Site icon Vistara News

Deepika Padukone: ಸೀರೆಯುಟ್ಟು ಪ್ರತಿಷ್ಠಿತ ʻBAFT ಪ್ರಶಸ್ತಿʼ ನೀಡಿದ ದೀಪಿಕಾ ಪಡುಕೋಣೆ!

Deepika Padukone presents award at ceremony in a saree

ದೀಪಿಕಾ ಪಡುಕೋಣೆ BAFTA (ಬ್ರಿಟಿಷ್ ಅಕಾಡೆಮಿ ಆಫ್ ಫಿಲ್ಮ್ ಮತ್ತು ಟೆಲಿವಿಷನ್ ಆರ್ಟ್ಸ್) ಪ್ರಶಸ್ತಿ ಸಮಾರಂಭದಲ್ಲಿ ಸೀರೆಯುಟ್ಟು ನಿರೂಪಣೆ ಮಾಡಿದ್ದಾರೆ. ಜತೆಗೆ ಪ್ರಶಸ್ತಿಯನ್ನು ನೀಡಿದ್ದಾರೆ. ಪ್ರತಿಷ್ಠಿತ ಈವೆಂಟ್‌ ನಲ್ಲಿ ನಟಿ ಸಾಂಪ್ರದಾಯಿಕವಾಗಿ ಕಾಣಿಸಿಕೊಂಡಿದ್ದು ಮೆಚ್ಚುಗೆಗೆ ಪಾತ್ರವಾಗಿದೆ. ದೀಪಿಕಾ ಇನ್‌ಸ್ಟಾಗ್ರಾಮ್‌ನಲ್ಲಿ ಆಕರ್ಷಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ದೀಪಿಕಾ ಅವರು ಸಿಲ್ವರ್‌ ಮಿಶ್ರಿತ ಬಿಳಿಯ ಮಿನುಗುವ ಸೀರೆ (ಶಿಮ್ಮರಿ ಸೀರೆಗಳು)ಯನ್ನು ಹೀಲ್ಸ್‌ನೊಂದಿಗೆ ಧರಿಸಿಕೊಂಡಿದ್ದರು.

ಇನ್ನು ದೀಪಿಕಾ ಸೀರೆ ಬಗ್ಗೆ ಫ್ಯಾಷನ್‌ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಗೆಬಗೆಯ ಕಾಕ್‌ಟೈಲ್‌ ಪಾರ್ಟಿ ಸೀರೆಗಳು, ಝರಿ ಸೀರೆಗಳು ಹಾಗೂ ಶೈನಿಂಗ್‌ ಸಿಕ್ವೀನ್ಸ್ ಸೀರೆಗಳು ಟಾಪ್‌ ಸ್ಥಾನದಲ್ಲಿವೆ. ಇವುಗಳೊಂದಿಗೆ ಕೆಲವಕ್ಕೆ ಗ್ಲಾಮರಸ್‌ ಲುಕ್‌ ಕಲ್ಪಿಸುವ ಸ್ಲಿವ್‌ಲೆಸ್‌ ಬ್ಲೌಸ್‌ಗಳು ಹಾಗೂ ಬ್ಯಾಕ್‌ಲೆಸ್‌ ಬ್ಲೌಸ್‌ಗಳು ಜತೆಯಾಗಿವೆ ಎನ್ನುತ್ತಾರೆ ಸೀರೆ ಡಿಸೈನರ್ಸ್. ಅವರ ಪ್ರಕಾರ, ಸೀರೆಗಳ ಫ್ಯಾಷನ್‌ ಎಂದಾಕ್ಷಣಾ ಟ್ರೆಡಿಷನಲ್‌ ಲುಕ್‌ ಎಂದುಕೊಳ್ಳಬೇಕಾಗಿಲ್ಲ. ಇಂಡೋ-ವೆಸ್ಟರ್ನ್ ಲುಕ್‌ ನೀಡುವ ಗ್ಲಾಮರಸ್‌ ಸೀರೆಗಳು. ಅದರಲ್ಲೂ ಬಾಡಿ ಮಾಸ್‌ ಇಂಡೆಕ್ಸ್‌ಗೆ ಹೊಂದುವಂತಹ ಫ್ಲೋ ಆಗುವಂತಹ ಶೈನಿಂಗ್‌ ಸೀರೆಗಳು ಕಾಕ್‌ಟೈಲ್‌ ಸೀರೆಗಳು ಆಗಮಿಸಿವೆ.

ಏನಿದು ಶಿಮ್ಮರಿ ಸೀರೆ?

ಈ ಸೀರೆಯಲ್ಲಿ ಆಧುನಿಕ ಮತ್ತು ಐಷಾರಾಮಿ ಸ್ಪರ್ಶ ಕೂಡ ಇರಲಿದೆ. ಭಾರತದ ಉನ್ನತ ಲೇಬಲ್‌ಗಳಿಂದ ವಿನ್ಯಾಸಗೊಳಿಸಲಾಗುತ್ತಿದೆ. ಈ ಸೀರೆ ಧರಿಸಿದರೆ ಹೈಲೈಟ್‌ ಆಗುವಂತೆ ಕಾಣುತ್ತಾರೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು. ಈ ಸೀರೆಗಳು ಪ್ರಿಂಟೆಡ್ ಸೀರೆ ಮತ್ತು ಕಸೂತಿ ಸೀರೆಯಿಂದ ಹಿಡಿದು ರೇಷ್ಮೆ ಮತ್ತು ಆರ್ಗನ್ಜಾದವರೆಗೆ ವಿವಿಧ ಶೈಲಿಗಳಲ್ಲಿ ಬರುತ್ತವೆ.

ಇದನ್ನೂ ಓದಿ: Deepika Padukone: BAFTA ಪ್ರಶಸ್ತಿ ಸಮಾರಂಭ ನಿರೂಪಿಸುವವರ ತಂಡದಲ್ಲಿರುವ ಏಕೈಕ ಭಾರತೀಯ ನಟಿ ಈಕೆ!

BAFTA ಪ್ರಶಸ್ತಿ ಸಮಾರಂಭ ನಿರೂಪಿಸುವವರ ತಂಡದಲ್ಲಿರುವ ಏಕೈಕ ಭಾರತೀಯ ನಟಿ ಈಕೆ!

ಫುಟ್ಬಾಲ್ ಆಟಗಾರ ಡೇವಿಡ್ ಬೇಕಮ್ (David Beckham), ನಟ ಕೇಟ್ ಬ್ಲಾಂಚೆಟ್ (Cate Blanchett) ಮತ್ತು ಗಾಯಕ ದುವಾ ಲಿಪಾ (Dua Lipa) ಜತೆ ದೀಪಿಕಾ ಪಡುಕೋಣೆ ನಿರೂಪಣೆಯ ಜವಾಬ್ದಾರಿ ಹೊತ್ತಿದ್ದರು. ದೀಪಿಕಾ ಈ ಹಿಂದೆ 2023ರ ಆಸ್ಕರ್ ಪ್ರಶಸ್ತಿಯನ್ನು ನೀಡಿದ್ದರು. ಜತೆಗೆ ನಿರೂಪಣೆಯನ್ನು ಮಾಡಿದ್ದರು. ಭಾರತೀಯ ಪ್ರೇಕ್ಷಕರು ಈವೆಂಟ್ ಅನ್ನು ಲಯನ್ಸ್‌ಗೇಟ್ ಪ್ಲೇ ಮೂಲಕ 12:3 ರಿಂದ ಲೈವ್-ಸ್ಟ್ರೀಮ್ ವೀಕ್ಷಸಲು ಆರಂಭಿಸಿದ್ದರು.

BAFTA ಅವಾರ್ಡ್‌: ʻಓಪನ್‌ಹೈಮರ್‌ʼ ಬೆಸ್ಟ್‌ ಫಿಲ್ಮ್‌

ಈ ವರ್ಷದ ಗೋಲ್ಡನ್‌ ಗ್ಲೋಬ್ಸ್‌ ಪ್ರಶಸ್ತಿಯನ್ನು ʼಓಪನ್‌ಹೈಮರ್‌ʼ (Oppenheimer) ಹಾಗೂ ʼಪೂವರ್‌ ತಿಂಗ್ಸ್ʼ (Poor Things) ಚಿತ್ರಗಳು ಹಂಚಿಕೊಂಡಿತ್ತು. ಈಗಾಗಲೇ ಈ ಎರಡೂ ಸಿನಿಮಾಗಳು ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿವೆ. ಇದೀಗ ʻಬ್ರಿಟಿಷ್ ಅಕಾಡೆಮಿ ಆಫ್ ಫಿಲ್ಮ್ ಆ್ಯಂಡ್ ಟೆಲಿವಿಷನ್ ಆರ್ಟ್ಸ್ʼಫಿಲ್ಮ್ ಅವಾರ್ಡ್ಸ್ 2024ರಲ್ಲಿ (BAFTA (British Academy of Film and Television Arts)) ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಅವರ ಜೀವನಾಧಾರಿತ ಚಿತ್ರ ‘ಓಪನ್‌ಹೈಮರ್’ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಚಲನಚಿತ್ರ ಮತ್ತು ಅತ್ಯುತ್ತಮ ನಾಯಕ ನಟ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಸಮಾರಂಭ ಲಂಡನ್‌ನ ರಾಯಲ್ ಫೆಸ್ಟಿವಲ್ ಹಾಲ್‌ನಲ್ಲಿ ನಡೆದಿತ್ತು.

Exit mobile version