Site icon Vistara News

Dharmendra Singh: ಮೊಮ್ಮಗನ ಸಂಗೀತ ಕಾರ್ಯಕ್ರಮದಲ್ಲಿ ಮಸ್ತ್‌ ಡ್ಯಾನ್ಸ್‌ ಮಾಡಿದ ಧರ್ಮೇಂದ್ರ ಸಿಂಗ್‌, ವಿಡಿಯೊ ವೈರಲ್

Dharmendra Singh dance

#image_title

ಮುಂಬೈ: ಧರ್ಮೇಂದ್ರ ಸಿಂಗ್‌ (Dharmendra Singh) ಅವರ ಮೊಮ್ಮಗ, ಸನ್ನಿ ಡಿಯೋಲ್‌ ಅವರ ಪುತ್ರ ಕರಣ್‌ ಡಿಯೋಲ್‌ ಅವರು ಭಾನುವಾರ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಪ್ರಿಯತಮೆ ದಿಶಾ ಶರ್ಮಾ ಅವರೊಂದಿಗೆ ಅವರ ವಿವಾಹ ನಡೆಯಲಿದ್ದು, ಅದಕ್ಕೂ ಮೊದಲು ಹಲವಾರು ಕಾರ್ಯಕ್ರಮಗಳನ್ನು ಎರಡೂ ಕುಟುಂಬಗಳು ನಡೆಸಿವೆ. ಅದರಂತೆ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಮಧುಮಗ ಕರಣ್‌ ಜತೆ ಅಜ್ಜ ಧರ್ಮೇಂದ್ರ ಸಿಂಗ್‌ ಕೂಡ ಹೆಜ್ಜೆ ಹಾಕಿದ್ದಾರೆ.‌

ಮೈ ಜತ್‌ ಯಮ್ಲಾ ಪಗ್ಲಾ ದೀವಾನ ಹಾಡಿಗೆ ಕರಣ್‌ ಡಿಯೋಲ್‌ ಮತ್ತು ಅವರ ಸಹೋದರ ರಾಜ್‌ವೀರ್‌ ಡಿಯೋಲ್‌ ನೃತ್ಯ ಮಾಡಿದ್ದಾರೆ. ಅವರೊಂದಿಗೆ ಧರ್ಮೇಂದ್ರ ಸಿಂಗ್‌ ಕೂಡ ವೇದಿಕೆ ಮೇಲೆ ಬಂದಿದ್ದು, ನೃತ್ಯ ಮಾಡಿದ್ದಾರೆ. ಅವರ ನೃತ್ಯದ ವಿಡಿಯೊವನ್ನು ಬಾಲಿವುಡ್‌ನ ಮಾಧ್ಯಮಗಳು ಸೆರೆ ಹಿಡಿದು, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿವೆ. ವಿಡಿಯೊಗಳು ಎಲ್ಲೆಡೆ ಭಾರೀ ವೈರಲ್‌ ಆಗಿವೆ. 87ರ ವಯಸ್ಸಿನಲ್ಲೂ ಹುಮ್ಮಸ್ಸಿನಿಂದ ನೃತ್ಯ ಮಾಡಿದ ಧರ್ಮೇಂದ್ರ ಅವರ ಬಗ್ಗೆ ಜನರು ಚರ್ಚೆ ನಡೆಸಲಾರಂಭಿಸಿದ್ದಾರೆ.

ಇದನ್ನೂ ಓದಿ: Viral Video : 3 ಕೋಟಿ ಬೆಲೆಯ ಬೆನ್ಜ್​ ಕಾರನ್ನು ಡಕೋಟಾ ಬಸ್​​ನಂತೆ ತಳ್ಳಿ ಸ್ಟಾರ್ಟ್​ ಮಾಡಿದ್ರು!

ವಿಡಿಯೊದಲ್ಲಿ ಧರ್ಮೇಂದ್ರ ಸಿಂಗ್‌ ಅವರು ಬಾದಾಮಿ ಬಣ್ಣದ ಸೂಟ್‌ ಮತ್ತು ಅದಕ್ಕೆ ಟೈ ಧರಿಸಿರುವುದನ್ನು ಕಾಣಬಹುದು. ಮಧುಮಗ ಕರಣ್‌ ಅವರು ಹೆಚ್ಚು ಎಂಬ್ರಾಯಿಡರಿ ಇರುವ ಕಪ್ಪು ಬಣ್ಣದ ಶೆರ್ವಾನಿ ಧರಿಸಿದ್ದಾರೆ. ಹಾಗೆಯೇ ಅವರ ಸಹೋದರ ರಾಜ್‌ವೀರ್‌ ಕೂಡ ಕಪ್ಪು ಶೆರ್ವಾನಿ ಧರಿಸಿದ್ದಾರೆ. ವಿಡಿಯೊದ ಕೊನೆಯಲ್ಲಿ ಸನ್ನಿ ಡಿಯೋಲ್‌ ಅವರು ಬಂದು ಧರ್ಮೇಂದ್ರ ಅವರನ್ನು ಅಪ್ಪಿಕೊಳ್ಳುವುದನ್ನೂ ಕಾಣಬಹುದಾಗಿದೆ.

ಇನ್ನು ಕಾರ್ಯಕ್ರಮದಲ್ಲಿ ಸನ್ನಿ ಡಿಯೋಲ್‌ ಮತ್ತು ಬಾಬಿ ಡಿಯೋಲ್‌ ಕೂಡ ನೃತ್ಯ ಮಾಡಿ, ಸಂತೋಷದಲ್ಲಿ ಮಿಂದೆದಿದ್ದಾರೆ. ಸನ್ನಿ ಡಿಯೋಲ್‌ ಅವರು ಗಾದರ್‌ ಸಿನಿಮಾದ ಮೈ ನಿಕ್ಲಾ ಗಾಡಿ ಲೇಕೆ ಹಾಡಿಗೆ ನೃತ್ಯ ಮಾಡಿದ್ದರೆ ಬಾಬಿ ಡಿಯೋಲ್‌ ಅವರು ಹಮ್ಕೋ ಸಿರ್ಫ್‌ ತುಮ್ಸೆ ಪ್ಯಾರ್‌ ಹೈ ಹಾಡಿಗೆ ನೃತ್ಯ ಮಾಡಿದ್ದಾರೆ. ಬಾಬಿ ಅವರಿಗೆ ಅವರ ಪತ್ನಿ ತಾನ್ಯ ಡಿಯೋಲ್‌ ಕೂಡ ಸಾಥ್‌ ಕೊಟ್ಟಿದ್ದಾರೆ.

Exit mobile version