ಬೆಂಗಳೂರು: ಕಾಫಿ ವಿತ್ ಕರಣ್ ಸೀಸನ್ 8ರಲ್ಲಿ ದೀಪಿಕಾ ಪಡುಕೋಣೆ (Deepika Padukone) ಮತ್ತು ರಣವೀರ್ ಸಿಂಗ್ ಕಾಣಿಸಿಕೊಂಡದ್ದು ಹಲವು ವಿಚಾರಗಳ ಬಗ್ಗೆ ಹೇಳಿಕೊಂಡಿದ್ದರು. ಇಬ್ಬರ ವೈಯಕ್ತಿಯ ಜೀವನವನ್ನು ಜನ ಪ್ರಶ್ನಿಸಿ ಟ್ರೋಲ್ ಮಾಡಿದ್ದಾರೆ. ಆದರೆ ಇದ್ಯಾವುದಕ್ಕೂ ಜೋಡಿ ತೆಲೆ ಕೆಡಿಸಿಕೊಂಡಿಲ್ಲ. ಇದೀಗ ʻಲುಕಿಂಗ್ ಲೈಕ್ ಎ ವಾವ್ʼ ರೀಲ್ಸ್ ಮಾಡಿ ಪೋಸ್ಟ್ ಹಂಚಿಕೊಂಡಿದ್ದಾರೆ. ‘ಲುಕ್ಕಿಂಗ್ ಲೈಕ್ ಎ ವಾವ್’ ಆಡಿಯೊವನ್ನು ಬಳಸಿ ಮಾಡಿರುವ ವಿಡಿಯೊಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದರ ಜತೆಗೆ ನಟ ರಣವೀರ್ ಸಿಂಗ್ ಕೂಡ ನಕ್ಕಿದ್ದಾರೆ.
ವಿಡಿಯೊದಲ್ಲಿ ದೀಪಿಕಾ ಅವರು ಗುಲಾಬಿ ಬಣ್ಣದ ಸೀರೆಯಲ್ಲಿ ಕಂಡಿದ್ದಾರೆ. ಲುಕ್ಕಿಂಗ್ ಲೈಕ್ ಎ ವಾವ್ ಆಡಿಯೋಗೆ ಲಿಪ್ ಸಿಂಕ್ ಮಾಡಿದ್ದಾರೆ. ಅದನ್ನು ಜಸ್ಟ್ ಲುಕ್ಕಿಂಗ್ ಲೈಕ್ ಎ ವಾವ್ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.
ಈ ವಿಡಿಯೊಗೆ ರಣವೀರ್ ಅವರಿಂದಲೂ ಕಮೆಂಟ್ ಸಿಕ್ಕಿದ್ದು ಹೀಗೆ ಬರೆದಿದ್ದಾರೆ, “ಹಹಾಹಾಹಾಹಾಹಾಹಾಹಾಹಾಹಾಹಾಹಾಹಾಹಾ DEDD!!!!!!” ಕಾಫಿ ವಿತ್ ಕರಣ್ ನಿರೂಪಕ ಕರಣ್ ಜೋಹರ್ ಕೂಡ ಕಮೆಂಟ್ ಮಾಡಿದ್ದಾರೆ. ಆದರೆ ದೀಪಿಕಾ ಅವರ ತಂಗಿ ಅನಿಶಾ, “ಆದರೆ ನೀವು ಯಾಕೆ ಮೌಸ್ ಕಲರ್ ಧರಿಸಿಲ್ಲ?” ಎಂದು ಪ್ರತಿಕ್ರಿಯಿಸಿದ್ದಾರೆ.
ʻಲುಕ್ಕಿಂಗ್ ಲೈಕ್ ಎ ವಾವ್’ ಮತ್ತು ‘ಮೈನೆ ಪೆಹನಾ ಹೈ ಮೌಸ್ ಕಲರ್’ ಎಂಬ ಎರಡು ವಿಡಿಯೊಗಳು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿವೆ. ಅವುಗಳಲ್ಲಿ, ತಮ್ಮ ಉಡುಪುಗಳ ಬ್ರ್ಯಾಂಡ್‌ಗಳಿಗಾಗಿ ಇನ್‌ಸ್ಟಾ ಖಾತೆಗಳನ್ನು ನಡೆಸುತ್ತಿರುವ ಇಬ್ಬರು ಮಹಿಳೆಯರು, ತಮ್ಮ ವಿಶಿಷ್ಟ ಶೈಲಿಯಲ್ಲಿ ಕ್ಯಾಮೆರಾಗಳಿಗೆ ಬಟ್ಟೆಗಳನ್ನು ತೋರಿಸುತ್ತಾರೆ. ಅದು ಕಳೆದ ವಾರದಲ್ಲಿ ಲಕ್ಷಾಂತರ ಜನರನ್ನು ಅಟ್ರ್ಯಾಕ್ಟ್ ಮಾಡಿತ್ತು. ವಾಮಿಕಾ ಗಬ್ಬಿ ಕೂಡ ಈ ವಾರದ ಆರಂಭದಲ್ಲಿ ಟ್ರೆಂಡಿಂಗ್ ಆಡಿಯೊಗೆ ವಿಡಿಯೊವನ್ನು ಮಾಡಿದ್ದಾರೆ.
ಇದನ್ನೂ ಓದಿ: Ranveer Singh: ರಣವೀರ್ ಜತೆ ಡೇಟಿಂಗ್ ಮಾಡಿದ್ರಾ ಅನುಷ್ಕಾ? ದೀಪಿಕಾ ಪತಿ ಕಿಡಿಯಾಗಿದ್ಯಾಕೆ?
ಕಾಫಿ ವಿತ್ ಕರಣ್ ಸೀಸನ್ 8ರ ಶೋನಲ್ಲಿ ಇತ್ತೀಚಿನ ಸಂಚಿಕೆಯಲ್ಲಿ ರಣವೀರ್ ಸಿಂಗ್ (Ranveer Singh) ಹಾಗೂ ದೀಪಿಕಾ ಪಡುಕೋಣೆ ಅತಿಥಿಯಾಗಿ ಬಂದಿದ್ದರು. ಈ ಶೋನಲ್ಲಿ ದೀಪಿಕಾ ಮೇಲೆ ರಣವೀರ್ ಕೋಪ ಮಾಡಿಕೊಂಡಿದ್ದರು. ಇದೆಲ್ಲ ವಿಡಿಯೊ ವೈರಲ್ ಆಗಿರುವ ಬೆನ್ನಲ್ಲೇ ದೀಪಿಕಾ ಅವರು ತಮ್ಮ ಡೇಟಿಂಗ್ ಕುರಿತಾಗಿ ರಣವೀರ್ ಮುಂದೆಯೇ ಶೋನಲ್ಲಿ ಮಾತನಾಡಿದ್ದರು. ಅದು ರಣವೀರ್ ಕೋಪಕ್ಕೆ ಕಾರಣವಾಗಿತ್ತು. ‘ಇಬ್ಬರೂ ರಿಲೇಶನ್ಶಿಪ್ನಲ್ಲಿ ಇದ್ದೀರಿ ಎಂದು ಯಾವಾಗ ಗೊತ್ತಾಯಿತು’ ಎಂದು ಜೋಡಿಗೆ ಕರಣ್ ಜೋಹರ್ ಕೇಳಿದ್ದರು. ಇದಕ್ಕೆ ದೀಪಿಕಾ ‘ಕೆಲವು ಕಾಂಪ್ಲಿಕೇಟೆಡ್ ರಿಲೇಶನ್ಷಿಪ್ನಿಂದ ಆಗತಾನೇ ಹೊರಬಂದಿದ್ದೆ. ಹಾಗಾಗಿ ಯಾರ ಉಸಾಬರಿಯೂ ಬೇಡ ಅನ್ನಿಸಿತ್ತು. ಸಿಂಗಲ್ ಆಗಿರುವುದಕ್ಕೆ ಇಷ್ಟವಾಗಿತ್ತು. ಆ ಸಮಯದಲ್ಲಿ ರಣವೀರ್ ಸಿಕ್ಕರು. ನಮ್ಮಿಬ್ಬರ ಮಧ್ಯೆ ನಿಜವಾದ ಕಮಿಟ್ಮೆಂಟ್ ಇರ್ಲೇ ಇಲ್ಲ. ಅದಾಗಲೇ ಹಲವಾರು ಪುರುಷರ ಜತೆ ಹೋಗಿದ್ದೆ. ಸಾಕಷ್ಟು ಜನರನ್ನು ಭೇಟಿ ಮಾಡುತ್ತಿದ್ದೆ. ಆದರೆ, ರಣವೀರ್ ಸಿಂಗ್ ಅಷ್ಟು ಎಗ್ಸೈಟಿಂಗ್ ಎಂದು ಯಾರೂ ಅನಿಸಲಿಲ್ಲ. ರಣವೀರ್ ಪ್ರಪೋಸ್ ಮಾಡುವವರೆಗೂ ನಮ್ಮ ಮಧ್ಯೆ ಕಮಿಟ್ಮೆಂಟ್ ಇರಲಿಲ್ಲ’ ಎಂದಿದ್ದರು.