Site icon Vistara News

Pathaan Movie: ಮುಂಬೈ ಐಕಾನಿಕ್ ಗೈಟಿ ಗ್ಯಾಲಕ್ಸಿ ಥಿಯೇಟರ್‌ಗೆ ಭೇಟಿ ಕೊಟ್ಟ ದೀಪಿಕಾ ಪಡುಕೋಣೆ: ವಿಡಿಯೊ ಇಲ್ಲಿದೆ

Deepika Padukone visits Gaiety Galaxy Pathaan Movie 3

ಬೆಂಗಳೂರು: ಜನವರಿ 25 ರಂದು ಬಿಡುಗಡೆಯಾದ ಪಠಾಣ್‌ ಸಿನಿಮಾ (Pathaan Movie) ವಿಶ್ವಾದ್ಯಂತ 500 ಕೋಟಿ ರೂ. ಗಡಿ ದಾಟಿದೆ. ಚಿತ್ರಮಂದಿರದಲ್ಲಿ ಅಪಾರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೀಗ ತಮ್ಮ ಚಿತ್ರದ ಯಶಸ್ಸಿನ ಬೆನ್ನಲ್ಲೇ ದೀಪಿಕಾ ಪಡುಕೋಣೆ ಥಿಯೇಟರ್‌ಗೆ ಭೇಟಿ ನೀಡಿದ್ದಾರೆ.

ದೀಪಿಕಾ ಪಡುಕೋಣೆ ಮುಂಬೈನ ಐಕಾನಿಕ್ ಗೈಟಿ ಗ್ಯಾಲಕ್ಸಿಗೆ ಭೇಟಿ ನೀಡಿ ಅಭಿಮಾನಿಗಳ ಪ್ರತಿಕ್ರಿಯೆಯನ್ನು ನೇರವಾಗಿ ವೀಕ್ಷಿಸಿದರು. ಕಪ್ಪು ಸ್ವೆಟ್‌ಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದ ಅವರು ಮುಖವನ್ನು ಮುಚ್ಚಿಕೊಂಡಿದ್ದರು. ಥಿಯೇಟರ್‌ನಲ್ಲಿ ನಟಿ ಕಾಣಿಸುತ್ತಿದ್ದಂತೆ ಅಭಿಮಾನಿಗಳು ನಟಿಯನ್ನು ಸುತ್ತುವರಿದಿದ್ದಾರೆ. ಹೆಚ್ಚು ಕುತೂಹಲಕಾರಿ ಸಂಗತಿಯೆಂದರೆ, ನಟಿ ಒಳಗೆ ಹೋಗುತ್ತಿದ್ದಂತೆ ಅವರು ಶಾರುಖ್ ಖಾನ್ ಹೆಸರನ್ನು ಕೂಗಿದ್ದಾರೆ. ಇದೀಗ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: Sara Tendulkar : ಲಂಡನ್​ನಲ್ಲಿ ಪಠಾಣ್​ ಸಿನಿಮಾ ವೀಕ್ಷಿಸಿದ ಸಚಿನ್​ ತೆಂಡೂಲ್ಕರ್​ ಪುತ್ರಿ ಸಾರಾ

ಇದನ್ನೂ ಓದಿ: Pathaan Movie: ʻಪಠಾಣ್‌ʼ ಸಕ್ಸೆಸ್‌ ಬೆನ್ನಲ್ಲೇ ಮನೆಯ ಗ್ಯಾಲರಿಗೆ ಬಂದು  ಅಭಿಮಾನಿಗಳತ್ತ ಕೈ ಬೀಸಿದ ಶಾರುಖ್‌!

ಇದೇ ಮೊದಲ ಬಾರಿಗೆ ಮುಂಬೈನ ಹೆಸರಾಂತ ಚಿತ್ರಮಂದಿರವಾದ ಗೈಟಿ ಗ್ಯಾಲಕ್ಸಿಯು ಪಠಾಣ್‌ನ ಮೊದಲ ಪ್ರದರ್ಶನವನ್ನು ಬೆಳಗ್ಗೆ 9 ಗಂಟೆಗೆ ಪ್ರದರ್ಶಿಸಿದೆ. ಸಾಮಾನ್ಯ ದಿನಗಳಲ್ಲಿ, ಮೊದಲ ಪ್ರದರ್ಶನವನ್ನು ಮಧ್ಯಾಹ್ನ 12 ಗಂಟೆಗೆ ನಡೆಸಲಾಗುತ್ತದೆ. ಚಲನಚಿತ್ರ ವಿಮರ್ಶಕ ಮತ್ತು ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಅವರು ಇನ್‌ಸ್ಟಾದಲ್ಲಿ ʻ1972ರಲ್ಲಿ ಪ್ರಾರಂಭವಾದ ಐಕಾನಿಕ್ ಗೈಟಿ ಗ್ಯಾಲಕ್ಸಿ ಇದೇ ಮೊದಲ ಬಾರಿಗೆ “ಪಠಾಣ್‌’ ಬೆಳಗ್ಗೆ 9 ಗಂಟೆಗೆ ಪ್ರದರ್ಶಿಸಲಾಗುತ್ತಿದೆʼʼಎಂದು ಬರೆದುಕೊಂಡಿದ್ದರು.

Exit mobile version