕ್ಷೇತ್ರಕ್ಕೆ ನೀಡಿದ ಮಹತ್ವದ ಕೊಡುಗೆಗಾಗಿ ದೀಪಿಕಾ ಪಡುಕೋಣೆ ಅವರಿಗೆ ಟೈಮ್ 100 ಇಂಪ್ಯಾಕ್ಟ್ ಪ್ರಶಸ್ತಿ ನೀಡಿ ಗೌರವಿಸಿದೆ. ಈಗ ಟೈಮ್ ಮ್ಯಾಗಜಿನ್‌ ಕವರ್‌ ಪೇಜ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ದೀಪಿಕಾ ಪಡುಕೋಣೆ ಟೈಮ್‌ನಿಂದ ಎರಡು ಬಾರಿ ಗೌರವಿಸಲ್ಪಟ್ಟ ಏಕೈಕ ಭಾರತೀಯ ಸೆಲೆಬ್ರಿಟಿ ಆಗಿದ್ದಾರೆ. ಸಂದರ್ಶನದಲ್ಲಿ, ದೀಪಿಕಾ ಆಸ್ಕರ್‌ನಲ್ಲಿ ಭಾರತ ಪಡೆದ ಪ್ರಶಸ್ತಿ ವಿಚಾರವಾಗಿ ಮಾತನಾಡಿದ್ದಾರೆ.

ದೀಪಿಕಾ ಆಸ್ಕರ್‌ ವೇದಿಕೆಯಲ್ಲಿ ನಿರೂಪಣೆಯನ್ನು ಮಾಡಿದ್ದರು. ತೆಲುಗು ಚಲನಚಿತ್ರ ಆರ್‌ಆರ್‌ಆರ್‌ ಸಿನಿಮಾದ ನಾಟು ನಾಟು ಹಾಡು ಪ್ರಶಸ್ತಿಯನ್ನು ಗೆದ್ದುಕೊಂಡಿತು. ಗುನೀತ್ ಮೊಂಗಾ ಅವರ ದಿ ಎಲಿಫೆಂಟ್ ವಿಸ್ಪರರ್ಸ್ ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಬಗ್ಗೆ ನಟಿ ಮಾತನಾಡಿ ʻʻಇಷ್ಟಕ್ಕೆ ನಾವು ತೃಪ್ತರಾಗಬಾರದು. ನಾವು ಒಂದು ಹಾಡಿಗೆ ಮತ್ತು ಒಂದು ಸಾಕ್ಷ್ಯಚಿತ್ರಕ್ಕೆ ಪಡೆದ ಆಸ್ಕರ್‌ನಿಂದ ಸಂತೋಷವಾಗಿರಬೇಕೆಂದು ನಾನು ಭಾವಿಸುವುದಿಲ್ಲ. ಇದು ಆರಂಭವಷ್ಟೇ. ಇನ್ನಷ್ಟು ಪ್ರಶಸ್ತಿಗಳನ್ನು ಪಡೆದುಕೊಳ್ಳಬೇಕುʼʼಎಂಬುದಾಗಿ ನಟಿ ಹೇಳಿದರು.

ಇದನ್ನೂ ಓದಿ: Actor Prabhas: ಪ್ರಭಾಸ್‌-ದೀಪಿಕಾ ಪಡುಕೋಣೆ ಅಭಿನಯದ ʼಪ್ರಾಜೆಕ್ಟ್‌ ಕೆʼ ಸಿನಿಮಾ ರಿಲೀಸ್‌ ಡೇಟ್‌ ಮುಂದೂಡಿಕೆ?

ʻಟೈಮ್ʼ ಮ್ಯಾಗಜಿನ್‌ ಕವರ್‌ ಪೇಜ್‌ನಲ್ಲಿ ದೀಪಿಕಾ

ದೀಪಿಕಾ ಮುಂಬರುವ ಯೋಜನೆಯಾದ ʻಪ್ರಾಜೆಕ್ಟ್‌ ಕೆʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ಯಾನ್-ಇಂಡಿಯಾ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವಾದ ʻಪ್ರಾಜೆಕ್ಟ್ ಕೆʼ ಯಲ್ಲಿ ನಟ ಪ್ರಭಾಸ್ ಎದುರು ಕಾಣಿಸಿಕೊಳ್ಳಲಿದ್ದಾರೆ. ಸಿದ್ಧಾರ್ಥ್ ಆನಂದ್ ಅವರ ಮುಂದಿನ ಆ್ಯಕ್ಷನ್ ಥ್ರಿಲ್ಲರ್ ಚಿತ್ರ ʻಫೈಟರ್ʼ ಸಿನಿಮಾದಲ್ಲಿ ಹೃತಿಕ್ ರೋಷನ್ ಜತೆ ತೆರೆ ಹಂಚಿಕೊಳ್ಳಲಿದ್ದಾರೆ. ಈ ವರ್ಷದ ಅತಿ ದೊಡ್ಡ ಹಿಟ್ ಸಿನಿಮಾವಾದ ಪಠಾಣ್‌ ಬಳಿಕ ಸಿದ್ಧಾರ್ಥ್ ಆನಂದ್ ಅವರೊಂದಿಗೆ ಇದು ಎರಡನೇ ಯೋಜನೆ ಅವರದ್ದಾಗಿದೆ. ಮುಂದಿನ ವರ್ಷ ಜನವರಿ 25ರಂದು ಬಿಡುಗಡೆಯಾಗಲಿರುವ ಫೈಟರ್‌ ಸಿನಿಮಾದಲ್ಲಿ, ಕರಣ್ ಸಿಂಗ್ ಗ್ರೋವರ್ ಮತ್ತು ಅಕ್ಷಯ್ ಒಬೆರಾಯ್ ಕೂಡ ನಟಿಸಲಿದ್ದಾರೆ.

Exit mobile version