Site icon Vistara News

Deepika Padukone: ದೀಪಿಕಾ ಪಡುಕೋಣೆಗೆ ವಿಶೇಷ ಗೌರವ ನೀಡಿದ ಆಸ್ಕರ್!

Deepika Padukone

ಬೆಂಗಳೂರು: `ಆಸ್ಕರ್’ (ದಿ ಅಕಾಡೆಮಿ ಪ್ರಶಸ್ತಿ) ದೀಪಿಕಾ ಪಡುಕೋಣೆಗೆ (Deepika Padukone) ವಿಶೇಷ ಗೌರವ ನೀಡಿದೆ. ದೀಪಿಕಾ ಪಡುಕೋಣೆ, ರಣ್‌ವೀರ್ ಸಿಂಗ್, ಪ್ರಿಯಾಂಕಾ ಚೋಪ್ರಾ ನಟನೆಯ ‘ಬಾಜಿರಾವ್ ಮಸ್ತಾನಿ’ (2015 film Bajirao Mastani) ಸಿನಿಮಾದ “ದಿವಾನಿ ಮಸ್ತಾನಿ..” (Deewani Mastani) ಹಾಡನ್ನು ಆಸ್ಕರ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು ಗೌರವ ಸೂಚಿಸಿದೆ.

ದೀಪಿಕಾ ಅವರ ಹಾಡಿನ ಕ್ಲಿಪ್ ಶೇರ್‌ ಮಾಡಿದ ಆಸ್ಕರ್ ಪ್ರಶಸ್ತಿ ಅಧಿಕೃತ ಇನ್‌ಸ್ಟಾಗ್ರಾಂ ಪೇಜ್‌ ಹೀಗೆ ಬರೆದುಕೊಂಡಿದೆ “ ಬಾಜಿರಾವ್ ಮಸ್ತಾನಿ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ʻದೀವಾನಿ ಮಸ್ತಾನಿʼಗೆ ಹೆಜ್ಜೆ ಹಾಕಿದ್ದು ಇದು. (ಶ್ರೇಯಾ ಘೋಷಾಲ್ ಹಾಡಿದ್ದಾರೆ) ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿದ್ದಾರೆ. ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಚೋಪ್ರಾ ನಟಿಸಿದ್ದಾರೆʼʼಎಂದು ಬರೆದುಕೊಂಡಿದೆ.

ಇನ್ನು ಈ ಪೋಸ್ಟ್‌ಗೆ ದೀಪಿಕಾ ಪತಿ ರಣವೀರ್ ಸಿಂಗ್ ಅವರು “ಮೆಸ್ಮೆರಿಕ್!” ಎಂದು ಕಮೆಂಟ್‌ ಮಾಡಿದ್ದಾರೆ. ಅಭಿಮಾನಿಯೊಬ್ಬರು ʻʻಹಿಂದಿ ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠತೆಗಳಲ್ಲಿ ಇದು ಒಂದುʼʼಎಂದು ಬರೆದುಕೊಂಡಿದ್ದಾರೆ. ಈಗ ಅಕಾಡೆಮಿ ಕೊನೆಗೂ ಬಾಲಿವುಡ್‌ಗೆ ಮನ್ನಣೆಯನ್ನು ನೀಡಿದೆ” ಎಂದು ಇನ್ನೊಬ್ಬರು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Deepika Padukone: ಅನಂತ್ ಅಂಬಾನಿ ಪ್ರಿ ವೆಡ್ಡಿಂಗ್‌: ಸಖತ್‌ ಸ್ಟೆಪ್ಸ್ ಹಾಕಿದ ಪ್ರೆಗ್ನೆಂಟ್‌ ನಟಿ!

ಕಳೆದ ವರ್ಷ ಮಾರ್ಚ್‌ನಲ್ಲಿ, ಲಾಸ್ ಏಂಜಲೀಸ್‌ನಲ್ಲಿ ನಡೆದ 95ನೇ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ದೀಪಿಕಾ ಭಾಗವಹಿಸಿದ್ದರು. ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ಆಸ್ಕರ್‌ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿರೂಪಣೆ ಮಾಡಿದ್ದು ಗಮನ ಸೆಳೆದಿತ್ತು. ನಾಟು ನಾಟು ಹಾಡಿಗೆ ಆಸ್ಕರ್‌ ಪ್ರಶಸ್ತಿ ಘೋಷಣೆ ವೇಳೆ ದೀಪಿಕಾ ಪಡುಕೋಣೆ ಅವರು ಆರ್‌ಆರ್‌ಆರ್‌ ಸಿನಿಮಾ ಹಾಗೂ ನಾಟು ನಾಟು ಹಾಡಿನ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅವರ ಭಾಷಣದ ವಿಡಿಯೊ ಕೂಡ ಮೆಚ್ಚುಗೆಗೆ ಪಾತ್ರವಾಗಿತ್ತು.

ದೀಪಿಕಾ ಪಡುಕೋಣೆ ಈಗ ಗರ್ಭಿಣಿ. ಈ ವರ್ಷ ಸೆಪ್ಟೆಂಬರ್​ ತಿಂಗಳಲ್ಲಿ ಅವರು ಮಗುವಿಗೆ ಜನ್ಮ ನೀಡಲಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್ ಅವರು ಪರಸ್ಪರ ಪ್ರೀತಿ ಮದುವೆ ಆಗಿದ್ದು 2018ರಲ್ಲಿ. ಆರು ವರ್ಷಗಳ ಬಳಿಕ ಅವರು ಮಗು ಹೊಂದುವ ನಿರ್ಧಾರಕ್ಕೆ ಬಂದಿದ್ದಾರೆ. ಫೈಟರ್‌ನಲ್ಲಿ ಹೃತಿಕ್ ರೋಷನ್ ಜತೆಗೆ ಕೊನೆಯದಾಗಿ ಕಾಣಿಸಿಕೊಂಡ ದೀಪಿಕಾ, ಸದ್ಯ ಸಿನಿಮಾದಿಂದ ಬ್ರೇಕ್‌ ಪಡೆದುಕೊಂಡಿದ್ದಾರೆ. ದೀಪಿಕಾ ಗರ್ಭಿಣಿಯಾಗಿದ್ದಾರೆಂಬ ವದಂತಿಗಳಿಗೆ ಒಳಗಾಗುತ್ತಿರುವುದು ಇದೇ ಮೊದಲಲ್ಲ. ‘ಫೈಟರ್‌’ ಚಿತ್ರದ ಪ್ರಚಾರದ ಫೋಟೋಗಳನ್ನು ದೀಪಿಕಾ ಹಂಚಿಕೊಂಡಾಗ, ಅಭಿಮಾನಿಗಳು ಹೊಟ್ಟೆ ಉಬ್ಬಿರುವುದನ್ನು ಅನ್ನು ಗಮನಿಸಿದ್ದರು. ಅಲ್ಲದೇ, ಕಮೆಂಟ್ ವಿಭಾಗದಲ್ಲಿ ಗರ್ಭಿಣಿಯೇ ಎಂಬ ಪ್ರಶ್ನೆಗಳು ತುಂಬಿದ್ದವು.

Exit mobile version