ಬೆಂಗಳೂರು: ಲೂಸಿಯಾ ಪವನ್ (Lucia Pawan) ನಿರ್ದೇಶನದ ʻಧೂಮಂʼ (Dhoomam Movie) ಸಿನಿಮಾ ಜೂನ್ 23ರಂದು ತೆರೆ ಕಂಡಿತು. ಆದರೆ ಬೆಂಗಳೂರಿನಲ್ಲಿ ಬೆರಳೆಣಿಕೆ ಶೋಗಳಲ್ಲಿ ಮಾತ್ರ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಮಲಯಾಳಂ ಸಿನಿಮಾ ‘ಧೂಮಂ’ ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ವಿಫಲವಾಗಿದೆ. ಕನ್ನಡಕ್ಕೆ ಡಬ್ ಆಗಿ ರಿಲೀಸ್ ಆದರೂ ಪ್ರಯೋಜನವಾಗಲಿಲ್ಲ. ಇದೀಗ ಒಂದೇ ತಿಂಗಳಲ್ಲಿ ಸಿನಿಮಾ ಒಟಿಟಿಗೆ ಬರಲಿದೆ ಎಂದು ವರದಿಯಾಗಿದೆ.
ಮಲಯಾಳಂ ಸಿನಿಮಾ ಇದಾಗಿದ್ದು, ಪವನ್ ಇದೇ ಮೊದಲ ಬಾರಿಗೆ ಆ ಭಾಷೆಯಲ್ಲಿ ಚಿತ್ರ ಮಾಡಿದ್ದಾರೆ. ಕನ್ನಡ ಮತ್ತು ಮಲಯಾಳಂ ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಿದ್ದು, ಕನ್ನಡದಲ್ಲಿ ಅಷ್ಟಾಗಿ ಪ್ರಚಾರ ಕೈಗೊಳ್ಳಲಿಲ್ಲ ಚಿತ್ರತಂಡ. ‘ಧೂಮಂ’ ಕನ್ನಡ ಡಬ್ಬಿಂಗ್ ಗುಣಮಟ್ಟ ಚೆನ್ನಾಗಿತ್ತು. ಒಳ್ಳೆ ಕಥೆಯನ್ನೇ ಪವನ್ ಕುಮಾರ್ ಆರಿಸಿಕೊಂಡಿದ್ದರು. ಆದರೆ ಅದನ್ನು ಸ್ಟ್ರಿಪ್ಟ್ ಮಾಡಿ ಪರಿಣಾಮಕಾರಿಯಾಗಿ ನಿರೂಪಿಸುವಲ್ಲಿ ವಿಫಲವಾಗಿದ್ದರು ಎನ್ನಲಾಗಿದೆ.
ಅಮೆಜಾನ್ ಪ್ರೈಮ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಜುಲೈ 21ಕ್ಕೆ ಸಿನಿಮಾ ಡಿಜಿಟಲ್ ಫ್ಲಾಟ್‌ಪಾರ್ಮ್‌ನಲ್ಲಿ ಸಿಗುವ ಸಾಧ್ಯತೆಯಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಹೊರ ಬರಬೇಕಿದೆ.
ರಾಜ್ಯಾದ್ಯಂತ ‘ಧೂಮಂ’ ಕನ್ನಡ ವರ್ಷನ್ 150ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿತ್ತು. ಆದರೆ ಒಂದೇ ವಾರಕ್ಕೆ ಬಹುತೇಕ ಥಿಯೇಟರ್‌ಗಳಿಂದ ಸಿನಿಮಾ ತೆಗೆಯಲಾಗಿದೆ. ಸದ್ಯ ಬೆಂಗಳೂರಿನಲ್ಲಿ ಕೇವಲ 11 ಶೋಗಳಲ್ಲಿ ಮಾತ್ರ ಸಿನಿಮಾ ಪ್ರದರ್ಶನವಾಗುತ್ತಿದೆ. ಮಲಯಾಳಂ 3 ಹಾಗೂ ಕನ್ನಡದ 8 ಶೋ ಮಾತ್ರ ಸಿಕ್ಕಿದೆ.
‘ಧೂಮಂ’ ಚಿತ್ರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ಟಾಕ್ ಕ್ರಿಯೇಟ್ ಆಗಿತ್ತು. ಸಿನಿಮಾ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಸಿನಿಮಾ ಚೆನ್ನಾಗಿಲ್ಲ ಎಂದು ಬಹುತೇಕ ಸೋಷಿಯಲ್ ಮೀಡಿಯಾದಲ್ಲಿ ಬರೆಯಲು ಆರಂಭಿಸಿದರು.
ಇದನ್ನೂ ಓದಿ: Dhoomam Movie: ಫಹಾದ್ ನಟನೆಯ ʻಧೂಮಂʼ ಸಿನಿಮಾ ಫಸ್ಟ್ ಡೇ ಕಲೆಕ್ಷನ್ ಎಷ್ಟು?
ಫಹಾದ್ ಫಾಸಿಲ್ ಮತ್ತು ಅಪರ್ಣಾ ಬಾಲಮುರಳಿ ಜತೆಗೆ ಅಚ್ಯುತ್ ಕುಮಾರ್, ಜಾಯ್ ಮ್ಯಾಥ್ಯೂ, ದೇವ್ ಮೋಹನ್, ಅನು ಮೋಹನ್ ಮುಂತಾದವರು ನಟಿಸುತ್ತಿರುವ ಈ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ಮತ್ತು ಪ್ರೀತಾ ಜಯರಾಮನ್ ಅವರ ಛಾಯಾಗ್ರಹಣವಿದೆ.