ಬೆಂಗಳೂರು: ಬಾಲಿವುಡ್ ನಡಿ ದೀಪಿಕಾ ಪಡುಕೋಣೆ (Deepika Padukone) ಈಗ ಗರ್ಭಿಣಿ. ಈ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಅವರು ಮಗುವಿಗೆ ಜನ್ಮ ನೀಡಲಿದ್ದಾರೆ. ಇದೀಗ ʻʻನಟಿ ಹೆಚ್ಚು ಹೆಚ್ಚು ಕೆಲಸಗಳನ್ನು ಮಾಡುತ್ತಿದ್ದೇನೆ. ಹೋಲಿಕೆ ಮಾಡಿಕೊಳ್ಳುವುದನ್ನು ಕಡಿಮೆ ಮಾಡಿದ್ದೇನೆʼʼಎಂದು ಪೋಸ್ಟ್ ಮಾಡಿದ್ದಾರೆ. ನಟಿ ಇದ್ದಕ್ಕಿದ್ದಂತೆ ಈ ರೀತಿ ಪೋಸ್ಟ್ ಯಾಕೆ ಮಾಡಿದ್ದಾರೆ ಎಂದು ಅವರ ಫ್ಯಾನ್ಸ್ ತಲೆಗೆ ಹುಳು ಬಿಟ್ಟುಕೊಂಡಿದ್ದಾರೆ.
ದೀಪಿಕಾ ಪೋಸ್ಟ್‌ನಲ್ಲಿ ಈ ರೀತಿ ಬರೆದುಕೊಂಡಿದ್ದಾರೆ. ʻʻನಾನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಕಡಿಮೆ ಮಾಡುತ್ತಿದ್ದೇನೆ. ಹೆಚ್ಚು ಹೆಚ್ಚು ಕೆಲಸಗಳನ್ನು ಮಾಡುತ್ತಿದ್ದೇನೆ. ಹೋಲಿಕೆ ಮಾಡಿಕೊಳ್ಳುವುದನ್ನು ಕಡಿಮೆ ಮಾಡಿದ್ದೇನೆ. ಈಗ ಸ್ವಲ್ಪ ಸಮಾಧಾನದಿಂದ ಇರುವೆ. ದೂರನ್ನು ಕಡಿಮೆ ಮಾಡಿ ಹೆಚ್ಚು ಹೆಚ್ಚು ಪ್ರಾರ್ಥನೆ ಮಾಡುತ್ತಿರುವೆʼʼಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು ಪರಸ್ಪರ ಪ್ರೀತಿ ಮದುವೆ ಆಗಿದ್ದು 2018ರಲ್ಲಿ. ಆರು ವರ್ಷಗಳ ಬಳಿಕ ಅವರು ಮಗು ಹೊಂದುವ ನಿರ್ಧಾರಕ್ಕೆ ಬಂದಿದ್ದಾರೆ. ಫೈಟರ್‌ನಲ್ಲಿ ಹೃತಿಕ್ ರೋಷನ್ ಜತೆಗೆ ಕೊನೆಯದಾಗಿ ಕಾಣಿಸಿಕೊಂಡ ದೀಪಿಕಾ, ಸದ್ಯ ಸಿನಿಮಾದಿಂದ ಬ್ರೇಕ್ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: Deepika Padukone: ದೀಪಿಕಾ ಪಡುಕೋಣೆಗೆ ವಿಶೇಷ ಗೌರವ ನೀಡಿದ ಆಸ್ಕರ್!
ಈ ಮೊದಲೇ ವದಂತಿಗಳು ಹಬ್ಬಿದ್ದವು
ದಿ ವೈಟ್ ಲೋಟಸ್ ಸೀಸನ್ 3 ರಿಂದ ದೀಪಿಕಾ ಹೊರಗುಳಿದಿದ್ದಾರೆ ಎಂದು ವರದಿಯಾದ ಕೆಲವೇ ದಿನಗಳಲ್ಲಿ ದೀಪಿಕಾ ಗರ್ಭಿಣಿಯಾಗಿರುವ ಸುದ್ದಿ ಹೊರಬಂದಿತ್ತು. ಎಚ್‌ಒಬಿಯ ಅತ್ಯಂತ ಜನಪ್ರಿಯ ಶೋ ಆಗಿರುವ ದಿ ವೈಟ್ ಲೋಟಸ್ ಸೀಸನ್ 3ರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಇತ್ತು. ಆದರೆ, ವಾರಾಂತ್ಯದಲ್ಲಿ ದೀಪಿಕಾ ಕಾರ್ಯಕ್ರಮದಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿತ್ತು.
ದೀಪಿಕಾ ಗರ್ಭಿಣಿಯಾಗಿದ್ದಾರೆಂಬ ವದಂತಿಗಳಿಗೆ ಒಳಗಾಗುತ್ತಿರುವುದು ಇದೇ ಮೊದಲಲ್ಲ. ‘ಫೈಟರ್’ ಚಿತ್ರದ ಪ್ರಚಾರದ ಫೋಟೋಗಳನ್ನು ದೀಪಿಕಾ ಹಂಚಿಕೊಂಡಾಗ, ಅಭಿಮಾನಿಗಳು ಹೊಟ್ಟೆ ಉಬ್ಬಿರುವುದನ್ನು ಅನ್ನು ಗಮನಿಸಿದ್ದರು. ಅಲ್ಲದೇ, ಕಮೆಂಟ್ ವಿಭಾಗದಲ್ಲಿ ಗರ್ಭಿಣಿಯೇ ಎಂಬ ಪ್ರಶ್ನೆಗಳು ತುಂಬಿದ್ದವು.
ಈ ವರ್ಷದ ಆರಂಭದಲ್ಲಿ ದೀಪಿಕಾ ರಣವೀರ್ ಜತೆ ಮಕ್ಕಳನ್ನು ಹೊಂದಲು ಬಯಸುವುದಾಗಿ ಹೇಳಿದ್ದರು. ಪತ್ರಿಕೆಯೊಂದಿಗೆ ಮಾತನಾಡಿದ್ದ ದೀಪಿಕಾ, “ಖಂಡಿತವಾಗಿಯೂ. ರಣವೀರ್ ಮತ್ತು ನಾನು ಮಕ್ಕಳನ್ನು ಪ್ರೀತಿಸುತ್ತೇವೆ. ನಾವು ನಮ್ಮ ಸ್ವಂತ ಕುಟುಂಬವನ್ನು ಪ್ರಾರಂಭಿಸುವ ದಿನಕ್ಕಾಗಿ ನಾವು ಎದುರು ನೋಡುತ್ತಿದ್ದೇವೆ” ಎಂದು ಹೇಳಿದ್ದರು.