Site icon Vistara News

Dhruva Sarja | 30 ಕೋಟಿ ವೀಕ್ಷಣೆ ಕಂಡು ದಾಖಲೆ ಬರೆದ ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ʻಖರಾಬು ಸಾಂಗ್‌ʼ!

Dhruva Sarja

ಬೆಂಗಳೂರು : ಸ್ಯಾಂಡಲ್‌ವುಡ್‌ ನಟ ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ (Dhruva Sarja) ಅಭಿನಯದ ನಾಲ್ಕನೇ ಸಿನಿಮಾ ʻಪೊಗರುʼ ಚಿತ್ರದ ಹಾಡು ʻಖರಾಬುʼ 30 ಕೋಟಿ ವೀಕ್ಷಣೆ ಪಡೆದು ದಾಖಲೆ ಸೃಷ್ಟಿಸಿದೆ. ನಂದ ಕಿಶೋರ್‌ ನಿರ್ದೇಶನದ ʻಪೊಗರುʼ ಸಿನಿಮಾದಲ್ಲಿ ಧ್ರುವ ಸರ್ಜಾ ಜತೆ ರಶ್ಮಿಕಾ ಮಂದಣ್ಣ ಮಿಂಚಿದ್ದರು. ಈ ಹಾಡಿಗೆ ಚಂದನ್‌ ಶೆಟ್ಟಿ ಸಂಗೀತ ನಿರ್ದೇಶಿಸಿ ಹಾಡಿದ್ದರು.

ಧ್ರುವ ಅವರು ಅಭಿನಯಿಸಿರುವ ʻʻಅದ್ಧೂರಿʼ, ʻಬಹದ್ದೂರ್‌, ಭರ್ಜರಿʼ ಸಿನಿಮಾಗಳ ಹಾಡುಗಳು ಈ ಹಿಂದೆ ಹಿಟ್‌ ಕಂಡಿದ್ದವು. ಒಂದಕ್ಕಿಂತ ಒಂದು ಸಿನಿಮಾಗಳ ಹಾಡುಗಳು ಅಭಿಮಾನಿಗಳ ಮನ ಗೆದ್ದಿದ್ದವು. ಆದರೆ ಇದೀಗ ʻಖರಾಬುʼ ಸಾಂಗ್‌ ನಂಬರ್‌ ಒನ್‌ ಸ್ಥಾನದಲ್ಲಿದೆ. ಬಹಳ ಒರಟನಾಗಿರುವ ಶಿವನಿಗೆ ಟೀಚರ್‌ ಗೀತಾ ಪಾಠ ಹೇಳುವ ಸಾಹಸ ಮಾಡುತ್ತಾರೆ. ಶಿವ ಟೀಚರ್‌ಗೆ ಬುದ್ಧಿ ಕಲಿಸುವಾಗ ಇರುವ ಹಾಡಿದು. ಇದೀಗ ಯುಟ್ಯೂಬ್‌ನಲ್ಲಿ 30 ಕೋಟಿ ವೀವ್ಸ್‌ ಪಡೆದುಕೊಂಡಿದೆ.

ಇದನ್ನೂ ಓದಿ | Puneeth Parva | ಅಪ್ಪುವಿನ ಮಾಸ್‌ ಡೈಲಾಗ್‌ ಹೇಳಿದ ಧ್ರುವ ಸರ್ಜಾ: ದುನಿಯಾ ವಿಜಯ್‌ ಭಾವುಕ

ಸದ್ಯ ಧ್ರುವ ಸರ್ಜಾ ಅವರು ʻಮಾರ್ಟಿನ್‌ʼ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಎ.ಪಿ ಅರ್ಜುನ್‌ ನಿರ್ದೇಶನದ ಈ ಸಿನಿಮಾ ಹೈ ಬಜೆಟ್‌ ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡಿದೆ.

ಇದನ್ನೂ ಓದಿ | ಮಂಚದಲ್ಲೇ ಸತ್ತ ಪ್ರಿಯಕರ, ಶವ ಎಸೆಯಲು ಸಹಕರಿಸಿದ ಗಂಡ | ಸಮಂತಾ ನಟನೆಯ ಸಿನಿಮಾ ಹೋಲುವ ಘಟನೆ

Exit mobile version