Site icon Vistara News

Dhairyam Sarvatra Sadhanam | ಬಿಡುಗಡೆಗೂ ಮೊದಲೇ ಹಾಕಿದ ಬಂಡವಾಳ ವಾಪಸ್!

Dhairyam Sarvatra Sadhanam

ಕಂಟೆಂಟ್ ಇರುವ ಸಿನಿಮಾಗಳ ವಿಚಾರದಲ್ಲಿ ಎಲ್ಲಾ ಪಾಸಿಟಿವ್ ಆಗುತ್ತದೆ. ಈ ಪೈಕಿ ‘ಧೈರ್ಯಂ ಸರ್ವತ್ರ ಸಾಧನಂ’ ಮೈಲುಗಲ್ಲು ಸಾಧಿಸಿದೆ. ತನ್ನ ಹೆಸರಿನಲ್ಲೇ ಪಾಸಿಟಿವ್ ಎನರ್ಜಿ ಇಟ್ಟುಕೊಂಡಿರುವ ಧೈರ್ಯಂ ಸರ್ವತ್ರ ಸಾಧನಂ (Dhairyam Sarvatra Sadhanam) ಚಿತ್ರದ ಆಡಿಯೋ ರೈಟ್ಸ್ ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ. A2 ಆಡಿಯೋ ಸಂಸ್ಥೆಗೆ ಧೈರ್ಯಂ ಸರ್ವತ್ರ ಸಾಧನಂ ಸಿನಿಮಾದ ಆಡಿಯೋ ರೈಟ್ಸ್ ಸೇಲ್ ಆಗಿದೆ.

ಕೊರೊನಾ ಕಂಟಕ ಮರೆಯಾದ ಬಳಿಕ ಸ್ಯಾಂಡಲ್​ವುಡ್​ನಲ್ಲಿ ಹೊಸ ಮನ್ವಂತರವೇ ಶುರುವಾಗಿದೆ. ಅದರಲ್ಲೂ ಈಗೀಗ ಕನ್ನಡ ಸಿನಿಮಾಗಳು ತಮ್ಮ ಟೈಟಲ್ ವಿಚಾರದಲ್ಲಿ ದೊಡ್ಡ ಸದ್ದು ಮಾಡುತ್ತಿವೆ. ಈ ಸಾಲಿಗೆ ಧೈರ್ಯಂ ಸರ್ವತ್ರ ಸಾಧನಂ ಸಿನಿಮಾ ಕೂಡ ಸೇರುತ್ತದೆ. ಜೊತೆಗೆ ಆಡಿಯೋ ರೈಟ್ಸ್ ವಿಚಾರದಲ್ಲೂ ಧೈರ್ಯಂ ಸರ್ವತ್ರ ಸಾಧನಂ ಸಖತ್ ಸದ್ದು ಮಾಡುತ್ತಿದೆ.

ಬಂಡವಾಳ ವಾಪಸ್
ತರಹೇವಾರಿ ಕಥಾಹಂದರದ ಸಿನಿಮಾಗಳು ಹೊಸ ತಲೆಮಾರನ್ನು ಸೆಳಯುತ್ತಿದೆ. ಈ ಪೈಕಿ ಧೈರ್ಯಂ ಸರ್ವತ್ರ ಸಾಧನಂ ಕೂಡ ಒಂದು. ಗಂಧಗುಡಿಯಲ್ಲಿ ಈ ರೀತಿಯಾದ ಪ್ರಯೋಗಗಳು ಹೊಸ ಪ್ರಯೋಗಕ್ಕೆ ನಾಂದಿ ಹಾಡುತ್ತಿದೆ. ಕೊರೊನಾ ಬಳಿಕ ಸಿನಿಮಾ ಮಂದಿರಗಳಿಗೆ ಪ್ರೇಕ್ಷಕರು ಬರುತ್ತಿಲ್ಲ ಎಂಬ ಚಿಂತೆಯಲ್ಲಿರುವವರಿಗೆ ಧೈರ್ಯಂ ಸರ್ವತ್ರ ಸಾಧನಂ ಧೈರ್ಯ ತುಂಬುತ್ತಿದೆ. ರಿಲೀಸ್​ಗೂ ಮೊದಲೇ ಧೈರ್ಯಂ ಸರ್ವತ್ರ ಸಾಧನಂ ನಿರ್ಮಾಪಕರು ಹಾಕಿದ ಬಂಡವಾಳ ವಾಪಸ್ ಪಡೆದಿದ್ದಾರೆ.

ಎ.ಪಿ.ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ, ಆನಂದ್ ಬಾಬು ನಿರ್ಮಾಣದಲ್ಲಿ ತಯಾರಾದ ಧೈರ್ಯಂ ಸರ್ವತ್ರ ಸಾಧನಂ ಸ್ಯಾಂಡಲ್​ವುಡ್​ನಲ್ಲಿ ಸದ್ದು ಮಾಡುತ್ತಿದೆ. ಸಂಭಾಷಣೆ ಮೂಲಕ ಗುರುತಿಸಿಕೊಂಡಿದ್ದ ಸಾಯಿರಾಮ್ ಈ ಸಿನಿಮಾ ಮೂಲಕ ನಿರ್ದೇಶಕರಾಗಿ ಪ್ರಮೋಷನ್ ಪಡೆದಿದ್ದಾರೆ. ಚಿತ್ರದಲ್ಲಿ 5 ಹಾಡುಗಳಿವೆ ಹಾಗೂ 5 ಜಬರ್ದಸ್ತ್ ಫೈಟ್ಸ್ ಕೂಡ ಶೂಟ್ ಮಾಡಲಾಗಿದೆ. ಜುಡಾ ಸ್ಯಾಂಡಿ ದೇಸಿ ಸಂಗೀತ, ಕಿನ್ನಲ್ ರಾಜ್, ಅರಸು ಅಂತಾರೆ, ಹೃದಯ ಶಿವ & ಎ.ಆರ್.ಸಾಯಿರಾಮ್ ಸಾಹಿತ್ಯ ಹೋಪ್ ಹುಟ್ಟುಹಾಕಿದೆ.

ಇದನ್ನೂ ಓದಿ: Puneeth lucky man | ಲಕ್ಕಿ ಮ್ಯಾನ್ ರಿಲೀಸ್‌ಗೆ ಕ್ಷಣಗಣನೆ: ಅಪ್ಪು ಫ್ಯಾನ್ಸ್‌ಗೆ ಡಬಲ್‌ ಗಿಫ್ಟ್!

Exit mobile version