Site icon Vistara News

Pathaan Film | ದೀಪಿಕಾಗೆ ಕೊಲ್ಲೋಕೆ ಬುಲೆಟ್‌ ಬೇಕಿಲ್ಲ!

Pathaan Film

ಬೆಂಗಳೂರು : ಶಾರುಖ್‌ ಖಾನ್‌ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ʻಪಠಾಣ್‌ʼ(Pathaan Film ) ಸಿನಿಮಾ ಇದೀಗ ಮತ್ತೆ ಸಿಹಿ ಸುದ್ದಿಯನ್ನು ಹಂಚಿಕೊಂಡಿದೆ. ಈ ಹಿಂದೆ ಶಾರುಖ್‌ ಖಾನ್‌ ಅವರು ಚಿತ್ರದ ಟೀಸರ್‌ ಹಾಗೂ ಮೋಷನ್‌ ಪೋಸ್ಟರ್‌ ಅನ್ನು ಬಿಡುಗಡೆಗೊಳಿಸಿದ್ದರು. ಇದೀಗ ದೀಪಿಕಾ ಪಡುಕೋಣೆ ಅವರ ಮೋಷನ್‌ ಪೋಸ್ಟರ್‌ ರಿವೀಲ್‌ ಮಾಡಿದೆ.

ಜನವರಿ 25, 2023ಕ್ಕೆ ಚಿತ್ರ ಬಿಡುಗಡೆಗೊಳ್ಳುತ್ತಿದೆ. ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ರಿಲೀಸ್‌ ಆಗುತ್ತಿರುವುದಾಗಿ ಹಂಚಿಕೊಂಡಿದ್ದಾರೆ. ಪೋಸ್ಟರ್‌ ನೋಡುವಾಗ ಗನ್‌ ಹಿಡಿದು ಗುರಿಯಿಟ್ಟು ಹೊಡೆಯುವಂತೆ ಖಡಕ್‌ ಲುಕ್‌ನಲ್ಲಿ ಮಿಂಚಿದ್ದಾರೆ ಡಿಂಪಲ್‌ ಸುಂದರಿ. ಕಮೆಂಟ್‌ನಲ್ಲಿ ದೀಪಿಕಾ ಅಭಿಮಾನಿಗಳು ಸಂತಸ ವ್ಯಕ್ತ ಪಡಿಸಿದ್ದಾರೆ. ಶಾರುಖ್ ಖಾನ್ ಮೋಷನ್ ಪೋಸ್ಟರ್ ಅನ್ನು ಹಂಚಿಕೊಂಡು “ನಿನ್ನನ್ನು ಕೊಲ್ಲಲು ಆಕೆಗೆ ಬುಲೆಟ್ ಅಗತ್ಯವಿಲ್ಲ” ಎಂದು ಬರೆದಿದ್ದಾರೆ.

ಇದನ್ನೂ ಓದಿ | Jawan: ಡಬಲ್‌ ರೋಲ್‌ನಲ್ಲಿ ಶಾರುಖ್‌, ನಾಯಕಿಯಾಗಿ ನಯನ ತಾರಾ?

ಪಠಾಣ್‌ನಲ್ಲಿ ಜಾನ್ ಅಬ್ರಹಾಂ ಕೂಡ ನಟಿಸಿದ್ದಾರೆ. ಈ ಚಿತ್ರ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಜನವರಿ 25, 2023ರಂದು ಬಿಡುಗಡೆಯಾಗಲಿದೆ. ಕಳೆದ ತಿಂಗಳಷ್ಟೇ ʻಪಠಾಣ್‌ʼ ಚಿತ್ರದ ನಿರ್ಮಾಪಕರು ಶಾರುಖ್‌ ಅವರ ಮೋಷನ್‌ ಪೋಸ್ಟರ್‌ ಹಂಚಿಕೊಂಡು,YRF50 ಎಂದು ಬರೆದುಕೊಂಡಿದ್ದರು.

2013ರಲ್ಲಿ ನಟ ಶಾರುಖ್‌ ಹಾಗೂ ನಟಿ ದೀಪಿಕಾ ಪಡುಕೋಣೆ ʼಚೆನ್ನೈ ಎಕ್ಸ್‌ಪ್ರೆಸ್‌ʼನಲ್ಲಿ ನಟಿಸಿ ದೊಡ್ಡ ಹಿಟ್‌ ಚಿತ್ರವನ್ನು ನೀಡಿದ್ದರು. ಇಬ್ಬರ ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಯಶ್‌ ರಾಜ್‌ ಫಿಲ್ಮ್ಸ್‌ ಬ್ಯಾನರ್‌ನಲ್ಲಿ ʻಪಠಾಣ್‌ʼ ಸಿನಿಮಾ ಮೂಡಿಬರುತ್ತಿದೆ. ಈ ಚಿತ್ರದಲ್ಲಿ ಶಾರುಖ್‌ ಖಾನ್‌ ಸಿಕ್ಸ್‌ ಪ್ಯಾಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ | ದೀಪಿಕಾ ಪಡುಕೋಣೆ ಹೃದಯ ಬಡಿತ ಏರುಪೇರು, ಅಭಿಮಾನಿಗಳ ಎದೆಯಲ್ಲಿ ಡವಡವ!

Exit mobile version