Site icon Vistara News

Deepika Padukone: ಎಕಾನಮಿ ಕ್ಲಾಸ್‌ ವಿಮಾನದಲ್ಲಿ ಪ್ರಯಾಣಿಸಿದ ದೀಪಿಕಾ: ಹಾಡಿ ಹೊಗಳಿದ ನೆಟ್ಟಿಗರು!

Deepika Padukone

ಬೆಂಗಳೂರು: ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ (Deepika Padukone) ಇತ್ತೀಚೆಗೆ ಲಾಸ್ ಏಂಜಲೀಸ್‌ಗೆ ತೆರಳಿದ್ದಾರೆ. ಈ ವೇಳೆ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ಹಾಗೇಯೇ ಎಕಾನಮಿ ಕ್ಲಾಸ್‌ ವಿಮಾನದಲ್ಲಿ ಕುಳಿತುಕೊಂಡು ಪ್ರಯಾಣಿಸಿದ್ದಕ್ಕಾಗಿ ಭಾರಿ ಚರ್ಚೆಯಲ್ಲಿದ್ದಾರೆ. ನಟಿ ಡೌನ್‌ ಟು ಅರ್ಥ್‌ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಅಭಿಮಾನಿಗಳು ಕಮೆಂಟ್‌ ಮೂಲಕ ವ್ಯಕ್ತಪಡಿಸುತ್ತಿದ್ದಾರೆ.

ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗ ಅಭಿಮಾನಿಯೊಬ್ಬರು ಎಕಾನಮಿ ಕ್ಲಾಸ್‌ ವಿಮಾನದಲ್ಲಿ ದೀಪಿಕಾ ಅವರು ಪ್ರಯಾಣ ಮಾಡಿದ್ದು, ನಟಿ ಡೌನ್‌ ಟು ಅರ್ಥ್‌ ಹಾಗೂ ಜೀರೊ ಅಟಿಟ್ಯೂಡ್‌ ಅವರಲ್ಲಿ ಇದೆ ಎಂದು ಕಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು ಈ ಬಗ್ಗೆ ʻʻಅವರು ಹೇಗೆ ಪ್ರಯಾಣಿಸಬೇಕು ಅಥವಾ ಹೇಗೆ ಬದುಕಬೇಕು ಎಂಬುದು ಅವರ ಆಯ್ಕೆಯಾಗಿದೆ. ಒಮ್ಮೆ ರಣವೀರ್ ಸಿಂಗ್ ಕೂಡ ಹಿಗೇ ಕಾಣಿಸಿಕೊಂಡಿದ್ದರು. ಅದೇ ವಿಮಾನದಲ್ಲಿ ನಾನು ಚೆನ್ನೈ-ಮುಂಬೈನಲ್ಲಿ ಪ್ರಯಾಣಿಸುತ್ತಿದ್ದೆ. ನನ್ನ ಹಿಂದೆಯೇ ಕುಳಿತಿದ್ದರುʼʼ ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. ಕಿತ್ತಳೆ ಬಣ್ಣದ ಉಡುಪು ಧರಿಸಿದ್ದ ನಟಿ, ಜತೆಗೆ ಡ್ರೆಸ್‌ಗೆ ಮ್ಯಾಚ್‌ ಆಗೋ ಕ್ಯಾಫ್‌ ಹಾಗೂ ಸನ್‌ಗ್ಲಾಸ್‌ ಅನ್ನೂ ಸಹ ಧರಿಸಿದ್ದರು. ಆ ವಿಮಾನದಲ್ಲಿ ಪ್ರಯಾಣಿಸಿದ್ದ ವ್ಯಕ್ತಿಯೊಬ್ಬರು ತೆಗೆದ ಈ ವಿಡಿಯೋ ವೈರಲ್‌ ಆಗಿದೆ. 

ಇದನ್ನೂ ಓದಿ: Deepika Padukone | ದೀಪಿಕಾ ಬರ್ತ್ ಡೇಗೆ ಪ್ರಾಜೆಕ್ಟ್ ಕೆ ಗಿಫ್ಟ್; ಕದ್ದು ಕೊಟ್ಟಂತಿದೆ ಎಂತಿದ್ದಾರೆ ಅಭಿಮಾನಿಗಳು

ವಿಮಾನದಲ್ಲಿದ್ದ ನೃತ್ಯ ನಿರ್ದೇಶಕ ವರುಣ್ ಗುರುನಾಥ್ ಅವರು ದೀಪಿಕಾ ಅವರನ್ನು ಭೇಟಿಯಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಗುರುನಾಥ್ ಹಾಗೂ ಅವರ ತಾಯಿ ದೀಪಿಕಾ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿರುವ ಫೋಟೊ ಹಂಚಿಕೊಂಡು ʻʻನನ್ನ ತಾಯಿ ಪಡುಕೋಣೆ ಅವರೊಂದಿಗೆ ಮಾತುಕತೆ ನಡೆಸಿದರು. ಮತ್ತು ಅವರು ಆರಾಮದಾಯಕ ಪ್ರಯಾಣವನ್ನು ಹೊಂದಿದ್ದೀರಾ ಎಂದು ಕೇಳಿದರು. ನಾವು ಪಠಾಣ್‌ ಯಶಸ್ಸಿಗೆ ಅಭಿನಂದನೆ ಸಲ್ಲಿಸಿದೆವು. ಅವರು ಧನವ್ಯಾದ ಹೇಳಿದರು. ದೀಪಿಕಾ ಅವರನ್ನು ಭೇಟಿಯಾಗಿದ್ದು ತುಂಬ ಸಂತೋಷವಾಯಿತು. ಅವರು ಸೂಪರ್ ಫ್ರೆಂಡ್ಲಿ . 16 ಗಂಟೆಗಳ ಸುದೀರ್ಘ ಪ್ರಯಾಣದ ಹೊರತಾಗಿಯೂ, ಅವರು ತಮ್ಮ ಅಭಿಮಾನಿಗಳನ್ನು ಭೇಟಿಯಾಗಲು ಸಿದ್ಧರಿದ್ದರುʼʼ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Deepika Padukone | ಕತಾರ್​ನಲ್ಲೂ ದೀಪಿಕಾ ದಿರಸಿಗೆ ಆಕ್ಷೇಪ; ಟ್ರೋಲ್ ಆಗಲು ಕಾರಣವೇನು?

ʻಪಠಾಣ್’ ಚಿತ್ರದ ಯಶಸ್ಸಿನ ಬೆನ್ನಲ್ಲೇ ದೀಪಿಕಾ ಅವರು ಹೃತಿಕ್ ರೋಷನ್ ಜತೆಗಿನ ‘ಫೈಟರ್’ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.

Exit mobile version