Site icon Vistara News

Actor Dhanush: ರಾಜ್‌ಕುಮಾರ್ ಪೆರಿಯಸಾಮಿ ಹೊಸ ಸಿನಿಮಾಗೆ ಈ ಸೂಪರ್‌ಸ್ಟಾರ್‌ ನಾಯಕ?

Dhanush with Rajkumar Periasamy next

ಬೆಂಗಳೂರು: ಸೂಪರ್ ಸ್ಟಾರ್ ಧನುಷ್ (Actor Dhanush) ಸಾಲು ಸಾಲು ಸಿನಿಮಾಗಳನ್ನು ಹೊಂದಿದ್ದಾರೆ. ತೆಲುಗು ನಿರ್ದೇಶಕ ಶೇಖರ್ ಕಮ್ಮುಲ ಆಕ್ಷನ್ ಕಟ್ ಹೇಳುತ್ತಿರುವ ‘ಕುಬೇರ’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರುತ್ತಿದೆ. ಜತೆಗೆ ಅವರ ಎರಡನೇ ನಿರ್ದೇಶನದ ʻರಾಯನ್‌ʼ ಸಿನಿಮಾ ಹೊಂದಿದ್ದಾರೆ. ಇದೀಗ ರಾಜ್‌ಕುಮಾರ್ ಪೆರಿಯಸಾಮಿ ( Rajkumar Periasamy) ಅವರ ಜತೆ ಮುಂದಿನ ಸಿನಮಾವನ್ನು ಘೋಷಿಸಲಿದ್ದಾರೆ ಎಂದು ವರದಿಯಾಗಿದೆ.

ಈ ಹಿಂದೆ 2015ರಲ್ಲಿ ನಿರ್ದೇಶಕ ವೇಲ್ರಾಜ್ ಅವರ ನಿರ್ದೇಶನದ ಬ್ಲಾಕ್ಬಸ್ಟರ್ ಸಿನಿಮಾ Thanga Magan (ತಂಗ ಮಗನ್‌) ಸಿನಿಮಾಗೆ ಗೋಪುರಂ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಜಿ.ಎನ್.ಅನ್ಬು ಚೆಜಿಯಾನ್ ( G. N. Anbu Chezhiyan) ಅವರು ಚಿತ್ರವನ್ನು ನಿರ್ಮಿಸಿದ್ದರು. ಅವರೇ ಈ ರಾಜ್‌ಕುಮಾರ್ ಪೆರಿಯಸಾಮಿ ಅವರ ಸಿನಿಮಾಗೆ ಬಂಡವಾಳ ಹೂಡಲಿದೆ ಎನ್ನಲಾಗಿದೆ. ಮುಂಬರುವ ಚಿತ್ರದ ಬಗ್ಗೆ ನಿರ್ದೇಶಕರು ಅಥವಾ ನಟನಿಂದ ಇನ್ನೂ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ.

ರಾಜ್‌ಕುಮಾರ್ ಪೆರಿಯಸಾಮಿ ಯಾರು?

ಶಿವಕಾರ್ತಿಕೇಯನ್ ಮತ್ತು ಸಾಯಿ ಪಲ್ಲವಿ ಪ್ರಮುಖ ಪಾತ್ರದಲ್ಲಿ ನಟಿಸಲಿರುವ ʻಅಮರನ್ʼ ಎಂಬ ಶೀರ್ಷಿಕೆಯ ಅವರ ಬಹು ನಿರೀಕ್ಷಿತ ಆಕ್ಷನ್-ಥ್ರಿಲ್ಲರ್ ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ. ಶಿವಕಾರ್ತಿಕೇಯನ್ ಮತ್ತು ಸಾಯಿ ಪಲ್ಲವಿಯ ಹೊರತಾಗಿ, ಭುವನ್ ಅರೋರಾ, ರಾಹುಲ್ ಬೋಸ್, ಅಜೇಯ್ ನಾಗ ರಾಮನ್, ಮೀರ್ ಸಲ್ಮಾನ್, ಗೌರವ್ ವೆಂಕಟೇಶ್, ಶ್ರೀಕುಮಾರ್ ಮತ್ತು ಇತರರು ಇದ್ದಾರೆ. ಕಮಲ್ ಹಾಸನ್ ಮತ್ತು ಆರ್ ಮಹೇಂದ್ರನ್ ಜಂಟಿಯಾಗಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ನೆಟ್‌ಫ್ಲಿಕ್ಸ್ ಇದೀಗ ಚಿತ್ರದ OTT ಹಕ್ಕುಗಳನ್ನು ಪಡೆದುಕೊಂಡಿರುವುದಾಗಿ ಬಹಿರಂಗಪಡಿಸಿದೆ. ಚಿತ್ರಕ್ಕೆ ಜಿ.ವಿ.ಪ್ರಕಾಶ್ ಕುಮಾರ್ ಅವರ ಸಂಗೀತ ಸಂಯೋಜನೆ, ಸಿ.ಎಚ್.ಸಾಯಿ ಅವರ ಛಾಯಾಗ್ರಹಣ ಮತ್ತು ಆರ್.ಕಲೈವನನ್ ಅವರ ಸಂಕಲನವಿದೆ.

ಧನುಷ್ ಅವರ ಮುಂಬರುವ ಚಿತ್ರಗಳು

ಧನುಷ್ ತಮ್ಮ ನಿರ್ದೇಶನದ ʻರಾಯನ್‌ʼ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ಧನುಷ್ ರಗಡ್‌ ಆಗಿ ಕಂಡಿದ್ದಾರೆ. ಸನ್ ಪಿಕ್ಚರ್ಸ್ ಈ ಚಿತ್ರವನ್ನು ನಿರ್ಮಿಸಿದ್ದು, ಎ ಆರ್ ರೆಹಮಾನ್ ಸಂಗೀತ ನೀಡಿದ್ದಾರೆ.

ಕೆಲವು ದಿನಗಳ ಹಿಂದೆ ಧನುಷ್ (Actor Dhanush) ಅವರ ಎರಡನೇ ನಿರ್ದೇಶನದ ಸಿನಿಮಾ ‘ಡಿ 50’ ಪೋಸ್ಟರ್‌ ಲುಕ್‌ ಅನಾವರಣಗೊಂಡಿತ್ತು. ಧನುಷ್ ಕಳೆದ ವರ್ಷ ಜುಲೈನಲ್ಲಿ ಈ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು. ಈ ಸಿನಿಮಾಗಾಗಿ ನಟ ತಲೆಯನ್ನು ಬೋಳಿಸಿಕೊಂಡಿದ್ದಾರೆ. ಇನ್ನು ಸಿನಿಮಾದ ನಾಯಕಿ ಹಾಗೂ ಇನ್ನುಳಿದ ಪಾತ್ರವರ್ಗದ ಬಗ್ಗೆ ಮುಂದಿನ ದಿನಗಳಲ್ಲಿ ಅಪ್‌ಡೇಟ್‌ ನೀಡುವುದಾಗಿ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

Exit mobile version