ಬೆಂಗಳೂರು: ರಣವೀರ್ ಸಿಂಗ್ ಒಂದು ವಿಡಿಯೊ ಗ್ಲಿಂಪ್ಸ್ ಹಂಚಿಕೊಂಡಿದ್ದಾರೆ. ಇದರಲ್ಲಿ ರಣವೀರ್ ,ದೀಪಿಕಾ ಪಡುಕೋಣೆ (Deepika Padukone) ಅಷ್ಟೇ ಅಲ್ಲದೇ ತ್ರಿಶಾ ಹಾಗೂ ರಾಮ್ಚರಣ್ ಕೂಡ ಕಂಡಿದ್ದಾರೆ. ರಣವೀರ್ ಸಿಂಗ್ ಹಂಚಿಕೊಂಡ ಈ ಸಣ್ಣ ವಿಡಿಯೊದಲ್ಲಿ ಪ್ರಮುಖ ತಾರೆಯರು ಕಂಡಿದ್ದು, ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಆದರೆ, ಅದು ಸಿನಿಮಾಕ್ಕಾಗಿ ಅಲ್ಲದಿರಬಹುದು. ಕೆಲವು ಬ್ರ್ಯಾಂಡ್ನ ಸಿನಿಮೀಯ ಜಾಹೀರಾತು ಎಂತಲೂ ಹೇಳಲಾಗುತ್ತಿದೆ. ಇದರಲ್ಲಿ ರಣವೀರ್ ಒಬ್ಬ ಪತ್ತೇದಾರಿ ಏಜೆಂಟ್ ಮತ್ತು ದೀಪಿಕಾ ಕಾಣೆಯಾದ ಗಂಡನನ್ನು ಹುಡುಕುತ್ತಿರುವ ಮಹಿಳೆಯಾಗಿ ತೋರಿಸಲಾಗಿದೆ. ಕೆಲವರು ಇದು ಜಾಹೀರಾತು ಎಂದರೆ, ಇನ್ನೂ ಕೆಲವರದ್ದು ಇದು ಸಿನಿಮಾ ಎಂದು ವಾದ.
ಕ್ಲಿಪ್ನಲ್ಲಿ ದೀಪಿಕಾ ಪೊಲೀಸ್ ಠಾಣೆಯಲ್ಲಿ ಗಂಡನನ್ನು ಹುಡುಕುತ್ತಿರುವ ಮಹಿಳೆಯಾಗಿ ಕಂಡಿದ್ದಾರೆ. ಬೇರೆಡೆ, ರಣವೀರ್ ಪತ್ತೇದಾರಿ ಏಜೆಂಟ್ ಆಗಿದ್ದು, ಕೆಲವು ಮಾಹಿತಿ ಪಡೆಯುವಲ್ಲಿ ತೊಡಗಿದ್ದಾರೆ. ಫ್ಯಾಮಿಲಿ ಮ್ಯಾನ್ನಿಂದ ‘ಚೆಲ್ಲಮ್ ಸರ್’ ಪಾತ್ರದ ಒಂದು ದೃಶ್ಯವೂ ಇದೆ. ರಾಮ್ ಚರಣ್ ಒಬ್ಬ ವ್ಯಕ್ತಿಯ ಹಿಂದೆ ಓಡುವುದನ್ನು ಮತ್ತು ತ್ರಿಶಾ ಕೃಷ್ಣನ್ ಪೊಲೀಸ್ ಠಾಣೆಯ ಹೊರಗೆ ನಿಂತಿರುವುದು ಇದೆ. ಕೊನೆಯಲ್ಲಿ, ರಣವೀರ್ ʻʻಮಾತನಾಡುʼʼಎಂದು ವ್ಯಕ್ತಿಯೊಬ್ಬನಿಗೆ ಸಿಟ್ಟಿನಲ್ಲಿ ಕೇಳುವ ದೃಶ್ಯವಿದೆ.
ವಿಡಿಯೊವನ್ನು ಹಂಚಿಕೊಂಡ ರಣವೀರ್ ಶೀರ್ಷಿಕೆಯಲ್ಲಿ “ಸೀಕ್ರೆಟ್ ಬಯಲು ಮಾಡುತ್ತಿದ್ದೇವೆ, ಶೀಘ್ರದಲ್ಲೇ ʼʼಎಂದು ಬರೆದುಕೊಂಡಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ತಾರೆಗಳ ಫ್ಯಾನ್ಸ್ ಇದು ಸಿನಿಮಾನೇ ಇರಬೇಕು ಎಂಬ ನಿರೀಕ್ಷೆ ಇದೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ʻʻದಯವಿಟ್ಟು ಇದು ಜಾಹೀರಾತು ಎಂದು ಹೇಳಬೇಡಿ” ಎಂದು ಬರೆದಿದ್ದಾರೆ. ಇನ್ನೊಬ್ಬರು “ಒಟ್ಟಿಗೆ ಒಂದೇ ಒಂದು ದೃಶ್ಯವಿಲ್ಲದಿದ್ದರೂ ಸಹ, ದೀಪಿಕಾ ರಣವೀರ್, ನೀವು ಆಲಿಯಾ ರಣವೀರ್ಗಿಂತ ಉತ್ತಮ ಕೆಮಿಸ್ಟ್ರಿ ಹೊಂದಿದ್ದೀರಿ” ಎಂದು ಮತ್ತೊಬ್ಬರು ಬರೆದಿದ್ದಾರೆ. ಇನ್ನೊಬ್ಬರು ʻʻಈ ಎಲ್ಲ ತಾರೆಯರು ಒಟ್ಟಾಗಿ ನೋಡುತ್ತಿದ್ದರೆ, ಇದು ಸಿನಿಮಾ ಎಂತಾಗಲಿʼʼಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Deepika Padukone: ನಿನ್ನ ಪದತಲದಲ್ಲಿ ಇಡೀ ಜಗತ್ತು ಎಂದು ದೀಪಿಕಾ ಹೊಗಳಿದ ರಣವೀರ್ ಸಿಂಗ್
ರಣವೀರ್ ಸಿಂಗ್ ಟ್ಯಾಗ್ ಮಾಡಿ ಅಧಿಕೃತ ಪುಟವು ʻ”ಕೆಲವು ರಹಸ್ಯಗಳು ರಹಸ್ಯವಾಗಿ ಉಳಿಯಬೇಕು. ಕೆಲವು ಪ್ರಶ್ನೆಗಳಿಗೆ ಉತ್ತರಿಸದೆ ಬಿಡುವುದು ಉತ್ತಮ. ಕೆಲವು ರಹಸ್ಯಗಳನ್ನು ಬಿಡಿಸದೆ ಬಿಡುವುದು ಉತ್ತಮ. ಶೀಘ್ರದಲ್ಲೇ ಬರಲಿದೆʼʼ ಎಂದು ಪೋಸ್ಟ್ ಮಾಡಿದೆ.
ಕರಣ್ ಜೋಹರ್ ನಿರ್ದೇಶನದ ʻರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ ಚಿತ್ರದಲ್ಲಿ ರಣವೀರ್ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಆಲಿಯಾ ಭಟ್, ಧರ್ಮೇಂದ್ರ, ಶಬಾನಾ ಅಜ್ಮಿ ಮತ್ತು ಜಯಾ ಬಚ್ಚನ್ ಕೂಡ ನಟಿಸಿದ್ದಾರೆ. ಇದು ಜುಲೈ 28 ರಂದು ಬಿಡುಗಡೆಯಾಗಲಿದೆ. ಏಳು ವರ್ಷಗಳ ನಂತರ ಕರಣ್ ಜೋಹರ್ ಅವರು ನಿರ್ದೇಶಕರ ಟೋಪಿ ಧರಿಸಿರುವ ಸಿನಿಮಾ ಇದಾಗಿದೆ. ಏಳು ವರ್ಷಗಳ ಹಿಂದೆ, ಅಂದರೆ 2016ರಲ್ಲಿ ಕರಣ್ ಜೋಹರ್ ಅವರು ರಣಬೀರ್ ಕಪೂರ್, ಅನುಷ್ಕಾ ಶರ್ಮಾ ಮತ್ತು ಐಶ್ವರ್ಯ ರೈ ಅಭಿನಯದ ಏ ದಿಲ್ ಹೈ ಮುಷ್ಕಿಲ್ ಚಿತ್ರವನ್ನು ನಿರ್ದೇಶಿಸಿದ್ದರು.