ಬೆಂಗಳೂರು: ಕಂಗನಾ ರಣಾವತ್ ನಟನೆಯ ಧಾಕಡ್ (Dhaakad) ಸಿನಿಮಾ ಮೇ 20ಕ್ಕೆ ಬಿಡುಗಡೆಯಾಗಿ ಹೀನಾಯ ಸೊಲು ಅನುಭವಿಸಿತ್ತು. ಚಿತ್ರದ ಬಜೆಟ್ 100 ಕೋಟಿ ರೂಪಾಯಿಯಾದರೆ ಕಲೆಕ್ಷನ್ ಮಾಡಿದ್ದು ಕೇವಲ 2.58 ಕೋಟಿ ರೂಪಾಯಿ ಆಗಿತ್ತು. ಒಟಿಟಿ ಹಕ್ಕು, ಟಿವಿ ಹಕ್ಕು ಎಲ್ಲವೂ ಸೇರಿದರೂ ನಿರ್ಮಾಪಕರಿಗೆ 70 ಕೋಟಿ ರೂಪಾಯಿಗೂ ಅಧಿಕ ನಷ್ಟ ಆಗಿದೆ.
ಹೀಗಾಗಿ ಹಲವರು ಕಂಗನಾಗೆ ಸಿನಿಮಾ ಸೋತಿದೆ, ನಿಮ್ಮ ಆಟ ಮುಗೀತು ಎಂದವರಿಗೆ ಬಿಸಿ ಮುಟ್ಟಿಸಿದ್ದಾರೆ. ಧಾಕಡ್ ಸೋಲಿನ ಕುರಿತು ಹೆಜ್ಜೆಹೆಜ್ಜೆಗೂ ಸೋಲಿನ ಆರ್ಟಿಕಲ್ ಕಾಣಿಸುತ್ತಿದೆ. ಈ ಬಗ್ಗೆ ಕಂಗನಾ ಮೌನ ಮುರಿದಿದ್ದಾರೆ. ಸಿನಿಮಾ ಸೋತಿದೆ ಅಂದವರಿಗೆ ತಮ್ಮದೇ ಆದ ರೀತಿಯಲ್ಲಿ ಬಿಸಿ ಮುಟ್ಟಿಸಿದ್ದಾರೆ.
ಇದನ್ನೂ ಓದಿ | ಕಂಗನಾ ಕಂಗಾಲು!: Dhaakad ಚಿತ್ರದ 8ನೇ ದಿನದ ಕಲೆಕ್ಷನ್ ₹4420, ನೋಡಿದ್ದು 20 ಜನ
ರಣವೀರ್ ಸಿಂಗ್ ನಟನೆಯ ’83’, ಆಲಿಯಾ ಭಟ್ ನಟನೆಯ ಗಂಗೂಬಾಯಿ ಕಾಠಿಯಾವಾಡಿ, ವರುಣ್ ಧವನ್ ಅಭಿನಯದ ಜುಗ್ಜುಗ್ ಜಿಯೋ ಸಾಧಾರಣ ಕಲೆಕ್ಷನ್ ಮಾಡಿದೆ. ಪ್ರಭಾಸ್ ನಟನೆಯ ರಾಧೆ ಶ್ಯಾಮ್ ಹೀನಾಯ ಸೋಲು ಕಂಡಿದೆ. ಈ ಬಗ್ಗೆ ಪ್ರಕಟವಾದ ಆರ್ಟಿಕಲ್ನ ಸ್ಕ್ರೀನ್ಶಾಟ್ ಪೋಸ್ಟ್ ಮಾಡಿರುವ ಕಂಗನಾ ರಣಾವತ್ ʻಬಾಲಿವುಡ್‌ನಲ್ಲಿ ಕೇವಲ ಧಾಕಡ್ ಸಿನಿಮಾ ಮಾತ್ರ ಸೋತಿಲ್ಲ. ಇನ್ನೂ ಹಲವು ಚಿತ್ರಗಳೂ ಸೋತಿವೆ. ಆದರೂ, ಅವರ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಕೇವಲ ನನ್ನ ಸಿನಿಮಾಗಳ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ ಎಂದು ಹಲವಾರು ಸಿನಿಮಾಗಳ ಪೋಸ್ಟರ್ ಮತ್ತು ಬಂದಿರುವ ಸುದ್ದಿಗಳನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ನಿರ್ದಿಷ್ಟ ಕಾರಣ ಏನಾದರೂ ಇದೆಯೆ? ಎಂದು ಪ್ರಶ್ನಿಸಿದ್ದಾರೆ.
ಧಾಕಡ್ ಚಿತ್ರ ಮೊದಲ ದಿನ ಭರ್ಜರಿ ಓಪನಿಂಗ್ ಪಡೆದಿತ್ತು. ಚಿತ್ರಮಂದಿರದಲ್ಲಿ ಸಾಕಷ್ಟು ಮಂದಿ ಪ್ರೇಕ್ಷಕರೂ ಇದ್ದರು. ಆದರೆ, ಶನಿವಾರ ಹಾಗೂ ಭಾನುವಾರದಂದು ಕೇವಲ 10-15 ಜನ ಪ್ರೇಕ್ಷಕರು ಚಿತ್ರಮಂದಿರದಲ್ಲಿದ್ದರು. ಈ ಕಾರಣದಿಂದ ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್‌ನಿಂದ ಧಾಕಡ್ ಸಿನಿಮಾವನ್ನು ಹೊರಹಾಕಲಾಗಿತ್ತು. ಇದರ ಬದಲಾಗಿ ಭೂಲ್ ಭುಲಯ್ಯ-2 ಪ್ರದರ್ಶಿಸಲಾಗುತ್ತಿದೆ ಎಂದು ತಿಳಿದುಬಂದಿತ್ತು.
ಇದನ್ನೂ ಓದಿ | ಅದೊಂದು ರೂಮರ್‌ನಿಂದ ನನ್ನನ್ನು ಮದುವೆಯಾಗಲು ಯಾರೂ ಮುಂದೆ ಬರುತ್ತಿಲ್ಲ ಅಂತಾರೆ ನಟಿ ಕಂಗನಾ!