ಬೆಂಗಳೂರು: ಕೇನ್ಸ್ 2022ರಲ್ಲಿ ತೀರ್ಪುಗಾರರಾಗಿ ನಟಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದರು. ಇದೀಗ ಆಸ್ಕರ್ 2023ರಲ್ಲಿ ನಟಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಈ ಬಗ್ಗೆ ನಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 95ನೇ ಅಕಾಡೆಮಿ ಪ್ರಶಸ್ತಿಗಳು (Oscars 2023) ಮಾರ್ಚ್ 12ರಂದು ಲಾಸ್ ಏಂಜಲೀಸ್‌ನಲ್ಲಿ (ಭಾರತದಲ್ಲಿ ಮಾರ್ಚ್ 13) ನಡೆಯಲಿದೆ.
ಆಸ್ಕರ್ 2023ರಲ್ಲಿ ಪ್ರಶಸ್ತಿ ಪ್ರದಾನ ಮಾಡಲಿರುವ ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ ಸೋಷಿಯಲ್ ಮೀಡಿಯಾದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿರುವ ಲಿಸ್ಟ್ ಹಂಚಿಕೊಂಡಿದ್ದಾರೆ. ಎಮಿಲಿ ಬ್ಲಂಟ್, ಸ್ಯಾಮ್ಯುಯೆಲ್ ಎಲ್ ಜಾಕ್ಸನ್, ಡ್ವೇನ್ ಜಾನ್ಸನ್, ಮೈಕೆಲ್ ಬಿ ಜೋರ್ಡಾನ್, ಜಾನೆಲ್ಲೆ ಮೋನೆ, ಜೊ ಸಲ್ಡಾನಾ, ಜೆನ್ನಿಫರ್ ಕೊನ್ನೆಲ್ಲಿ, ರಿಜ್ ಅಹ್ಮದ್ ಮತ್ತು ಮೆಲಿಸ್ಸಾ ಮೆಕಾರ್ಥಿ ಅವರಂತಹವರ ಜತೆಗೆ ಇವರ ಹೆಸರು ಸೇರಿದೆ. 95ನೇ ಆಸ್ಕರ್ ಪ್ರಶಸ್ತಿ ಎಬಿಸಿಯಲ್ಲಿ ಭಾನುವಾರ, ಮಾರ್ಚ್ 12, 2023ರಂದು ನೇರ ಪ್ರಸಾರವಾಗಲಿದೆ.
ಇದನ್ನೂ ಓದಿ: Oscars 2023 Nominations: ಅವತಾರ್ 2, ಟಾಪ್ ಗನ್ ಸೇರಿ ಆಸ್ಕರ್‌ಗೆ ನಾಮಿನೇಟ್ ಆದ ಸಿನಿಮಾಗಳ ಸಂಪೂರ್ಣ ಮಾಹಿತಿ ಇಲ್ಲಿದೆ
ಕಾನ್ 2022 ಜ್ಯೂರಿ ಪ್ಯಾನೆಲ್‌ನಲ್ಲಿ ದೀಪಿಕಾ
ಕಾನ್(Cannes) ಚಲನಚಿತ್ರೋತ್ಸವದ 75ನೇ ವಾರ್ಷಿಕೋತ್ಸವದ ಆಚರಣೆಯಲ್ಲಿ ದೀಪಿಕಾ ಪಡುಕೋಣೆ ತೀರ್ಪುಗಾರರಾಗಿ ದೇಶವನ್ನು ಪ್ರತಿನಿಧಿಸಿದ್ದರು. ನಟಿ ವಿವಿಧ ಸಂದರ್ಭಗಳಲ್ಲಿ 10 ದಿನಗಳ ಕಾಲ ಫ್ರೆಂಚ್ ರಿವೇರಿಯಾದಲ್ಲಿ ಅನೇಕ ಟಾಕ್ ಸೆಷನ್‌ಗಳಲ್ಲಿ ಭಾಗವಹಿಸಿದ್ದರು..
ಫೀಫಾ ನಿರೂಪಕಿಯಾಗಿ ದೀಪಿಕಾ
ದೀಪಿಕಾ ಪಡುಕೋಣೆ ಅವರು ಫ್ರೆಂಚ್ ಬ್ರ್ಯಾಂಡ್ ಲೂಯಿ ವಿಟಾನ್‌ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ಮೇ, 2022ರಲ್ಲಿ ನೇಮಕಗೊಂಡರು. ಕತಾರ್‌ನಲ್ಲಿ ಫಿಫಾ ವಿಶ್ವಕಪ್ ಟ್ರೋಫಿಯನ್ನು ಅನಾವರಣಗೊಳಿಸಿದರು.
ಈ ಬಾರಿ ಆಸ್ಕರ್ ವೇದಿಕೆಯ ಮೇಲೆ ನಿರಂತರವಾಗಿ ದೀಪಿಕಾ ಕಾಣಿಸಿಕೊಂಡರೆ, ರಾಮ್ ಚರಣ್ ಮತ್ತು ಜ್ಯೂನಿಯರ್ ಎನ್.ಟಿ.ಆರ್ ಲೈವ್ ಆಗಿ ಡ್ಯಾನ್ಸ್ ಮಾಡಲಿದ್ದಾರೆ. ಅಲ್ಲದೇ, ಅದೇ ವೇದಿಕೆಯಲ್ಲೇ ಗಾಯಕರಾದ ರಾಹುಲ್ ಸಿಪ್ಲಿಗುಂಜ್ ಮತ್ತು ಕಾಲಾ ಭೈರವ ಹಾಡಲಿದ್ದಾರೆ. ಶಾರುಖ್ ಖಾನ್ ಜತೆಗೆ ಇತ್ತೀಚೆಗೆ ಬ್ಲಾಕ್ಬಸ್ಟರ್ ಹಿಟ್ ಪಠಾನ್‌ನಲ್ಲಿ ಕಾಣಿಸಿಕೊಂಡಿದ್ದ ದೀಪಿಕಾ ಪಡುಕೋಣೆ, ಮುಂದಿನ ಪ್ರಾಜೆಕ್ಟ್ ʻಕೆʼ ಮತ್ತು ʻಫೈಟರ್ʼನಲ್ಲಿ ಕಾಣಿಸಿಕೊಳ್ಳಲಿದ್ದಾರೆ.