ಬೆಂಗಳೂರು: ಲೂಸಿಯಾ ಪವನ್ (Lucia Pawan) ನಿರ್ದೇಶನದ ʻಧೂಮಂʼ (Dhoomam Film) ಸಿನಿಮಾ ಜೂನ್ 23ರಂದು ತೆರೆ ಕಂಡಿದೆ. ಮೊದಲ ದಿನ ಈ ಸಿನಿಮಾ ಎಷ್ಟು ಕಲೆಕ್ಷನ್ ಮಾಡಿದೆ ಎಂದು ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ. 150ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ರಾಜ್ಯಾದ್ಯಂತ ಕನ್ನಡ ವರ್ಷನ್ ರಿಲೀಸ್ ಆಗಿದೆ. ಬೆಂಗಳೂರಿನಲ್ಲಿ ಜೂನ್ 23ಕ್ಕಿಂತ ಶನಿವಾರ ಜೂನ್ 25ರಂದು ಶೋಗಳ ಸಂಖ್ಯೆ ಹೆಚ್ಚಾಗಿದೆ. ಆದಾಗ್ಯೂ ಟಿಕೆಟ್ ಬುಕ್ಕಿಂಗ್‌ಗೆ ಅಷ್ಟೇನು ಒಳ್ಳೆ ರೆಸ್ಪಾನ್ಸ್ ಸಿಕ್ಕಿಲ್ಲ. ಕನ್ನಡ ವರ್ಷನ್ 40 ರಿಂದ 50 ಲಕ್ಷ ರೂ. ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.
ಮಲಯಾಳಂ ಸಿನಿಮಾ ಇದಾಗಿದ್ದು, ಪವನ್ ಇದೇ ಮೊದಲ ಬಾರಿಗೆ ಆ ಭಾಷೆಯಲ್ಲಿ ಚಿತ್ರ ಮಾಡಿದ್ದಾರೆ. ಕನ್ನಡ ಮತ್ತು ಮಲಯಾಳಂ ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಿದ್ದು, ಕನ್ನಡದಲ್ಲಿ ಅಷ್ಟಾಗಿ ಪ್ರಚಾರ ಕೈಗೊಳ್ಳಲಿಲ್ಲ ಚಿತ್ರತಂಡ. ಮೊದಲ ದಿನ ಮಲಯಾಳಂ ವರ್ಷನ್ ಅಂದಾಜು 1.8 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಓರ್ಮ್ಯಾಕ್ಸ್ ಸಂಸ್ಥೆ ವರದಿ ಮಾಡಿದೆ. ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಯಲ್ಲಿ ಒಳ್ಳೆ ಕಥೆ ಇದೆ, ಒಳ್ಳೆ ಸಂದೇಶ ಕೂಡ ಇದೆ. ಆದರೆ ಪ್ರೇಕ್ಷಕರನ್ನು ಸೀ ಕೂರಿಸುವಲ್ಲಿ ಸಿನಿಮಾ ಸೋತಿದೆ. ಆದರೆ ಕೆಲವರಿಗೆ ಸಿನಿಮಾ ಬಹಳ ಇಷ್ಟವಾಗಿದೆ. ಮಲಯಾಳಂನಲ್ಲಿ ನಿರ್ಮಾಣವಾಗಿರುವ ‘ಧೂಮಂ’ ಸಿನಿಮಾ ಕನ್ನಡಕ್ಕೆ ಡಬ್ ಆಗಿ ಬಂದಿದೆ. ಕನ್ನಡದ ಡಬ್ಬಿಂಗ್ ಗುಣಮಟ್ಟ ಚೆನ್ನಾಗಿದೆ ಎಂದು ಪ್ರೇಕ್ಷಕರು ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: Dhoomam Movie: ಟ್ವೀಟ್ ಮೂಲಕ ಕೊನೆಗೂ ಕನ್ನಡಿಗರಿಗೆ ಸ್ಪಷ್ಟನೆ ಕೊಟ್ಟ ಹೊಂಬಾಳೆ ಫಿಲ್ಮ್ಸ್!
ಇದನ್ನೂ ಓದಿ: Dhoomam Movie: ಟ್ವೀಟ್ ಮೂಲಕ ಕೊನೆಗೂ ಕನ್ನಡಿಗರಿಗೆ ಸ್ಪಷ್ಟನೆ ಕೊಟ್ಟ ಹೊಂಬಾಳೆ ಫಿಲ್ಮ್ಸ್!
ಫಹಾದ್ ಫಾಸಿಲ್ ಮತ್ತು ಅಪರ್ಣಾ ಬಾಲಮುರಳಿ ಜತೆಗೆ ಅಚ್ಯುತ್ ಕುಮಾರ್, ಜಾಯ್ ಮ್ಯಾಥ್ಯೂ, ದೇವ್ ಮೋಹನ್, ಅನು ಮೋಹನ್ ಮುಂತಾದವರು ನಟಿಸುತ್ತಿರುವ ಈ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ಮತ್ತು ಪ್ರೀತಾ ಜಯರಾಮನ್ ಅವರ ಛಾಯಾಗ್ರಹಣವಿದೆ. ಈ ಸಿನಿಮಾ ಮೂಲಕ ಹೊಂಬಾಳೆ ಸಂಸ್ಥೆ ಮಾಲಿವುಡ್‌ಗೆ ಎಂಟ್ರಿ ಕೊಟ್ಟಿದೆ. ಕೆಲವರು ಇದು ಓಟಿಟಿ ಸಿನಿಮಾ ಎಂದು ಹೇಳುತ್ತಿದ್ದಾರೆ. ಶೀಘ್ರದಲ್ಲೇ ಸಿನಿಮಾ ಡಿಜಿಟಲ್ ಫ್ಲಾಟ್‌ಫಾರ್ಮ್‌ಗೆ ಬರುವ ನಿರೀಕ್ಷೆಯಿದೆ. ಅಮೆಜಾನ್ ಪ್ರೈಂ ವಿಡಿಯೊ ಚಿತ್ರದ ಡಿಜಿಟಲ್ ರೈಟ್ಸ್ ಮಾರಾಟವಾಗಿರುವುದಾಗಿ ಹೇಳಲಾಗುತ್ತಿದೆ.