Site icon Vistara News

Dhruva Sarja: ಧ್ರುವ ಸರ್ಜಾ ಹೊಸ ಸಿನಿಮಾ ಅನೌನ್ಸ್‌; ಸಾಲು ಸಾಲು ಪೋಸ್ಟರ್‌ಗಳು ಔಟ್‌!

Dhruva Sarja Birthday Posters

ಬೆಂಗಳೂರು: ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ (Dhruva Sarja) ಅವರಿಗೆ ಅ.6 ಜನುಮದಿನದ ಸಂಭ್ರಮ . ಈ ವಿಶೇಷ ದಿನದಂದು ಸಾಲು ಸಾಲು ಪೋಸ್ಟರ್‌ಗಳು , ಸಿನಿಮಾ ಅನೌನ್ಸ್‌ ಅಲ್ಲದೇ ಹೊಸ ಲುಕ್‌ನಲ್ಲಿ ನಟ ಮಿಂಚುತ್ತಿದ್ದಾರೆ. ಇದೀಗ ನಿರ್ದೇಶಕ ಪ್ರೇಮ್‌ ಹಾಗೂ ಧ್ರುವ ಕಾಂಬಿನೇಶನ್‌ ಇರುವ ʻಕೆಡಿ’ ಸಿನಿಮಾ ಪೋಸ್ಟರ್‌ ಹಂಚಿಕೊಂಡಿದೆ. ಚಿತ್ರದ ಟೈಟಲ್ ಮೂಲಕ ಕ್ಯೂರಿಯಸ್ ಹುಟ್ಟು ಹಾಕಿರುವ ಈ ಸಿನಿಮಾ ಬಗ್ಗೆ ಫ್ಯಾನ್ಸ್ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ ಈ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ. ಜತೆಗೆ ಕ್ರೇಜಿ ಸ್ಟಾರ್‌ ರವಿಚಂದ್ರನ್ (Ravichandran) ಕೂಡ ಇದ್ದಾರೆ.

ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಸತ್ಯವತಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ರೆಟ್ರೊ ಲುಕ್‌ನಲ್ಲಿ ಶಿಲ್ಪಾ ಶೆಟ್ಟಿ ಮಿಂಚಿದ್ದು, ಚೆಂದದ ಸೀರೆಯುಟ್ಟು ಉದ್ದದ ಜಡೆ ಮುಂದಕ್ಕೆ ಬಿಟ್ಟು, ಕೂಲಿಂಗ್ ಗ್ಲ್ಯಾಸ್ ಧರಿಸಿ ರಾಯಲ್ ಆಗಿ ಕಾಣಿಸಿಕೊಂಡಿದ್ದರು.

ಈ ಹಿಂದೆ ಚಿತ್ರತಂಡ ರವಿಚಂದ್ರನ್ ಅವರ ಲುಕ್‌ ಹಂಚಿಕೊಂಡಿತ್ತು. ರವಿಚಂದ್ರನ್ ಅವರ ಸಿನಿಮಾ ಫಸ್ಟ್ ಲುಕ್‌ನಲ್ಲಿ ಹಣೆಯಲ್ಲಿ ವಿಭೂತಿ, ಕಪ್ಪು ಶರ್ಟ್ ಮತ್ತು ಪ್ಯಾಂಟ್‌ನಲ್ಲಿ ಖಡಕ್ ಆಗಿ ಕಾಣಿಸಿಕೊಂಡಿದ್ದರು. ತಮ್ಮ ಬಲಗಾಲಿನಲ್ಲಿ ಕಾರಿನ ಡೋರ್ ಓಪನ್ ಮಾಡಿ ಪೋಸ್ ಕೊಟ್ಟಿದ್ದರು. ಎಂದೂ ಕಾಣಿಸಿಕೊಂಡಿರದ ಲುಕ್‌ನಲ್ಲಿ ರವಿಚಂದ್ರನ್ ಮಿಂಚಿದ್ದರು. ಅಷ್ಟೇ ಅಲ್ಲದೇ ಧ್ರುವ ಸರ್ಜಾ ಅವರು 23 ದಿನಗಳಲ್ಲಿ 18 ಕೆಜಿ ತೂಕ ಇಳಿಸಿಕೊಂಡಿದ್ದರು.

ಈ ಚಿತ್ರದ ಕಥೆ 1970ರ ದಶಕದಲ್ಲಿ ಸಾಗಲಿದೆ ಎಂದು ಹೇಳಲಾಗುತ್ತಿದೆ. ಟೈಟಲ್‌ ಟೀಸರ್‌ನಲ್ಲಿ ಧ್ರುವ ಸರ್ಜಾ ಮಾಸ್‌ ಆಗಿ ಕಾಣಿಸಿಕೊಂಡಿದ್ದಾರೆ. ‘ಕೆವಿಎನ್​ ಪ್ರೊಡಕ್ಷನ್ಸ್’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಈ ಚಿತ್ರ ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಮೂಡಿ ಬರುತ್ತಿದೆ. ಟೀಸರ್‌ ಪಂಚ ಭಾಷೆಯಲ್ಲಿ ಬಿಡುಗಡೆಗೊಂಡಿರುವುದು ವಿಶೇಷ.

ಇದನ್ನೂ ಓದಿ: Dhruva Sarja: ದರ್ಶನ್‌ಗೆ ಕೇಳಲು ಪ್ರಶ್ನೆಗಳಿವೆ: ಬರ್ತ್‌ಡೇ ಸಂಭ್ರಮದ ನಡುವೆ ಮನಸ್ತಾಪ ಬಿಚ್ಚಿಟ್ಟ ಧ್ರುವ ಸರ್ಜಾ

ಮಾರ್ಟಿನ್‌ ಲುಕ್‌

ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ (Dhruva Sarja) ಅಭಿನಯದ ʻಮಾರ್ಟಿನ್‌ʼ ಸಿನಿಮಾ ಫೆಬ್ರವರಿ 23ರಂದು ಬಿಡುಗಡೆಯಾಗುತ್ತಿದೆ. ಅದ್ಧೂರಿ ಬಜೆಟ್‌ ಮತ್ತು ಮೇಕಿಂಗ್‌ನಿಂದಾಗಿ ಸದ್ದು ಮಾಡುತ್ತಿರುವ ಸಿನಿಮಾ ‘ಮಾರ್ಟಿನ್ (‘MARTIN’ TEASER), ಕ್ಲೈಮ್ಯಾಕ್ಸ್‌ನ ಆ್ಯಕ್ಷನ್‌ ದೃಶ್ಯಗಳಿಗೆ ರಾಮ್‌-ಲಕ್ಷ್ಮಣ್‌ ಮತ್ತು ರವಿವರ್ಮ ಸಾಹಸ ನಿರ್ದೇಶನ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಒಂದು ಸಿನಿಮಾದ ಕ್ಲೈಮ್ಯಾಕ್ಸ್‌ಗಾಗಿ ಮೂರು ಸಾಹಸ ನಿರ್ದೇಶಕರು ಕೆಲಸ ಮಾಡಿರುವುದು ಎಂದು ಹೇಳಲಾಗುತ್ತಿದೆ. ಇದೀಗ ಧ್ರುವ ಸರ್ಜಾ ಜನುಮದಿನಕ್ಕೆ ಹೊಸ ಪೋಸ್ಟರ್‌ ಹಂಚಿಕೊಂಡಿದೆ.

ಮಾರ್ಟಿನ್ ಚಿತ್ರಕ್ಕೆ ಮಣಿ ಶರ್ಮಾ ಅವರ ಸಂಗೀತ ಮತ್ತು ಸತ್ಯ ಹೆಗಡೆ ಅವರ ಛಾಯಾಗ್ರಹಣವಿದೆ. ಈ ಸಿನಿಮಾದಲ್ಲಿ ಧ್ರುವ ಸರ್ಜಾ ಅವರಿಗೆ ವೈಭವಿ ಶಾಂಡಿಲ್ಯ ನಾಯಕಿಯಾಗಿ ನಟಿಸಿದ್ದಾರೆ. ಮಾರ್ಟಿನ್‌ ಸಿನಿಮಾದಲ್ಲಿ ಕನ್ನಡದ ಕಲಾವಿದರ ಜತೆಗೆ ಹಿಂದಿ, ತೆಲುಗು, ತಮಿಳು ಚಿತ್ರರಂಗದ ಕಲಾವಿದರು ನಟಿಸಿದ್ದಾರೆ. ಅಚ್ಯುತ್‌ ಕುಮಾರ್‌, ನಿಕಿತನ್‌ ಧೀರ್‌, ನವಾಬ್‌ ಶಾ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿದ್ದಾರೆ. ‘ಧೀರನ್‌ ಅಧಿಕಾರಂ ಒಂಡ್ರು’ತಮಿಳು ಚಿತ್ರದ ಮೂಲಕ ಗಮನ ಸೆಳೆದಿದ್ದ ನಟ ರೋಹಿತ್‌ ಪಾಠಕ್‌ ಸಹ ‘ಮಾರ್ಟಿನ್‌’ನಲ್ಲಿ ಬಹು ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Dhruva Sarja: ಧ್ರುವ ಸರ್ಜಾ ಹುಟ್ಟುಹಬ್ಬದ ಸಿಡಿಪಿಗಳು ವೈರಲ್, ಫ್ಯಾನ್ಸ್‌ ಫುಲ್‌ ಖುಷ್‌!

ಹೊಸ ಸಿನಿಮಾ ಅನೌನ್ಸ್‌

ಧ್ರುವ ಸರ್ಜಾ ರೈನಾ ಎಂಬ ಸಿನಿಮಾವನ್ನು ಅನೌನ್ಸ್‌ ಮಾಡಿದ್ದಾರೆ. ಮಾಸ್ ಲುಕ್‌ನಲ್ಲಿ ಧ್ರುವ ಸರ್ಜಾ ಕಂಡಿದ್ದಾರೆ. ಶಿವಾರ್ಜುನ್ ನಿರ್ದೇಶನ ಹಾಗೂ ಉದಯ ಮೆಹ್ತಾ ನಿರ್ಮಾಣ ಈ ಚಿತ್ರಕ್ಕಿದೆ.

Exit mobile version