ಮುಂಬೈ: ಮಲಯಾಳಂನ ʼದೃಶ್ಯಂ 1′ ಮತ್ತು ʼದೃಶ್ಯಂ 2′ ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ಹೊಸ ಅಲೆ ಸೃಷ್ಟಿಸಿದಂತಹ ಸಿನಿಮಾಗಳು. ಕನ್ನಡ, ಹಿಂದಿಯಲ್ಲೂ ರಿಮೇಕ್ ಆಗಿರುವ ಈ ಸಿನಿಮಾ ಅಭಿಮಾನಿಗಳ ಮೆಚ್ಚುಗೆ ಪಡೆಯುವುದರ ಜತೆಯಲ್ಲಿ ಕೋಟ್ಯಂತರ ರೂಪಾಯಿ ಗಳಿಸಿದೆ ಕೂಡ. ಇದೀಗ ಈ ಸಿನಿಮಾ ಭಾರತದಿಂದಾಚೆ, ವಿದೇಶಗಳಲ್ಲಿಯೂ ಮಿಂಚುವುದಕ್ಕೆ ಸಿದ್ಧವಾಗಿದೆ.
ಇದನ್ನೂ ಓದಿ: Drishyam 2 | ʻಭೇಡಿಯʼಚಿತ್ರ ಹಿಂದಿಕ್ಕಿದ ದೃಶ್ಯಂ-2: 12ನೇ ದಿನ ಭರ್ಜರಿ ಕಲೆಕ್ಷನ್!
ಹೌದು. ಮೋಹನ್‌ಲಾಲ್ ಅಭಿನಯದ ದೃಶ್ಯಂ ಸಿನಿಮಾಗಳನ್ನು ಇಂಗ್ಲಿಷ್‌ನಲ್ಲಿ ರಿಮೇಕ್ ಮಾಡುವುದಕ್ಕೆ ಪನೊರಮಾ ಸ್ಟುಡಿಯೋ ಇಂಟರ್‌ನ್ಯಾಷನಲ್ ಲಿ. ಸಂಸ್ಥೆ ನಿರ್ಧರಿಸಿದೆ. ಹಾಗೆಯೇ ಚೀನಾ ಭಾಷೆಗೂ ರೀಮೇಕ್ ಮಾಡುವುದಕ್ಕೆ ಅನುಮತಿ ಸಿಕ್ಕಿದೆ. ಕೋರಿಯಾ ಹಾಗೂ ಜಪಾನಿ ಭಾಷೆಗಳಲ್ಲಿ ರಿಮೇಕ್ ಮಾಡುವುದಕ್ಕೆ ಅನುಮತಿ ಪಡೆಯುವುದಕ್ಕೂ ಮಾತುಕತೆ ನಡೆಯುತ್ತಿರುವುದಾಗಿ ಹೇಳಲಾಗಿದೆ.
ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿರುವ ದೃಶ್ಯಂ ಅನ್ನು ಕನ್ನಡದಲ್ಲಿ ರಿಮೇಕ್ ಮಾಡಲಾಗಿದ್ದು, ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಅದರಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಹಿಂದಿಯಲ್ಲಿ ದೃಶ್ಯಂ 2 ಸಿನಿಮಾದಲ್ಲಿ ಅಜಯ್ ದೇವಗನ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ 250 ಕೋಟಿ ರೂ.ಗೂ ಅಧಿಕ ಸಂಪಾದನೆ ಮಾಡಿದೆ.