ಬೆಂಗಳೂರು: ದೀಪಿಕಾ ಪಡುಕೋಣೆ ಆಫ್ ಶೋಲ್ಡರ್ ಬ್ಲ್ಯಾಕ್ ಗೌನ್ ಮತ್ತು ಗ್ಲೌಸ್‌ನಲ್ಲಿ ಆಸ್ಕರ್‌ನಲ್ಲಿ (Oscars 2023) ಅತ್ಯುತ್ತಮ ಉಡುಗೆ ತೊಟ್ಟ ಸೆಲೆಬ್ರಿಟಿಗಳಲ್ಲಿ ಒಬ್ಬರಾಗಿದ್ದರು. ನಾಟು ನಾಟು ಹಾಡು ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದ ನಂತರ, ಪಾರ್ಟಿಯ ಬಳಿಕ ನಟಿ ದೀಪಿಕಾ ಗುಲಾಬಿ ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ. ಹಾಲಿವುಡ್ ಮತ್ತು ಭಾರತೀಯ ಸೆಲೆಬ್ರಿಟಿಗಳೊಂದಿಗೆ ವ್ಯಾನಿಟಿ ಫೇರ್ ಪಾರ್ಟಿಗಾಗಿ ನಟಿ ಕಂಗೊಳಿಸಿದ್ದಾರೆ. ಫೋಟೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ದೀಪಿಕಾ ಅವರ ಆಸ್ಕರ್ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ಆಲಿಯಾ ಭಟ್, ಸಮಂತಾ ರುತ್ ಪ್ರಭು, ಕಂಗನಾ ರಣಾವತ್ ಹೀಗೆ ಹಲವು ನಟಿಯರು ಅವರ ಉಡುಗೆಗೆ ಹಾಡಿ ಹೊಗಳಿದ್ದಾರೆ. ಆಲಿಯಾ ದೀಪಿಕಾ ಅವರನ್ನು ‘ಸ್ಟನ್ನರ್’ ಎಂದು ಕರೆದರೆ, ಕಂಗನಾ ಅವರು ಈವೆಂಟ್‌ನಲ್ಲಿ ಭಾರತೀಯ ಮಹಿಳೆಯಾಗಿ ಪ್ರತಿನಿಧಿಸಿದಕ್ಕೆ ಶ್ಲಾಘಿಸಿದರು.
ಪ್ರತಿಷ್ಠಿತ ಅಕಾಡೆಮಿ (ಆಸ್ಕರ್) ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದ ವೇದಿಕೆಯ ಮೇಲೆ ಭಾರತೀಯ ನಟಿ ದೀಪಿಕಾ ಪಡುಕೋಣೆ ಪ್ರಶಸ್ತಿ ಪ್ರದಾನ ಮಾಡುವವರಾಗಿ ಇತಿಹಾಸ ಸೃಷ್ಟಿಸಿದರು. ಕ್ಲಾಸಿಕ್ ಕಪ್ಪು ಗೌನ್‌ನಲ್ಲಿ ದೀಪಿಕಾ ಮಿಂಚಿದ್ದರು. ದೀಪಿಕಾ ಆಸ್ಕರ್ ಪ್ರದಾನ ಮಾಡುತ್ತಿರುವ ಮೂರನೇ ಭಾರತೀಯ ವ್ಯಕ್ತಿ. ಈ ಹಿಂದೆ ಪರ್ಸಿಸ್ ಖಂಬಾಟಾ ಮತ್ತು ಪ್ರಿಯಾಂಕ ಚೋಪ್ರಾ ಪ್ರಶಸ್ತಿ ಪ್ರದಾನ ಮಾಡಿದ್ದರು.