Site icon Vistara News

Dhoomam Twitter Review: ‘ಧೂಮಂ’ ಸಿನಿಮಾ ಹೇಗಿದೆ? ನೆಟ್ಟಿಗರ ಟ್ವಿಟರ್‌ ವಿಮರ್ಶೆ

Dhoomam Film Review

ಬೆಂಗಳೂರು: ಫಹಾದ್​ ಫಾಸಿಲ್​ ಅಭಿನಯದ ‘ಧೂಮಂ’ ಜೂನ್‌ 23ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಮಲಯಾಳಂ ಚಿತ್ರವನ್ನು ಪವನ್ ಕುಮಾರ್ ನಿರ್ದೇಶಿಸಿದ್ದು, ಫಹಾದ್​ ಫಾಸಿಲ್ ನಾಯಕನಾಗಿ ನಟಿಸಿದ್ದಾರೆ. ಇದೀಗ ಸಿನಿಮಾ ಬಗ್ಗೆ (Dhoomam Twitter Review) ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸಿನಿಲೋಕ ಟ್ವೀಟ್‌ ಮಾಡಿ ʻʻಧೂಮಂ ಸ್ಲೋ-ಬರ್ನಿಂಗ್ ಥ್ರಿಲ್ಲರ್. ದ್ವಿತೀಯಾರ್ಧ ಸಿನಿಮಾ ಊಹಿಸಬಹುದು. ಪವನ್ ಕುಮಾರ್ ಚಿತ್ರಕಥೆ ಅದ್ಭುತ. ಫಹಾದ್ ಫಾಸಿಲ್ ಅತ್ಯುತ್ತಮ ಅಭಿನಯ ನೀಡಿದ್ದಾರೆ. ತೇಜಸ್ವಿಯವರ ಸಂಗೀತ ಅದ್ಭುತವಾಗಿದೆ. ರೇಟಿಂಗ್: 3.5/5ʼʼಎಂದು ಬರೆದುಕೊಂಡಿದೆ.

ಕೆಎಫ್‌ಐ ಟ್ವೀಟ್‌ ಮಾಡಿ ʻʻಕಥೆ, ಫಹಾದ್ ನಟನೆ, ಉತ್ತಮ ಬಿಜಿಎಂ, ಚಿತ್ರಕಥೆ, ನಿರ್ದೇಶನ ಅದ್ಭುತ. 2ನೇ ಭಾಗ ತುಂಬಾ ಬೋರಿಂಗ್, ಕ್ಲೈಮ್ಯಾಕ್ಸ್ ಅಪೂರ್ಣವಾಗಿತ್ತುʼʼ ಎಂದು ಬರೆದುಕೊಂಡಿದೆ.

ʻʻಲೂಸಿಯಾ ಮತ್ತು ಯುಟರ್ನ್ ನಂತರ ಮತ್ತೊಂದು ಬೆಸ್ಟ್‌ ಸಿನಿಮಾ. ಮಾನ್‌ಸ್ಟರ್ ಪವರ್‌ಹೌಸ್ ಪ್ರದರ್ಶಕ. ಈ ಸಿನಿಮಾ ಖಂಡಿತ ವಿಭಿನ್ನ ಅನುಭವʼʼ ಎಂದು ಬರೆದುಕೊಂಡಿದ್ದಾರೆ.

ಮತ್ತೊಬ್ಬರು ʻʻʻಧೂಮಂʼ ಯಾವುದೋ ಬೇರೆ ನಿರ್ದೇಶಕರದ್ದಾದರೆ ನಾನು ಇದನ್ನು ಯೋಗ್ಯ ಚಿತ್ರ ಎಂದು ಹೇಳುತ್ತಿದ್ದೆ. ಆದರೆ ಪವನ್ ಅವರಂಥವರಿಂದ ಬಂದಿರುವುದು ಸ್ವಲ್ಪ ನಿರಾಸೆ ತಂದಿದೆ. ಉತ್ತಮ ಆಲೋಚನೆ ಆದರೆ ಬರವಣಿಗೆಯು ತುಂಬಾ ಸಾಮಾನ್ಯವಾಗಿರುವುದರಿಂದ ಅಷ್ಟು ಉತ್ತಮವಾಗಿಲ್ಲʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Dhoomam Trailer: ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ ‘ಧೂಮಂ’ ಸಿನಿಮಾ ಟ್ರೇಲರ್ ಔಟ್‌!

ʻʻಧೂಮಂ ಮೊದಲಾರ್ಧವು ಸಖತ್ ಥ್ರಿಲ್ಲರ್‌. ದ್ವಿತೀಯಾರ್ಧ ಅಷ್ಟೇನೂ ಚೆನ್ನಾಗಿಲ್ಲ. ಬಳಿಕ ಜನ ಮಧ್ಯದಲ್ಲಿಯೇ ಹೊರಟುಹೋದರುʼʼಎಂದು ಬರೆದುಕೊಂಡಿದ್ದಾರೆ.

ಹೊಂಬಾಳೆ ಫಿಲ್ಮ್ಸ್‌, ‘ಧೂಮಂ’ ಚಿತ್ರವನ್ನು (Dhoomam Trailer) ನಿರ್ಮಿಸುವ ಮೂಲಕ (Dhoomam Movie) ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟಿದೆ. ಹೊಂಬಾಳೆ ಫಿಲ್ಮ್ಸ್‌, ‘ಧೂಮಂ’ ಚಿತ್ರವನ್ನು (Dhoomam Trailer) ನಿರ್ಮಿಸುವ ಮೂಲಕ (Dhoomam Movie) ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟಿದೆ. ಈ ಚಿತ್ರದಲ್ಲಿ ಫಹಾದ್ ಫಾಸಿಲ್, ಅಪರ್ಣಾ ಬಾಲಮುರಳಿ, ಅಚ್ಯುತ್ ಕುಮಾರ್, ರೋಶನ್ ಮ್ಯಾಥ್ಯೂ, ವಿನೀತ್ ರಾಧಾಕೃಷ್ಣನ್, ಅನು ಮೋಹನ್, ಜಾಯ್ ಮ್ಯಾಥ್ಯೂ, ನಂದು ಮುಂತಾದವರು ನಟಿಸಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ, ಸುರೇಶ್ ಅವರ ಸಂಕಲನ ಮತ್ತು ಪ್ರೀತಾ ಜಯರಾಮನ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

Exit mobile version