ಬೆಂಗಳೂರು: ʻನಿನ್ನ ಸನಿಹಕೆʼ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಧನ್ಯಾ ರಾಮ್‌ಕುಮಾರ್ (Dhanya Ramkumar) ಅವರಿಗೆ ಕೊರೊನಾ ದೃಢಪಟ್ಟಿದೆ ಎಂದು ಸ್ವತಃ ನಟಿ ಹೇಳಿಕೊಂಡಿದ್ದಾರೆ. ಅಣ್ಣಾವ್ರ ಮುದ್ದಿನ ಮೊಮ್ಮಗಳು ಧನ್ಯಾ ರಾಮ್‌ಕುಮಾರ್ ಇದೀಗ ಇನ್‌ಸ್ಟಾದಲ್ಲಿ ಪೋಸ್ಟ್ ಹಂಚಿಕೊಂಡು ಎಚ್ಚರಿಕೆ ವಹಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಇನ್‌ಸ್ಟಾದಲ್ಲಿ ಪೋಸ್ಟ್ ಹಂಚಿಕೊಂಡು ʻʻಎಲ್ಲರಿಗೂ ನಮಸ್ಕಾರ, ನಾನು ಇತ್ತೀಚೆಗೆ ಕೋವಿಡ್ ಟೆಸ್ಟ್ ಮಾಡುವಾಗ ಪಾಸಿಟಿವ್ ಎಂದು ದೃಢಪಟ್ಟಿದೆ. ಸದ್ಯಕ್ಕೆ ನಾನು ಐಸೊಲೇಟ್ ಆಗಿರುವ ಹಾಗೂ ಎಲ್ಲ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಂಡಿರುವೆ. ಅಗತ್ಯವಿರುವ ಎಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಆದಷ್ಟು ಬೇಗ ನಿಮ್ಮ ಮುಂದೆ ಬರುವೆ. ಆರೋಗ್ಯ ನೋಡಿಕೊಳ್ಳಿ’ ಎಂದು ಧನ್ಯಾ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Weekend With Ramesh: ಸಾಧಕರ ಸೀಟ್‌ನಲ್ಲಿ ನಮ್ಮ ಸ್ಯಾಂಡಲ್‌ವುಡ್ ಕ್ವೀನ್ ಅಂದ್ರು ಫ್ಯಾನ್ಸ್!
ನಿನ್ನ ಸನಿಹಕೆ ಬಳಿಕ ಧನ್ಯಾ ಅವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಹೈಡ್ & ಸೀಕ್’ ಸಿನಿಮಾಗೆ ಅನೂಪ್ ರೇವಣ್ಣ ಜತೆಗೆ ಧನ್ಯಾ ರಾಮ್‌ಕುಮಾರ್ ನಟಿಸಿದ್ದಾರೆ. ಸಿನಿಮಾ ಆಸಕ್ತಿ ಬಗ್ಗೆ ನಟಿ ಮಾಧ್ಯಮವೊಂದರಲ್ಲಿ ಮಾತನಾಡಿ ʻʻನಮ್ಮ ಕುಟುಂಬದಲ್ಲಿ ನಟಿಯಾಗುತ್ತಿರುವ ಮೊದಲ ಹುಡುಗಿ ನಾನು. ಈ ಹಿಂದೆ ಪಿಆರ್ ಆಗಿ ಕೆಲಸ ಮಾಡಿದೆ. ಆಗ ಇದು ನನ್ನ ಫೀಲ್ಡ್ ಅಲ್ಲಎನ್ನಿಸಿತು. ನಾನು ನಟಿಯಾಗ್ತೀನಿ ಅಂದಾಗ ನನ್ನ ಅಪ್ಪ, ಅಮ್ಮ ಇದರ ಬಗ್ಗೆ ಆಸಕ್ತಿ ತೋರಲಿಲ್ಲ. ಈಗ ಅವರಿಗೂ ಇಷ್ಟವಾಗಿದೆ. ನನಗೆ ನನ್ನ ಆಯ್ಕೆ ತಡವಾಯ್ತು ಎನ್ನಿಸುತ್ತಿಲ್ಲ. ಈ ಚಿತ್ರದ ಕಥೆ, ಪಾತ್ರ ನನಗೆ ಇಷ್ಟವಾದ ಕಾರಣ ಒಪ್ಪಿದೆ’ ಎಂದಿದ್ದಾರೆ.