Site icon Vistara News

Deepika Padukone: ಕೈಯಲ್ಲಿ ರಿವಾಲ್ವರ್, ಸುತ್ತಲೂ ಹೆಣಗಳ ರಾಶಿ; ದೀಪಿಕಾ ಈಗ ʻಲೇಡಿ ಸಿಂಗಂʼ!

Deepika Padukone first look from Singham Again

ಬೆಂಗಳೂರು: ʻಸಿಂಗಂ ಅಗೇನ್ʼ ಚಿತ್ರದಲ್ಲಿ ದೀಪಿಕಾ ಪಡುಕೋಣೆ (Deepika Padukone) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದ ಈ ಸಿನಿಮಾ ಇದೀಗ ದೀಪಿಕಾ ಅವರ ಫಸ್ಟ್‌ ಲುಕ್‌ ಪೋಸ್ಟರ್‌ ಅನಾವರಣಗೊಳಿಸಿದೆ. ಶಕ್ತಿ ಶೆಟ್ಟಿ ಪಾತ್ರದ ಹೆಸರು. ʻಸಿಂಗಮ್ ಎಗೇನ್” ಎಂದು ಇನ್‌ಸ್ಟಾದಲ್ಲಿ ಬರೆದಿದ್ದಾರೆ. ದೀಪಿಕಾ ಅವರ ಲುಕ್‌ಗೆ ಅನೇಕ ಸೆಲೆಬ್ರಿಟಿಗಳು ಪ್ರತಿಕ್ರಿಯಿಸಿದ್ದಾರೆ. ರಣವೀರ್ ಅವರನ್ನು ‘ಲೇಡಿ ಸಿಂಗಂ’ ಎಂದು ಕರೆದಿದ್ದಾರೆ.

ರಕ್ತಸಿಕ್ತವಾಗಿ ದೀಪಿಕಾ ಕಂಡಿದ್ದು, ವ್ಯಕ್ತಿಯ ಬಾಯಿಯೊಳಗೆ ರಿವಾಲ್ವರ್ ಹಾಕಿ ಖಡಕ್‌ ಲುಕ್‌ ಕೊಟ್ಟಿದ್ದಾರೆ ದೀಪಿಕಾ. ಹಿಂದೆ ಬೆಂಕಿ, ಸುತ್ತಲೂ ಹೆಣಗಳ ರಾಶಿ, ಕಾರು ಅವಶೇಷಗಳು ಕಾಣಿಸಿಕೊಂಡವು. ನಟ-ಪತಿ ರಣವೀರ್ ಸಿಂಗ್, ಕೂಡ ದೀಪಿಕಾ ಲುಕ್‌ಗೆ ಹೊಗಳಿದ್ದಾರೆ. ಈ ಹಿಂದೆ ವರದಿಯೊಂದು ಚಿತ್ರದಲ್ಲಿ ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಿತ್ತು. ಮೂಲ ಪ್ರಕಾರ, “ದೀಪಿಕಾ ಪಡುಕೋಣೆ ರೋಹಿತ್ ಶೆಟ್ಟಿಯವರ ಸಿಂಗಂ ಅಗೇನ್ ಚಿತ್ರಕ್ಕಾಗಿ ಉತ್ಸುಕರಾಗಿದ್ದಾರೆ. ಅವರು ರೋಹಿತ್ ಶೆಟ್ಟಿ ಯೂನಿವರ್ಸ್‌ನ ಮೊದಲ ಮಹಿಳಾ ಪೋಲೀಸ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಸಾಹಸಮಯ ಭಾಗಕ್ಕಾಗಿ ಈಗಾಗಲೇ ಪೂರ್ವಸಿದ್ಧತೆ ಪ್ರಾರಂಭಿಸಿದ್ದಾರೆ. ಲೇಡಿ ಸಿಂಗಮ್ ಚಿತ್ರದಲ್ಲಿ ಅಜಯ್ ದೇವಗನ್ ಅವರ ಸಹೋದರಿ ಪಾತ್ರವನ್ನು ನಿರ್ವಹಿಸಲಿದ್ದಾರೆʼʼಎನ್ನಲಾಗಿತ್ತು.

ದೀಪಿಕಾ ಅವರದ್ದು ಪ್ರಮುಖ ಪಾತ್ರವಾಗಿದ್ದು, 35-40 ದಿನಗಳ ಕಾಲ ಚಿತ್ರೀಕರಣ ಮಾಡಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ. “ಇದು ಕೇವಲ ಅತಿಥಿ ಪಾತ್ರಕ್ಕಿಂತ ಹೆಚ್ಚು. ಇದು ಸಿಂಗಮ್‌ನಲ್ಲಿ ದೀಪಿಕಾಗೆ ಸರಿಯಾಗಿ ಹೊಂದುವ ಪಾತ್ರದಂತಿದೆ. ದೀಪಿಕಾ ಅವರು ಈ ಸಿನಿಮಾಕ್ಕಾಗಿ ಸುಮಾರು 35 ರಿಂದ 40 ದಿನಗಳ ಕಾಲ ಚಿತ್ರೀಕರಣ ನಡೆಸಲಿದ್ದಾರೆ” ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Allu Arjun: ಅಲ್ಲು ಅರ್ಜುನ್ ವಿರುದ್ಧ ಅಜಯ್ ದೇವಗನ್ ಅಸಮಾಧಾನ? ಯಾಕೆ?

ಕಳೆದ ವರ್ಷ, ನಿರ್ದೇಶಕ ರೋಹಿತ್ ಶೆಟ್ಟಿ ಪಿಟಿಐ ಜೊತೆ ಮಾತನಾಡುವಾಗ ಈ ಸಿನಿಮಾ ಬಗ್ಗೆ ಹೇಳಿಕೊಂಡಿದ್ದರು. ದೀಪಿಕಾ ಈ ಹಿಂದೆ 2019 ರಲ್ಲಿ ಚೆನ್ನೈ ಎಕ್ಸ್‌ಪ್ರೆಸ್‌ ಸಿನಿಮಾಗಾಗಿ ರೋಹಿತ್ ಜತೆ ಕೈ ಜೋಡಿಸಿದ್ದರು.

ದೀಪಿಕಾ ಪಡುಕೋಣೆ (Deepika Padukone) ಅವರು ಹೃತಿಕ್ ರೋಷನ್ (Hrithik Roshan) ಜತೆ ಶೀಘ್ರದಲ್ಲೇ ʻಫೈಟರ್‌ʼ ಸಿನಿಮಾದಲ್ಲಿ (Fighter Movie) ತೆರೆ ಹಂಚಿಕೊಳ್ಳಲಿದ್ದಾರೆ.ಕೆಲವು ದಿನಗಳ ಹಿಂದೆ ಚಿತ್ರತಂಡ ಇಟಲಿಯಲ್ಲಿ ಎರಡು ಹಾಡುಗಳ ಚಿತ್ರೀಕರಣ ನಡೆಸಲಿದ್ದಾರೆ ಎಂದು ವರದಿಯಾಗಿತ್ತು. ಇತ್ತೀಚೆಗೆ ಶಾರುಖ್ ಖಾನ್ ಅವರ ಪಠಾಣ್‌ ಸಿನಿಮಾವನ್ನು ನಿರ್ದೇಶಿಸಿದ ಸಿದ್ಧಾರ್ಥ್ ಆನಂದ್ ಅವರು ಈ ಸಿನಿಮಾಗೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ.ದೀಪಿಕಾ ಕೊನೆಯ ಬಾರಿಗೆ ಶಾರುಖ್ ಖಾನ್ ಎದುರು ಬ್ಲಾಕ್‌ಬಸ್ಟರ್ ಹಿಟ್ ಚಿತ್ರ ಪಠಾಣ್‌ನಲ್ಲಿ ಹಾಗೂ ಜವಾನ್‌ನಲ್ಲಿ ಕಾಣಿಸಿಕೊಂಡರು.ಇದರ ಜತೆಗೆ ದೀಪಿಕಾ ಅವರು ನಾಗ್‌ ಅಶ್ವಿನ್‌ ನಿರ್ದೇಶನದ ಕಲ್ಕಿ 2898 AD ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಹಿರಿಯ ನಟ ಅಮಿತಾಭ್‌ ಬಚ್ಚನ್‌ ಮತ್ತು ತೆಲುಗು ನಟ ಪ್ರಭಾಸ್‌ ಕೂಡ ನಟಿಸುತ್ತಿದ್ದಾರೆ.

Exit mobile version