Site icon Vistara News

Deepika Padukone | ದೀಪಿಕಾ ಬರ್ತ್ ಡೇಗೆ ಪ್ರಾಜೆಕ್ಟ್ ಕೆ ಗಿಫ್ಟ್; ಕದ್ದು ಕೊಟ್ಟಂತಿದೆ ಎಂತಿದ್ದಾರೆ ಅಭಿಮಾನಿಗಳು

ಮುಂಬೈ: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ (Deepika Padukone) ಗುರುವಾರ 37ನೇ ಜನ್ಮ ದಿನಾಚರಣೆಯ ಸಂಭ್ರಮದಲ್ಲಿದ್ದಾರೆ. ಅವರ ಮುಂದಿನ ಸಿನಿಮಾವಾದ ‘ಪ್ರಾಜೆಕ್ಟ್ ಕೆ’ ಕಡೆಯಿಂದ ದೀಪಿಕಾ ಅವರಿಗೆ ಬರ್ತ್ ಡೇ ಗಿಫ್ಟ್ ಆಗಿ ಸಿನಿಮಾದಲ್ಲಿನ ದೀಪಿಕಾ ಅವರ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಲಾಗಿದೆ. ಆದರೆ ಈ ಗಿಫ್ಟ್ ಕೂಡ ಬೇರೆ ಎಲ್ಲಿಂದಲೋ ಕದ್ದು ಕೊಟ್ಟಂತಿದೆ ಎನ್ನಲಾರಂಭಿಸಿದ್ದಾರೆ ಅಭಿಮಾನಿಗಳು.

ಇದನ್ನೂ ಓದಿ: Pathaan Film | ದೀಪಿಕಾ ಪಡುಕೋಣೆ ಸೈಡ್‌ ಪೋಸ್‌ ದೃಶ್ಯಕ್ಕೆ ಬಿತ್ತಾ ಕತ್ತರಿ? ಕೇಸರಿ ಬಿಕಿನಿ ಕಥೆ ಏನು?


ಫಸ್ಟ್ ಲುಕ್ ಅಲ್ಲಿ ದೀಪಿಕಾ ಮುಖ ಕಾಣಿಸುವುದೇ ಇಲ್ಲ. ದೀಪಿಕಾ ಸೂರ್ಯನ ಎದುರಲ್ಲಿ ವೀರ ಯೋಧಳ ರೀತಿಯಲ್ಲಿ ನಿಂತಿದ್ದಾರೆ. ಅವರ ಕೈಗೆ ಬ್ಯಾಂಡೇಜ್ ಹಾಕಿರುವುದನ್ನು ಗಮನಿಸಬಹುದು. ‘A hope in the dark’ (ಕತ್ತಲಿನಲ್ಲಿರುವ ಭರವಸೆ) ಎಂದು ಬರೆಯಲಾಗಿದೆ. ಇದೇ ಪೋಸ್ಟರ್ ಅನ್ನು ಸಿನಿಮಾದ ನಟ ಪ್ರಭಾಸ್ ಕೂಡ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಪ್ರಿಯಾಂಕಾಗೆ ಜನ್ಮ ದಿನದ ಶುಭ ಹಾರೈಸಿದ್ದಾರೆ.


ಆದರೆ ಈ ಪೋಸ್ಟರ್ ಹಾಲಿವುಡ್‌ನ ಡ್ಯೂನ್ ಸಿನಿಮಾದ ಪೋಸ್ಟರ್ ರೀತಿಯಲ್ಲಿಯೇ ಇದೆ ಎನ್ನುವುದು ನೆಟ್ಟಿಗರ ವಾದ. ಡ್ಯೂನ್ ಸಿನಿಮಾದ ಪೋಸ್ಟರ್‌ನಲ್ಲಿ ಕೂಡ ಸೂರ್ಯನ ಎದುರಲ್ಲಿ ವೀರನೊಬ್ಬ ಓಡಿ ಬರುತ್ತಿರುವುದನ್ನು ಕಾಣಬಹುದಾಗಿದೆ. ಹಾಗಾಗಿ ಪ್ರಾಜೆಕ್ಟ್ ಕೆ ಸಿನಿಮಾ ತಂಡ ಡ್ಯೂನ್ ಸಿನಿಮಾದ ಪೋಸ್ಟರ್ ಅನ್ನೇ ಕದ್ದು ತಮ್ಮ ಸಿನಿಮಾದ ಪೋಸ್ಟರ್ ಮಾಡಿಕೊಂಡಿದ್ದಾರೆ ಎಂದು ಕಾಲೆಳೆಯಲಾರಂಭಿಸಿದ್ದಾರೆ ನೆಟ್ಟಿಗರು.

ಇದನ್ನೂ ಓದಿ: Shahrukh Khan | ʻಪಠಾಣ್‌ʼ ಎರಡನೇ ಹಾಡಿಗೆ ವ್ಯಾಪಕ ಮೆಚ್ಚುಗೆ: ದೀಪಿಕಾ-ಶಾರುಖ್‌ ಸ್ಟೆಪ್ಸ್‌ಗೆ ಫ್ಯಾನ್ಸ್‌ ಫಿದಾ!
ದೀಪಿಕಾ ಅವರ ಮೊದಲ ತೆಲುಗು ಸಿನಿಮಾವಾಗಿರುವ ‘ಪ್ರಾಜೆಕ್ಟ್ ಕೆ’ಗೆ ನಿರ್ದೇಶಕ ನಾಗ್ ಅಶ್ವಿನ್ ಅವರು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಕೂಡ ನಟಿಸಿದ್ದಾರೆ. ಮಹಾಭಾರತದ ಕಥೆ ಆಧಾರಿತವಾಗಿರುವ ಚಿತ್ರದಲ್ಲಿ ಅಮಿತಾಭ್ ಅಶ್ವಥಾಮನ ಪಾತ್ರದಲ್ಲಿ ಹಾಗೂ ಪ್ರಭಾಸ್ ಕರ್ಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಬಿಡುಗಡೆ ದಿನಾಂಕ ಇನ್ನೂ ಹೊರಬಿದ್ದಿಲ್ಲ.

Exit mobile version